ಸುಳ್ಯ: ಕೊರೊನಾ ವೈರಸ್ ಹರಡುವುದು ತಡೆಯಲು ಲಾಕ್ಡೌನ್ ಮಾಡಲಾಗಿದೆ. ಎರಡು ದಿನಗಳಿಂದ ಸಂಪೂರ್ಣ ಬಂದ್ ಮಾಡಲಾಗಿತ್ತು.ಇದೀಗ ಮಂಗಳವಾರ ಬೆಳಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಜಿಲ್ಲೆಯಾದ್ಯಂತ ದಿನಸಿ ಖರೀದಿಗೆ ಜಿಲ್ಲಾಡಳಿತದಿಂದ ಅವಕಾಶ ನೀಡಲಾಗಿದೆ. ಆದರೆ ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಕಾಯ್ದುಕೊಳ್ಳಲು ಮನವಿ ಮಾಡಲಾಗಿದೆ.
ಸುಳ್ಯದಲ್ಲಿ ಸಹಾಯಕ ಕಮೀಶನರ್ ನೇತೃತ್ವದಲ್ಲಿ ಸಭೆಯಲ್ಲಿ ಈ ಬಗ್ಗೆ ಬೆಳಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ದಿನಸಿ ಖರೀದಿಗೆ ಅವಕಾಶ ನೀಡಲಾಗುತ್ತಿದೆ. ಆದರೆ ಅಗತ್ಯಕ್ಕಿಂತ ಹೆಚ್ಚಿನ ದಿನಸಿ ವಸ್ತುಗಳ ಖರೀದಿ ಮಾಡಬೇಡಿ , ಆಹಾರ ಸಾಮಾಗ್ರಿಗಳಿಗೆ ಕೊರತೆಯಾಗದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದೆ ಎಂದು ಸಹಾಯಕ ಕಮೀಶನರ್ ಡಾ.ಯತೀಶ್ ಉಳ್ಳಾಲ ತಿಳಿಸಿದ್ದಾರೆ.
ಇದೇ ವೇಳೆ ಆಹಾರ , ತರಕಾರಿಯನ್ನು ವಿಪರೀತ ಧಾರಣೆಗೆ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಅನಗತ್ಯವಾಗಿ ದರ ಏರಿಕೆ ಮಾಡಿದರೆ ಅಂತಹವರು ಲೈಸನ್ಸ್ ರದ್ದು ಮಾಡಲು ಕೂಡಾ ಯೋಚನೆ ಮಾಡಲಾಗುತ್ತದೆ ಎಂದು ಇದೇ ವೇಳೆ ಸಹಾಯಕ ಕಮೀಶನರ್ ಡಾ.ಯತೀಶ್ ಉಳ್ಳಾಲ ತಿಳಿಸಿದ್ದಾರೆ.