ಮುಂಬಯಿ: ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ವಾಯುಯಾನ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾ ದಿನಕ್ಕೆ 30-35 ಕೋಟಿ ರೂ. ನಷ್ಟವನ್ನು ಅನುಭವಿಸುತ್ತಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ವಿಶ್ವದ ನಾನಾ ದೇಶಗಳು ಅಂತರರಾಷ್ಟ್ರೀಯ ವಿಮಾನ ಹಾರಾಟಗಳನ್ನು ನಿಲ್ಲಿಸಿವೆ. ಕೊರೊನಾ ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಭಾರತವು ಕೂಡ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. “ಸರ್ಕಾರಿ ಆದೇಶದ ಅನುಸಾರ, ನಾವು ಒಂದು ಕೂಡ ವಾಣಿಜ್ಯ ವಿಮಾನದ ಹಾರಾಟ ನಡೆಸುತ್ತಿಲ್ಲ. ಅದರ ಜತೆಗೆ ದೇಶೀಯ ವಿಮಾನ ಹಾರಾಟವೂ ಇಲ್ಲ. ಇದರಿಂದ ನಮಗೆ ನಿತ್ಯ 30-35 ಕೋಟಿ ನಷ್ಟವಾಗುತ್ತಿದೆ” ಎಂದು ಏರ್ ಇಂಡಿಯಾ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel