ಕೊರೊನಾ ಲಾಕ್ಡೌನ್ | ಗ್ರಾಮೀಣ ಭಾಗದ ಈ ಯುವಕರ ಸೇವೆಗೊಂದು ಸಲಾಂ | ಮನೆ ಮನೆಗೆ ಔಷಧಿ ವಿತರಣೆಯ ಸೇವೆಯಲ್ಲಿದೆ ಈ ತಂಡ | ತಹಶೀಲ್ದಾರ್ ನೀಡಿದರು ಅಭಯ |

April 13, 2020
8:55 PM

ಸುಳ್ಯ: ಕೊರೊನಾ ಲಾಕ್ಡೌನ್ ಜನರಿಗೆ ಎಲ್ಲಾ ಪಾಠ ಕಲಿಸಿದೆ. ಮನೆಯಿಂದ ಹೊರಬಾರಲಾಗದ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ  ನಿಜವಾದ ಸೇವೆ ಮಾಡುವ ಮಂದಿ ಪ್ರಚಾರವಿಲ್ಲದೆ ಈ ಕಾರ್ಯವನ್ನು ಈಗಲೂ  ಮಾಡುತ್ತಿದ್ದಾರೆ. ಸಂಕಷ್ಟಗಳನ್ನು  ಎದುರಿಸಿಕೊಂಡು ಸಮಾಜಕ್ಕಾಗಿ, ತನ್ನೂರಿನ ಮಂದಿಗಾಗಿ ಕೆಲಸ ಮಾಡುವ ಮಂದಿಯನ್ನು  ಸಮಾಜ   ಗುರುತಿಸಿಬೇಕಾದ್ದು ಕರ್ತವ್ಯ. ಸೇವೆ ಎಂಬ ಯಜ್ಞದಲ್ಲಿ  ತೊಡಗಿಸಿಕೊಂಡ ನಿಜವಾದ ಕಾರ್ಯಕರ್ತರಿಗೆ ಬೆಂಬಲವಾಗಬೇಕಾದ್ದು ಸಮಾಜದ ಕರ್ತವ್ಯವೂ ಹೌದು.

Advertisement
Advertisement

ಈಗ ಹೇಳಲು ಹೊರಟಿರುವುದು  ಸುಳ್ಯ ತಾಲೂಕಿನ ಗ್ರಾಮೀಣ ಭಾಗವಾದ ಕೊಲ್ಲಮೊಗ್ರದ 3 ಜನ ಯುವಕರ ತಂಡ 6 ಗ್ರಾಮಗಳ ಜನರಿಗೆ ಅಗತ್ಯ ವಸ್ತುಗಳಲ್ಲಿ ಒಂದಾಗಿ ಔಷಧಿ ತಂದು ಕೊಡುವ ಕೆಲಸ ಮಾಡುತ್ತಿದೆ. ಯಾವುದೇ ಶುಲ್ಕ ಪಡೆಯದೆ ಮನೆ ಮನೆಗೆ ತೆರಳಿ ಔಷಧಿಯನ್ನು ನೀಡುವ ಕಾರ್ಯ  ಕಳೆದ 15 ದಿನಗಳಿಂದ ಮಾಡುತ್ತಿದೆ. ಈ ತಂಡದಲ್ಲಿ  ಉದಯ ಶಿವಾಲ , ತಾಪಂ ಸದಸ್ಯ  ಉದಯ  ಕೊಪ್ಪಡ್ಕ  ಹಾಗೂ ಜಯಪ್ರಕಾಶ್ ಕಜ್ಜೋಡಿ ಈ ಸೇವೆಯಲ್ಲಿ  ತೊಡಗಿಕೊಂಡವರು.

ಉದಯ ಶಿವಾಲ

 

ಉದಯ ಕೊಪ್ಪಡ್ಕ

 

ಜಯಪ್ರಕಾಶ್ ಕಜ್ಜೋಡಿ

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡಿ ಅಗತ್ಯವಾಗಿ  ಔಷಧಿ  ಬೇಕಾಗಿರುವ ಮಂದಿ ಚೀಟಿ ಸಹಿತ ಹಣ ನೀಡುತ್ತಾರೆ. ಅದನ್ನು  ಸಂಗ್ರಹಿಸಿ ಸುಳ್ಯ ಅಥವಾ ಪುತ್ತೂರಿಗೆ ತೆರಳಿ ಔಷಧಿ ತಂದು ಸಂಜೆ ಮನೆ ಮನೆಗೆ ನೀಡುತ್ತಾರೆ. ಕಳೆದ 15 ದಿನಗಳಿಂದ ಕೆಲಸ ಮಾಡುತ್ತಿದ್ದಾರೆ.  ಕೊಲ್ಲಮೊಗ್ರ ಸಹಿತ ಆಸುಪಾಸಿನ 3 ಗ್ರಾಮಗಳಲ್ಲಿ ಈ ಸೇವೆ ಆರಂಭ ಮಾಡಿ ಇಂದು 6 ಗ್ರಾಮದ ಜನರಿಗೆ ತಮ್ಮ ಸೇವೆ ನೀಡುತ್ತಿದ್ದಾರೆ.ಈಗ ಕೆಲವೊಂದು ಜೌಷಧಗಳು ಪೂರೈಕೆ ಇಲ್ಲದ ಕಾರಣ ಸಮಸ್ಯೆ  ಉಂಟಾಗಿದೆ. ಈ ಹಿನ್ನಲೆಯಲ್ಲಿ ಈ ತಂಡ ಬುಧವಾರ  ಮಂಗಳೂರು ತೆರಳಿ  ಜೌಷಧ ತರುವ ಬಗ್ಗೆಯೂ ಸಿದ್ಧತೆ ನಡೆಸಿದೆ. ಇದೇ ಸಂದರ್ಭ ಈ ಮಾಹಿತಿ ಪಡೆದ ಸುಳ್ಯ ತಹಶೀಲ್ದಾರ್ ಅನಂತ ಶಂಕರ್ ಅವರು ತಂಡದ ಉದಯ ಶಿವಾಲ ಅವರ ಜೊತೆ ಮಾತುಕತೆ ನಡೆಸಿ ಅಭಿನಂದನೆ ಸಲ್ಲಿಸಿದ್ದಾರೆ. ಇದರ ಜೊತೆ ಸುಳ್ಯ ಹಾಗೂ ಪುತ್ತೂರು ಶಾಸಕರ ಜೊತೆಯೂ ಮಾತುಕತೆ ನಡೆಸಿ ಅನುಮತಿ ಬಗ್ಗೆ ಮಾತನಾಡಿದ್ದಾರೆ.

Advertisement

ಲಾಕ್ಡೌನ್ ಇರುವ ಸಂದರ್ಭ ವಾಹನಗಳ ಓಡಾಟಕ್ಕೆ ಮಿತಿ ಇದೆ. ಈ ತಂಡದ ಸದಸ್ಯರು ಈ ಬಗ್ಗೆ ಪೊಲೀಸರ ಗಮನಕ್ಕೆ ತಂದು ಅಗತ್ಯ ಔಷಧಿ ಸರಬರಾಜು ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಇದೊಂದು ಉತ್ತಮವಾದ ಸೇವೆಯಾಗಿದೆ.

ಈಗಾಗಲೇ 170 ಕ್ಕೂ ಅಧಿಕ  ಮನೆಗಳಿಗೆ ಔಷಧಿ ತಲುಪಿಸಿದ್ದಾರೆ.  ಸುಮಾರು 35 ಸಾವಿರ ರೂಪಾಯಿಯಷ್ಟು ಮೌಲ್ಯದ ಔಷಧಿ ತರಲಾಗಿದೆ ಎನ್ನುತ್ತಾರೆ ಉದಯ ಶಿವಾಲ. ಕೆಲವು ಔಷಧಿಗಳು ಸುಳ್ಯ, ಪುತ್ತೂರಿನಲ್ಲಿ ಲಭ್ಯವಿಲ್ಲ.ಅಂತಹವರಿಗೆ ಕಷ್ಟವಾಗುತ್ತಿದೆ. ಇದಕ್ಕಾಗಿ ಮಂಗಳೂರಿಗೆ ಅವಕಾಶ ಕೇಳಿದ್ದೇವೆ ಎನ್ನುತ್ತಾರೆ ಅವರು. ಬೆಳಗ್ಗೆ ಬೇಗನೆ ಹೊರಟು ಮಧ್ಯಾಹ್ನ 2 ಗಂಟೆ ಒಳಗಡೆ ಕೊಲ್ಲಮೊಗ್ರ ತಲುಪುವ ಗುರಿ ಇರಿಸಿದ್ದೇವೆ. ಆ ಬಳಿಕ ಮನೆ ಮನೆಗೆ ವಿತರಣೆ ಮಾಡುತ್ತೇವೆ. ಇದೊಂದು ಸೇವೆ ಎನ್ನುತ್ತಾರೆ ಉದಯ.

ಕೆಲವೊಂದು ಕಾಲನಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿ ಅಗತ್ಯ ಜೌಷಧ ಬೇಕಾದವರನ್ನು ಸಂಪರ್ಕಿಸಿ ಅವರ ಮನೆಗೆ ತೆರಳಿ ಜೌಷಧ ಚೀಟಿಯನ್ನೂ ಪಡೆದುಕೊಂಡು ತೆರಳಿ ಸಂಜೆ ಪುನಃ ಅವರ ಮನೆಗೆ ಜೌಷಧ ತಲುಪಿಸಲಾಗುವುದು. ಯಾವುದೇ ಶುಲ್ಕವನ್ನೂ ಪಡೆಯದೆ
ಕರೆ ಮಾಡಿದ ತಕ್ಷಣ ಅವರ ಮನೆಗೆ ತೆರಳುತ್ತೇವೆ ಎನ್ನುತ್ತಾರೆ ಉದಯ. ನಮ್ಮ ಕಾರ್ಯಕ್ಕೆ ನೆರವಾದ, ಶ್ಲಾಘಿಸಿದ ತಹಶೀಲ್ದಾರ್ ಅವರಿಗೆ ಧನ್ಯವಾದ ತಿಳಿಸುತ್ತೇವೆ ಎನ್ನುತ್ತಾರೆ ಉದಯ ಶಿವಾಲ.

ಈ ಬಗ್ಗೆ ಸಂಪರ್ಕಕ್ಕೆ , 

Advertisement

ಉದಯ ಶಿವಾಲ :  9483904542

ಉದಯ ಕೊಪ್ಪಡ್ಕ (ತಾಪಂ ಸದಸ್ಯ):  9449366163

ಜಯಪ್ರಕಾಶ್ ಕಜ್ಜೋಡಿ : 9449751757

( ಬೆಳಗ್ಗೆ  6 ಗಂಟೆ ಒಳಗೆ ಜೌಷಧಿ ಚೀಟಿಗಳ ಬಗ್ಗೆ ಮಾಹಿತಿ ನೀಡಬೇಕು)

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕರೆಂಟ್ ಹೊದ ಕೂಡ್ಲೆ ಬೊಬ್ಬೆ ಹೊಡೆಯೋದು ಯಾಕೆ..!?
May 25, 2025
9:29 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಮಳೆ Update | ಕರಾವಳಿ ಜಿಲ್ಲೆಯಲ್ಲಿ ವ್ಯಾಪಕ ಮಳೆ | ಹಲವು ಕಡೆ 100 ಮಿಮೀಗಿಂತಲೂ ಅಧಿಕ ಮಳೆ | ಉಡುಪಿಯಲ್ಲಿ 164 ಮಿಮೀ ಮಳೆ |
May 25, 2025
9:07 AM
by: ದ ರೂರಲ್ ಮಿರರ್.ಕಾಂ
ಬಿತ್ತನೆ ಬೀಜ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ
May 25, 2025
6:13 AM
by: The Rural Mirror ಸುದ್ದಿಜಾಲ
ರೈತರು ಉತ್ತಮ ಇಳುವರಿ ಪಡೆಯಲು ಸಂಯುಕ್ತ ರಸಗೊಬ್ಬರ ಬಳಸುವಂತೆ ಕೃಷಿ ಇಲಾಖೆ ಸೂಚನೆ
May 25, 2025
6:05 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group