ಕೊರೋನಾ ವೈರಸ್-ಲಾಕ್ ಡೌನ್ | ಎಸ್.ಎಸ್.ಎಫ್- ಎಸ್.ವೈ.ಎಸ್ ಸುಳ್ಯ ವತಿಯಿಂದ ಸೇವೆ

March 27, 2020
4:32 PM

ಸುಳ್ಯ: ಕೊರೋನಾ ವೈರಸ್ ಸೋಂಕಿಗೆ ಇಡೀ ಜಗತ್ತೇ ತತ್ತರಿಸಿ, ಲಾಕ್ ಡೌನ್ ಸ್ಥಿತಿಯಲ್ಲಿರುವಾಗ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಎಸ್.ಎಸ್ ಎಫ್ ಮತ್ತು ಎಸ್.ವೈ.ಎಸ್ ತಂಡಗಳು ತುರ್ತುಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

ಬಡ ನಿರ್ಗತಿಕರಿಗೆ ಅನ್ನಾಹಾರ ತಲುಪಿಸುವುದು, ಅನಾರೋಗ್ಯ ಪೀಡಿತರಿಗೆ ಔಷಧಗಳನ್ನು ತಲುಪಿಸಿ, ಅತ್ಯಗತ್ಯ ಸಂದರ್ಭಗಳಲ್ಲಿ ಆಂಬುಲೆನ್ಸ್ ವ್ಯವಸ್ಥೆ ಮಾಡಿ ಆಸ್ಪತ್ರೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡುವುದು, ರಕ್ತದ ಬೇಡಿಕೆಯನ್ನು ಮನಗಂಡು ರಕ್ತದಾನ ಮಾಡುವ ವ್ಯವಸ್ಥೆ, ಲಾಕ್ ಡೌನ್ ನ ವೇಳೆಯಲ್ಲಿ ಅರ್ಧದಾರಿಯಲ್ಲಿ ಸಿಲುಕಿದವರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸುವುದು, ಕೊರೋನಾ ಮಾರಕ ವೈರಸಿನ ಬಗ್ಗೆ ವಿವಿಧೆಡೆಗಳಲ್ಲಿ ಜಾಗೃತಿ ಮೂಡಿಸುವುದು ಸಹಿತ ಹತ್ತು ಹಲವು ತುರ್ತು ಸೇವೆಗಳಲ್ಲಿ ತಂಡವು ಕಳೆದ ಹತ್ತಾರು ದಿನಗಳಿಂದ ತೊಡಗಿಸಿಕೊಂಡಿರುವುದಕ್ಕೆ  ಶ್ಲಾಘನೆಯ ಮಾತುಗಳು ಕೇಳಿಬರುತ್ತಿದೆ.

ಮಂಗಳೂರಿನ ಆಸ್ಪತ್ರೆಗಳಲ್ಲಿ ರಕ್ತದ ಕೊರತೆಯಿದೆಯೆಂದರಿತು ಸುಮಾರು ಇಪ್ಪತ್ತರಷ್ಟು ಬ್ಲಡ್ ಸೈಬೋ ಕಾರ್ಯಕರ್ತರು ಮಂಗಳೂರಿಗೆ ತೆರಳಿ ರಕ್ತದಾನವನ್ನು ಮಾಡಿದ್ದಾರೆ. ರಾಜ್ಯ ಹಾಗೂ ಜಿಲ್ಲಾ ನಾಯಕರ ನಿರ್ದೇಶನಗಳನ್ನು ಪಡೆದು ಸರಕಾರ ಹಾಗೂ ಆರೋಗ್ಯ ಇಲಾಖೆಯ ಸುತ್ತೋಲೆಗಳನ್ನು ಪಾಲಿಸಿ ಸ್ವಯಂ ರಕ್ಷಣೆಯೊಂದಿಗೆ ಉಳಿದವರ ಅತ್ಯಗತ್ಯಗಳ ಪೂರೈಕೆಗೂ ಎಸ್.ಎಸ್.ಎಫ್, ಎಸ್.ವೈ.ಎಸ್ ತಂಡವು ನಿರಂತರವಾಗಿ ಶ್ರಮ ವಹಿಸುತ್ತಿದೆ.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗಗನಯಾನಿ ಸುನಿತಾ ವಿಲಿಯಮ್ಸ್‌ಗೆ 9 ತಿಂಗಳ ಬಾಹ್ಯಾಕಾಶ ವಾಸ | ಭೂಮಿಗೆ ಕರೆತರುವ ಪ್ರಯತ್ನಕ್ಕೆ ಚಾಲನೆ | ನಾಸಾ ಹೇಳಿಕೆ |
March 17, 2025
8:07 AM
by: The Rural Mirror ಸುದ್ದಿಜಾಲ
ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಪೋಷಕರನ್ನು ಬಿಟ್ಟು ಮಕ್ಕಳು ನಾಪತ್ತೆ…!
March 17, 2025
7:02 AM
by: The Rural Mirror ಸುದ್ದಿಜಾಲ
ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್
March 17, 2025
6:42 AM
by: The Rural Mirror ಸುದ್ದಿಜಾಲ
ರಾಜ್ಯದಲ್ಲಿ ಶೀಘ್ರ 5 ಸಾವಿರ ಶಿಕ್ಷಕರ ನೇಮಕ
March 17, 2025
6:36 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror