ಉಬರಡ್ಕ: ಕೊರೊನಾ ವೈರಸ್ ಹರಡುವುದು ತಡೆಯಲು ಭಾರತ ಲಾಕ್ಡೌನ್. ಈ ಸಂದರ್ಭ ನೆರವಿಗೆ ಬರುವ ಸಂಘಸಂಸ್ಥೆಗಳು ಹಲವಾರು. ಇದರಲ್ಲಿ ಸುಳ್ಯ ತಾಲೂಕಿನ ಉಬರಡ್ಕದ ಯುವಕ ಮಂಡಲದ ಕಾರ್ಯ ಈಗ ಮಾದರಿಯಾಗಿದೆ.
ವಿವಿಧ ಸಂದರ್ಭ ಸಮಾಜಮುಖಿ ಕಾರ್ಯಕ್ರಮವನ್ನು ಸಂಘಟಿಸಿ ಹಂತ ಹಂತವಾಗಿ ಬೆಳೆದ ಸಂಸ್ಥೆ ಯುವಕಮಂಡಲ(ರಿ). ಉಬರಡ್ಕಮಿತ್ತೂರು ಈ ಬಾರಿಯೂ ಸಮಾಜ ಸೇವೆಗೆ ಮುಂದೆ ಬಂದಿದೆ. ಸಂಘದ ಅಧ್ಯಕ್ಷ ವಿಜಯಕುಮಾರ್ ಉಬರಡ್ಕ, ಗೌರಾವಾದ್ಯಕ್ಷ ರಾಜೇಶ್ ರೈ ಉಬರಡ್ಕ, ಪ್ರಧಾನಕಾರ್ಯದರ್ಶಿ ನವೀನ್ ಮಾಣಿಬೆಟ್ಟು, ಕೋಶಾಧಿಕಾರಿ ಮನೋಹರ್ ಕಾಚೇಲು ಇವರು ಶ್ರೀನಿವಾಸ್ ಉಬರಡ್ಕ ಹಾಗೂ ಹರೀಶ್ ಉಬರಡ್ಕ ರವರ ಮಾರ್ಗದರ್ಶನದಲ್ಲಿ ಉಬರಡ್ಕ ಮಿತ್ತೂರು ಗ್ರಾಮದ ಪ್ರತಿ ಮನೆಗಳಿಗೆ ಬೇಕಾದ ಜೀವನಾವಶ್ಯಕ ವಸ್ತುಗಳಾದ ತರಕಾರಿ. ದಿನಸಿ ಸಾಮಾನುಗಳನ್ನು ಸರಕಾರದ ನಿರ್ದೇಶನದಂತೆ ಲಾಕ್ ಡೌನ್ ಮಾಡಿದ ಹಿನ್ನಲೆಯಲ್ಲಿ ವಿತರಣೆ ಮಾಡಲಾಯಿತು. ಪ್ರತಿಯೊಬ್ಬರು ಮನೆಯಿಂದ ಹೊರಗಡೆ ಬಾರದೆ ಮನೆಯಲ್ಲಿಯೇ ಇದ್ದು ನಮ್ಮೂರಿಗೆ ಕೊರೊನ ವೈರಸ್ ಬಾರದೆ ತಡೆಯುವ ಉದ್ದೇಶದಿಂದ ಈ ಕಾರ್ಯ ವನ್ನು ಮಾಡಲಾಯಿತು. ಈ ಕಾರ್ಯ ಊರಿನ ಜನರಿಗೆ ಉಪಕಾರವಾಯಿತು. ಈ ಕಾರ್ಯಕ್ಕೆ ಸೀತಾನಂದ ಬೇರ್ಪಡ್ಕ. ಚಂದ್ರಶೇಖರ ಅನುಗ್ರಹ, ಪ್ರಭಾಕರ ಅಮೈ . ರಾಧಾಕೃಷ್ಣ ಬೇರ್ಪಡ್ಕ ಸಹಕಾರ ನೀಡಿದರು.