ಸುಳ್ಯ: ಕಳೆದ 3 ದಿನಗಳಿಂದ ಸಂಪೂರ್ಣ ಬಂದ್ ಬಳಿಕ ಮಂಗಳವಾರ ದಿನಸಿ ಖರೀದಿಗೆ ಅವಕಾಶವನ್ನು ಜಿಲ್ಲಾಡಳಿತವು ಬೆಳಗ್ಗೆ 6 ರಿಂದ ಸಂಜೆ 3 ಗಂಟೆಯವರೆಗೆ ನೀಡಿದೆ. ಹೀಗಾಗಿ ಬೆಳಗ್ಗೆ 6 ಗಂಟೆಯಿಂದಲೇ ಹಾಲು, ದಿನಸಿ ಖರೀದಿಗೆ ಜನರು ಆಗಮಿಸಿ ಸಂಪೂರ್ಣ ರಶ್ ಉಂಟಾಗಿತ್ತು. ಸುಳ್ಯ ಪೇಟೆಯಲ್ಲಿ ಬೆಳಗ್ಗಿನಿಂದಲೇ ಜನ ಇದ್ದು ಗ್ರಾಮೀಣ ಭಾಗಗಳಾದ ಸಂಪಾಜೆ, ಕಲ್ಲುಗುಂಡಿ, ಬೆಳ್ಳಾರೆ, ಪಂಜ, ಗುತ್ತಿಗಾರು, ಬಳ್ಪ ಸೇರಿದಂತೆ ತೀರಾ ಗ್ರಾಮೀಣ ಭಾಗದವರೆಗೂ ಇದೇ ಪರಿಸ್ಥಿತಿ ಕಂಡುಬಂದಿದೆ.
ದಿನಸಿ ಹಾಗೂ ಅಗತ್ಯ ವಸ್ತು ಖರೀದಿಗೆ ಜನರು ನಿಂತಿದ್ದಾರೆ. ಈ ಸಂದರ್ಭ ಸಾಮಾಜಿಕ ಅಂತರ ಕನಿಷ್ಠ 3 ಅಡಿ ಹಾಗೂ ಮುಖಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ. ಈ ಬಗ್ಗೆ ಸ್ಥಳೀಯ ಆಡಳಿತ ಎಚ್ಚರಿಕೆ ವಹಿಸುತ್ತಿದೆ.
ಗ್ರಾಮಿಣ ಭಾಗದಲ್ಲಿ ಸಾಮಾಜಿಕ ಅಂತರ ಕನಿಷ್ಠ 3 ಅಡಿ ಹಾಗೂ ಮುಖಕ್ಕೆ ಮಾಸ್ಕ್ ಧರಿಸುವುದು ಕಂಡುಬಾರದೇ ಇದ್ದರೆ ಸ್ಥಳೀಯರು ಅಥವಾ ಅಂಗಡಿಯವರೇ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಡಳಿತ ಸ್ಪಷ್ಟವಾಗಿ ಹೇಳಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel