ಕೊರೋನಾ ವೈರಸ್ ಸೋಂಕಿತರು ಆಸ್ಪತ್ರೆಗೆ ದಾಖಲಾದರೆ ಡಿಸ್ಚಾರ್ಜ್ ಹಾಗೂ ಹೋಂ ಐಸೊಲೇಷನ್ನಲ್ಲಿ ಬದಲಾವಣೆ ತರಲಾಗಿದೆ. ಕೇಂದ್ರ ಸರ್ಕಾರದ ಮಾರ್ಗ ಸೂಚಿಯ ಮೇರೆಗೆ ಆರೋಗ್ಯ ಇಲಾಖೆ ಈ ಬದಲಾವಣೆ ತಂದಿದೆ.
Advertisement
ಎ. ಲಕ್ಷಣ ಇರುವವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು 10 ದಿನಕ್ಕೆ ಡಿಸ್ಚಾರ್ಜ್ ಮಾಡಲು ತೀರ್ಮಾನಿಸಲಾಗಿದೆ. ಡಿಸ್ಚಾರ್ಜ್ ಸಂದರ್ಭದಲ್ಲಿ ಯಾವುದೇ ಕೋವಿಡ್ ಟೆಸ್ಟ್ ನಡೆಸುವುದಿಲ್ಲ.ಡಿಸ್ಚಾರ್ಜ್ ಆದ ಬಳಿಕ 14 ದಿನಗಳ ಬದಲು 7 ದಿನ ಹೋಂ ಕ್ವಾರಂಟೈನ್ ಮಾಡಲಾಗುವುದು. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರವೂ ಕೊರೊನಾ ಲಕ್ಷಣಗಳು ಕಂಡುಬಂದರೆ ಆಪ್ತಮಿತ್ರ ಹೆಲ್ಪ್ ಲೈನ್ಗೆ ತಿಳಿಸಬೇಕು.
Advertisement
- ಕಡಿಮೆ ಮತ್ತು ಸಾಧಾರಣ ರೋಗ ಲಕ್ಷಣ ಇರುವವರನ್ನು 10 ದಿನ ಆಸ್ಪತ್ರೆಗೆ ದಾಖಲು ಮಾಡಿಕೊಂಡು ಡಿಸ್ಚಾರ್ಜ್ ಮಾಡುವ ಮೂರು ದಿನ ಮೊದಲು ಕೊರೊನಾ ಪರೀಕ್ಷೆ ನಡೆಸಿ ಲಕ್ಷಣಗಳು ಕಂಡುಬರದಿದ್ದರೆ ಬಿಡುಗಡೆ ಮಾಡಲಾಗುವುದು.
- 10 ದಿನಗಳ ನಂತರವೂ ರೋಗ ಲಕ್ಷಣ ಮುಂದುವರಿದರೆ 17ನೆ ದಿನಕ್ಕೆ ಡಿಸ್ಚಾರ್ಜ್ ಮಾಡಲಾಗುವುದು. ಆ ಸಂದರ್ಭದಲ್ಲಿ ಕೊರೊನಾ ಪರೀಕ್ಷೆ ನಡೆಸುವುದಿಲ್ಲ. ಡಿಸ್ಚಾರ್ಜ್ ಆದ ಬಳಿಕ ಏಳು ದಿನ ಹೋಂ ಕ್ವಾರಂಟೈನ್ನಲ್ಲಿರಬೇಕು. 14 ದಿನ ಟೆಲಿ ಕಾನರೆನ್ಸ್ ಮಾಡಬೇಕು.
- ಹೋಂ ಕ್ವಾರಂಟೈನ್ ಆಗುವವರು 10 ದಿನ ಮನೆಯಲ್ಲಿರಬೇಕು. ಮೂರು ದಿನಗಳೊಳಗೆ ಜ್ವರ ಬಾರದಂತಿರಬೇಕು. ಬಳಿಕ ಏಳು ದಿನ ಮನೆಯಲ್ಲೇ ಇರಬೇಕಿದ್ದು, ಪಲ್ಸ್ ಚೆಕ್ ಮಾಡಿಸಿಕೊಳ್ಳಬೇಕು
- ಕೆಲಸಕ್ಕೆ ಹೋಗಲೇಬೇಕಾದರೆ ಕೊರೋನಾ ನೆಗೆಟಿವ್ ಸರ್ಟಿಫಿಕೆಟ್ ಪಡೆದುಕೊಳ್ಳುವುದು ಈಗ ಕಡ್ಡಾಯವಾಗಿದೆ
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement