ಬೆಂಗಳೂರು: ದೇಶಾದ್ಯಂತ 650ಕ್ಕೂ ಹೆಚ್ಚಿನ ಮಂದಿಗೆ ಹರಡಿರುವ ಕೊರೋನಾ ವೈರಸ್ ಸೋಂಕು ಕರ್ನಾಟಕದಲ್ಲಿ 3 ನೇ ಹಂತಕ್ಕೆ (ಸಮುದಾಯಕ್ಕೆ ಹರಡಿರುವ) ತಲುಪಿದೆಯಾ ಎಂಬ ಶಂಕೆ ವ್ಯಕ್ತವಾಗಿದೆ.
ಮಾ.26 ರಂದು ಒಂದೇ ದಿನ ರಾಜ್ಯದಲ್ಲಿ 4 ಪ್ರಕರಣಗಳು ಪತ್ತೆಯಾಗಿದೆ. ಇದರಲ್ಲಿ ಇಬ್ಬರು ವಿದೇಶದಿಂದ ಬಂದವರ ಸಂಪರ್ಕಕ್ಕೂ ಬಾರದೆ ಇದ್ದು ಕೂಡಾ ಆ ವ್ಯಕ್ತಿಗಳಲ್ಲಿ ಸೋಂಕು ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಓರ್ವ ವ್ಯಕ್ತಿಗೆ ಹಾಗೂ ನಂಜನಗೂಡಿನ ಔಷಧ ತಯಾರಿಕಾ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗೆ ಕೊರೋನಾ ಸೋಂಕು ತಗುಲಿದೆ. ಇಬ್ಬರೂ ಯಾವುದೇ ಪ್ರಯಾಣ ಹಿನ್ನೆಲೆ ಹೊಂದಿಲ್ಲ ಹಾಗೂ ವಿದೇಶದಿಂದ ಬಂದವರ ಸಂಪರ್ಕಕ್ಕೆ ಬಾರದೇ ಇದ್ದರೂ ಕೊರೋನಾ ಸೋಂಕು ತಗುಲಿದೆ.
ಇದರಿಂದಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 55 ಕ್ಕೆ ಏರಿದೆ. 3ನೇ ಹಂತದತ್ತ ಹೋಗುವುದನ್ನು ತಡೆಯಲು ಇನ್ನಷ್ಟು ಎಚ್ಚರಿಕೆ ವಹಿಸಬೇಕಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel