ಕೊಲ್ಲಮೊಗ್ರ: ಇಡ್ಯಡ್ಕ ಕೆ.ಆರ್.ಗೋಪಾಲಕೃಷ್ಣ ದಂಪತಿಗಳು ಪುತ್ರ ಗೌತಮನ ಜನ್ಮದಿನದ ನೆನಪಿಗಾಗಿ ಗುತ್ತಿಗಾರು ಹವ್ಯಕ ವಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲಮೊಗರು ,ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು ಮತ್ತು ಇತರ ಸಂಘಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು.
ಹೊಸನಗರ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಆಶಯದಂತೆ ನಡೆಯುತ್ತಿರುವ ರಕ್ತದಾನ ಶಿಬಿರವನ್ನು ಕೊಲ್ಲಮೊಗ್ರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪಲ್ಲವಿಯವರು ದೀಪ ಬೆಳಗಿಸಿ ಉದ್ಘಾಟಿಸಿ ರಕ್ತದಾನ ದ ಮಹತ್ವದ ಬಗ್ಗೆ ತಿಳಿಸಿದರು.
ಗುತ್ತಿಗಾರು ಹವ್ಯಕ ವಲಯಾದ್ಯಕ್ಷೆ ದೇವಕಿ ಪನ್ನೆ ಸಭಾಧ್ಯಕ್ಷತೆ ವಹಿಸಿ ದ್ದರು. ಗಣೇಶ ಇಡ್ಯಡ್ಕ ಕಾರ್ಯಕ್ರಮ ನಿರೂಪಿಸಿದರು. ಡಾ.ರಾಮಚಂದ್ರ ಭಟ್ ಮತ್ತು ಇತರ ಸಿಬ್ಬಂದಿಗಳು ರಕ್ತದಾನಿಗಳಿಂದ ರಕ್ತ ಪಡೆದುಕೊಂಡರು.ಒಟ್ಟು 47 ಜನರು ರಕ್ತದಾನ ಮಾಡಿದರು. ಕಳೆದ ಹಲವಾರು ವರುಷಗಳಿಂದ ಇಲ್ಲಿ ಯಶಸ್ವಿ ಯಾಗಿ ನಡೆಯುತ್ತಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel