ಮಂಗಳೂರು: ಕೊರೊನಾ ವೈರಸ್ ಹರಡುವುದು ತಡೆಯಲು ಸರಕಾರ ಲಾಕ್ಡೌನ್ ಘೋಷಣೆ ಮಾಡಿದೆ. ಇದರ ಬಳಿಕ ಬೆಂಗಳೂರು ನಗರವನ್ನು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವು ಕೊರೊನಾ ಹಾಟ್ ಸ್ಫಾಟ್ ಎಂದು ಘೋಷಣೆ ಮಾಡಿತ್ತು. ಇದೀಗ ರಾಜ್ಯ ಸರಕಾರವು ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ 4 ಜಿಲ್ಲೆಗಳನ್ನು ಕೊರೊನಾ ವೈರಸ್ ರೆಡ್ ಝೋನ್ ಎಂದು ಘೋಷಣೆ ಮಾಡಿದೆ. ದಕ್ಷಿಣ ಕನ್ನಡ, ಉತ್ತರಕನ್ನಡ, ಮೈಸೂರು ಹಾಗೂ ಚಿಕ್ಕಬಳ್ಳಾಪುರ ರೆಡ್ ಝೋನ್ ಘೋಷಣೆಗೆ ಒಳಗಾದ ಜಿಲ್ಲೆಗಳು.
ಕೊರೊನಾ ವೈರಸ್ ಹರಡುವುದು ತಡೆಯಲು ಹಾಗೂ ಕೆಲವು ಗ್ರಾಮಗಳ ಮೂಲಕ ಕೊರೊನಾ ವೈರಸ್ ಹರಡಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಸರಕಾರವು ರೆಡ್ ಝೋನ್ ಘೋಷಣೆಗೆ ಒಳಗಾದ ಜಿಲ್ಲೆಗಳ ಮೇಲೆ ತೀವ್ರ ನಿಗಾ ಇರಿಸಿದೆ. ಇಲ್ಲಿ ವಿಶೇಷ ಜಾಗೃತಿ ಮೂಡಿಸುವುದು ಹಾಗೂ ಕ್ವಾರಂಟೈನ್ ನಲ್ಲಿ ಇರುವವರ ಮೇಲೆ ತೀವ್ರ ನಿಗಾ ಇಡುವುದು ಹಾಗೂ ಲಾಕ್ಡೌನ್ ಬಿಗಿ ಮಾಡುವುದು ಇದರ ಉದ್ದೇಶ.
ದಕ್ಷಿಣ ಕನ್ನಡ ಜಿಲ್ಲೆಗೆ ತಾಗಿಕೊಂಡಂತೆ ಕಾಸರಗೋಡು ಜಿಲ್ಲೆ ಇರುವುದರಿಂದ ಕೊರೊನಾ ವೈರಸ್ ಹರಡಂತೆ ಕ್ರಮ ವಹಿಸಲಾಗುತ್ತಿದೆ. ಈಗಾಗಲೇ ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಇರುವುದರಿಂದ ಬಿಗಿಯಾದ ಕ್ರಮ ಕೈಗೊಳ್ಳಲಾಗುತ್ತಿದೆ.