Advertisement
ವಿಶೇಷ ವರದಿಗಳು

ಕೊರೊನಾ ವೈರಸ್ | ಇದು ಕೊನೆಯ ಸಾಂಕ್ರಾಮಿಕವಲ್ಲ | ಚೀನಾದಲ್ಲಿ ‘ಸಾಂಕ್ರಾಮಿಕ ಸಂಭಾವ್ಯತೆ’ ಹೊಂದಿರುವ ವೈರಸ್ ಪತ್ತೆ |

Share

ಕೊರೋನಾ ವೈರಸ್ ಜಗತ್ತಿಗೆ ಹರಡಿದ ಬಳಿಕ ವಿವಿಧ ದೇಶಗಳಲ್ಲಿ ವೈರಸ್ ಗಳ ಬಗ್ಗೆ ಅಧ್ಯಯನ ಆರಂಭವಾಗಿದೆ. ಸದ್ಯ ಚೀನಾದಲ್ಲಿ ‘ಸಾಂಕ್ರಾಮಿಕ ಸಂಭಾವ್ಯತೆ’  ಹೊಂದಿರುವ  ವೈರಸ್ ಗಳನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಈ ವೈರಸ್  ಮೂಲಕ ಹೊಸ ಜ್ವರ ಹರಡುವ ಬಗ್ಗೆ ಚೀನಾದಲ್ಲಿ ವಿಜ್ಞಾನಿಗಳು ಗುರುತಿಸಿದ್ದಾರೆ. ಹೀಗಾಗಿ ಕೊರೋನಾ ವೈರಸ್  ಕೊನೆಯ ಸಾಂಕ್ರಾಮಿಕವಲ್ಲ ಎಂದೂ ಎಚ್ಚರಿಸಿದ್ದಾರೆ.

ಈ ಹೊಸ ವೈರಸ್ ಕೊರೋನಾದಿಂದಲೂ ಹೆಚ್ಚು ಪರಿಣಾಮಕಾರಿಯಾಗಿದೆ.  ಈಗಾಗಲೇ ಹಂದಿಗಳಲ್ಲಿ  ಕಂಡುಬಂದಿರುವ ಈ ವೈರಸ್  ಮನುಷ್ಯರಿಗೆ ಸೋಂಕು ಹರಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಈಗಾಗಲೇ ಒಂದಷ್ಟು ವೈರಸ್ ಹಂದಿಗಳಲ್ಲಿ ಇದ್ದು ಈಗ  ಮತ್ತಷ್ಟು  ರೂಪಾಂತರಗೊಳ್ಳುವುದರಿಂದ ವ್ಯಕ್ತಿಗೆ ಸುಲಭವಾಗಿ ಹರಡಬಹುದು ಮತ್ತು ಜಾಗತಿಕವಾಗಿಯೂ ಪ್ರಸಾರವಾಗಬಹುದು  ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ತಕ್ಷಣವಾಗಿ ಹರಡಲಾರದು, ಭವಿಷ್ಯದಲ್ಲಿ ಈ ಆತಂಕ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ, ಜಗತ್ತು ಹಂದಿ ಜ್ವರವನ್ನು ಎದುರಿಸಿತ್ತು, ಈಗ ಚೀನಾ ಗುರುತಿಸಿರುವ ವೈರಸ್ ಅದೇ ಮಾದರಿಯಲ್ಲಿ ಪ್ರಭಾವ ಹೆಚ್ಚಾಗಿರುವ ವೈರಸ್ ಆಗಿದೆ. ಚೀನಾದ  2011 ರಿಂದ 2018 ರವರೆಗಿನ ಅಂಕಿಅಂಶಗಳ ಪ್ರಕಾರ  ಹಂದಿ ಉದ್ಯಮ ಹಾಗೂ ಅದೇ ಮಾದರಿಯ ಉದ್ಯಮದಲ್ಲಿ ತೊಡಗಿಸಿಕೊಂಡ ಜನರಲ್ಲಿಯೇ ಹೊಸದಾದ ಸೋಂಕಿನ ಪುರಾವೆಗಳು ಕಂಡುಬಂದಿವೆ ಎಂದು ವಿಜ್ಞಾನಿಗಳ ಅಧ್ಯಯನ ತಿಳಿಸಿದೆ. ಈಗ ಈ ಹೊಸ ವೈರಸ್ ತಕ್ಷಣ  ಸಮಸ್ಯೆಯಲ್ಲವಾದರೂ,  ಅದನ್ನು ನಿರ್ಲಕ್ಷಿಸಬಾರದು ಎಂದು ಎಚ್ಚರಿಕೆ ವಿಜ್ಞಾನಿಗಳು ನೀಡಿದ್ದಾರೆ.

ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಪಶುವೈದ್ಯಕೀಯ ಔಷಧ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಜೇಮ್ಸ್ ವುಡ್, ಅವರು ಹೇಳುವ ಪ್ರಕಾರ ಪ್ರಾಣಿಗಳಿಂದ ಬರುವ ವೈರಸ್ ವೇಗವಾಗಿ ಹಬ್ಬುತ್ತದೆ. ಕೃಷಿ ಹಾಗೂ ಇದಕ್ಕೆ ಪೂರಕವಾದ ಪ್ರಾಣಿಗಳಿಗೆ  ಮನುಷ್ಯರಿಗೆ ಹೆಚ್ಚಿನ ಸಂಪರ್ಕವಿದೆ. ಹೀಗಾಗಿ ಸಾಂಕ್ರಾಮಿಕ ವೈರಸ್‌ಗಳು ಬೇಗನೆ ಹರಡುತ್ತವೆ.

ವನ್ಯಜೀವಿಗಳಿಂದ ಬರುವ ರೋಗಗಳು ಕೂಡಾ ಬೇಗನೆ ಮನುಷ್ಯರಿಗೆ ಹರಡುತ್ತವೆ. ಕಳೆದ 20 ವರ್ಷಗಳಲ್ಲಿ, 6 ವಿವಿಧ ವೈರಸ್ ಜ್ವರಗಳು ಕಂಗೆಡಿಸಿವೆ. ಅದರಲ್ಲಿ ಪ್ರಮುಖವಾಗಿ ಎಬೋಲಾ, ಎಚ್1ಎನ್1, ನಿಫಾ ಮೊದಲಾದವುಗಳು ಸೇರಿದೆ. ಹೀಗಾಗಿ ಮುಂದೆಯೂ ಇರುವ ಅಪಾಯವನ್ನು ಜಾಗ್ರತೆಯಿಂದ ನಿಭಾಯಿಸಬೇಕಿದೆ. ವನ್ಯಜೀವಿ, ಪ್ರಾಣಿಗಳ ಮೂಲಕ ಬರುವ ರೋಗವನ್ನು ಹೆಚ್ಚು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಸಂಶೋಧಕರು ಒತ್ತಿ ಹೇಳಿದ್ದಾರೆ. ಸದ್ಯಕ್ಕೆ ಮನುಷ್ಯರಲ್ಲಿ ಹೊಸ ರೋಗಗಳು ವರ್ಷಕ್ಕೆ 3-4 ಬಾರಿ ಪಾಪ್-ಅಪ್ ಆಗುತ್ತವೆ. ಮುಂದೆ ಇದೇ ಅಪಾಯವಿದೆ.

ಕಾರಣ ಏನು :ಈಚೆಗೆ ಇಂತಹ ವೈರಸ್ ಹರಡಲು ಇರುವ ಕಾರಣಗಳ ಬಗ್ಗೆಯೂ ಸಲಹೆ ನೀಡಿದ ವಿಜ್ಞಾನಿಗಳ ತಂಡ, ಪರಿಸರದ  ಜೀವವೈವಿಧ್ಯತೆಯ ಅಸಮತೋಲನ, ಪರಿಸರದ ಏರುಪೇರು, ಪರಿಸರದಲ್ಲಿ ಮಾನವನ ವಿಪರೀತ ಹಸ್ತಕ್ಷೇಪ ಪ್ರಮುಖ ಕಾರಣವಾಗಿದೆ. ಹೀಗಾಗಿ  ಕೆಲವು ವೈರಸ್‌ಗಳು, ಬ್ಯಾಕ್ಟೀರಿಯಾಗಳು  ಜನರಲ್ಲಿ ಹರಡುವ ಸಾಧ್ಯತೆಯನ್ನು ಹೆಚ್ಚಿಸುತ್ತಿದೆ. ಇದಕ್ಕೆ ಉದಾಹರಣೆಯಾಗಿ ಮಲೇಷ್ಯಾದಲ್ಲಿ 1999 ರಲ್ಲಿ ನಿಫಾ ವೈರಸ್‌ ತಲ್ಲಣ ಉಂಟು ಮಾಡಿತು. ಇದಕ್ಕೆ ಕಾರಣ ಹುಡುಕಿದಾಗ, ಬಾವಲಿ ಹಾಗೂ ಹಂದಿಗಳು ಕಂಡುಬಂದವು. ಇಲ್ಲಿ ವೈರಸ್ ಪೀಡಿತ ಬಾವಲಿಗಳು ಹಣ್ಣನ್ನು  ಮರದಲ್ಲಿ  ಅರ್ಧ ತಿಂದು ಕೆಳಗೆ ಬೀಳಿಸಿದವು. ಈ ವೈರಸ್ ಹೊಂದಿದ ಬಿದ್ದಿರುವ ಹಣ್ಣನ್ನು  ಹಂದಿಗಳು ತಿಂದವು ಹಾಗೂ ಅವುಗಳ ಎಂಜಲ ಮೇಲೆ ಬಿದ್ದವು. ಈ ವೈರಸ್ ಸೋಂಕಿತ ಹಂದಿಯ ಸಾಕಾಣೆ  ಕೆಲಸ ಮಾಡಿದ 250 ಕ್ಕೂ ಹೆಚ್ಚು ಜನರು ಈ ವೈರಸ್ ಸೋಂಕಿಗೆ ಒಳಗಾಗಿ ಕನಿಷ್ಟ 100 ಜನರು ಮೃತಪಟ್ಟರು ಎಂದು ವಿಜ್ಞಾನಿಗಳ ತಂಡ ವಿಶ್ಲೇಷಣೆ ಮಾಡಿದೆ.  ಈಗ ಪರಿಸರದ ಮೇಲಿನ ಮಾನವ ಹಸ್ತಕ್ಷೇಪ ಹೆಚ್ಚಾಗಿರುವ ಕಾರಣದಿಂದ ಮುಂದೆ ಕಾಡುಗಳ ಅಂಚಿನಲ್ಲಿರುವ ಹೊಲಗಳು, ಪ್ರಾಣಿಗಳ ಮೂಲಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ. ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಲಿದೆ. ಹೀಗಾಗಿ ಎಚ್ಚರಿಕೆ ಅಗತ್ಯವಾಗಿದೆ ಎಂದು ಅಧ್ಯಯನ ತಿಳಿಸಿದೆ.

ಪರಿಹಾರ ಹೇಗೆ ?: ಮುಂದೆ ಸಾದ್ಯವಾದಷ್ಟು ಎಚ್ಚರಿಕೆ ಅಗತ್ಯವಾಗಿದೆ. ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಪರಿಸರದ ಜೊತೆ, ಜೀವವೈವಿಧ್ಯತೆ ಕಡೆಗೆ ಹೆಚ್ಚು ಗಮನಹರಿಸಬೇಕಿದೆ ಎಂದು ವಿಜ್ಞಾನಿಗಳ ತಂಡ ಎಚ್ಚರಿಕೆ ನೀಡಿದೆ. ನೈಸರ್ಗಿಕ ಪ್ರಪಂಚದೊಂದಿಗಿನ ನಮ್ಮ ಪರಸ್ಪರ ಹೊಂದಾಣಿಕೆ ಅಗತ್ಯವಾಗಿದೆ. ನಾವು ಇದನ್ನು ಹೇಗೆ ಅರ್ಥಮಾಡಿಕೊಳ್ಳುತ್ತೇವೆ ಮತ್ತು ಅದಕ್ಕೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಮೇಲೆ ಪ್ರಪಂಚ ಉಳಿಯುತ್ತದೆ ಎಂದು ವಿಜ್ಞಾನಿಗಳ ತಂಡ ಹೇಳಿದೆ. ಈಗಿನ ಕೊರೋನಾ ಬಿಕ್ಕಟ್ಟು ಇದಕ್ಕೆಲ್ಲಾ ಪಾಠವಾಗಬೇಕು, ಭವಿಷ್ಯದ ವೈರಸ್ ಹರಡುವುದು  ತಡೆಗೆ ಈಗಲೇ ಪ್ರಪಂಚವು ಸಿದ್ಧವಾಗಬೇಕು ಎಂದೂ ತಂಡ ತನ್ನ ವರದಿಯಲ್ಲಿ  ಹೇಳಿದೆ.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ತೋಟಗಾರಿಕಾ ಬೆಳೆಗಾರರ ಪರ ಲೋಕಸಭೆಯಲ್ಲಿ ಧ್ವನಿ – ಹವಾಮಾನ ಆಧಾರಿತ ಬೆಳೆ ವಿಮೆ ಮರುಪರಿಷ್ಕರಣೆಗೆ ಕ್ಯಾ. ಚೌಟ ಒತ್ತಾಯ

ಅಡಿಕೆ, ತೆಂಗು, ಕೋಕೋ ಮತ್ತು ಸಾಂಬಾರು ಬೆಳೆಗಳಿಗೆ ಸ್ಥಳೀಯ ಹವಾಮಾನದಿಂದ ಉಂಟಾಗುವ ನೈಜ…

1 hour ago

ಅಡಿಕೆ ಅಕ್ರಮ ಆಮದು ಕಡಿವಾಣ – ರೋಸ್ಟೆಡ್ ಅಡಿಕೆಗೆ ₹351 ಕನಿಷ್ಠ ದರ – ಕಸ್ಟಮ್ಸ್‌ ನಿಗಾ ಎಂದ ಕೇಂದ್ರ

ರೋಸ್ಟೆಡ್ ಅಡಿಕೆಯ ಆಮದು ನೀತಿಯನ್ನು 2025ರ ಏಪ್ರಿಲ್‌ನಲ್ಲಿ ಬದಲಾಯಿಸಲಾಗಿದ್ದು, ಕೆ.ಜಿಗೆ ₹351 ಅಥವಾ…

10 hours ago

ತೆಂಗು ಬೆಳೆಗೆ ವಿಮೆ : ಕೇಂದ್ರದ ಮಹತ್ವದ ಉತ್ತರ

ತೆಂಗು ಬೆಳೆಯನ್ನು PMFBY ಅಥವಾ RWBCIS ಅಡಿಯಲ್ಲಿ ವಿಮಾ ವ್ಯಾಪ್ತಿಗೆ ತರುವ ಅಧಿಕಾರ…

10 hours ago

ಹವಾಮಾನ ವರದಿ | 11-08-2026 | ಕರ್ನಾಟಕದ ಹವಾಮಾನದಲ್ಲಿ ಮುಂದಿನ ದಿನಗಳಲ್ಲಿ ಏನು ಬದಲಾವಣೆ ?

ಕರಾವಳಿ ಜಿಲ್ಲೆಗಳಲ್ಲಿ ಮಳೆಯ ನಡುವೆ ಹೆಚ್ಚಿನ ಬಿಡುವಿನ ಅವಧಿಯೊಂದಿಗೆ ಬಿಸಿಲು–ಮೋಡದ ವಾತಾವರಣ ಮುಂದುವರಿಯಲಿದ್ದು,…

11 hours ago

ಬಿ.ಎಸ್‌ಸಿ. ಕೃಷಿ ನಂತರ ಏನು ? ಉದ್ಯೋಗ, ಉದ್ಯಮ ಮತ್ತು ಉನ್ನತ ಶಿಕ್ಷಣದ ಅತ್ಯುತ್ತಮ ಅವಕಾಶಗಳು ಇಲ್ಲಿವೆ

ಬಿ.ಎಸ್‌ಸಿ. ಕೃಷಿ ಪದವೀಧರರಿಗೆ ಸರ್ಕಾರಿ ಉದ್ಯೋಗ, ಖಾಸಗಿ ಕಂಪನಿಗಳು, ಬ್ಯಾಂಕಿಂಗ್, ಸಂಶೋಧನೆ ಮತ್ತು…

1 day ago

ಅಡಿಕೆ–ಕಾಳುಮೆಣಸು ಬೆಳೆ ವಿಮೆ: ರೈತರ ನೋಂದಣಿಗೆ ಆ.17 ಅಂತಿಮ ದಿನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2026-27ನೇ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಅಡಿಕೆ…

1 day ago