ಬೆಳ್ಳಾರೆ : ಕೋಟೆಮುಂಡುಗಾರಿನ ದ.ಕ.ಜಿ.ಪ.ಹಿ.ಪ್ರಾ ಶಾಲೆಯಲ್ಲಿ ಮೂರು ವರ್ಷದ ಅವಧಿಗೆ ನೂತನ ಎಸ್‍ಡಿಎಂಸಿ ಸಮಿತಿಯ ರಚನೆ ಮಾಡಲಾಯಿತು.
ಎಸ್‍ಡಿಎಂಸಿ ಸಮಿತಿಯ ನೂತನ ಅಧ್ಯಕ್ಷರಾಗಿ ಗಂಗಾಧರ ಮತ್ತು ಉಪಾಧ್ಯಕ್ಷೆಯಾಗಿ ಗೀತಾ ಅವರು ಅವಿರೋಧವಾಗಿ ಆಯ್ಕೆಯದರು. ಕಾರ್ಯದರ್ಶಿಯಾಗಿ ಮುಖ್ಯೋಪಾಧ್ಯಾಯಿನಿ ಮೋಹಿನಿ ಎ.ಕೆ ನೇಮಕಗೊಂಡರು. ಸಭೆಯಲ್ಲಿ ನೂತನ ಸಮಿತಿಯಿಂದ ಮುಂದಿನ ದಿನಗಳಲ್ಲಿ ನಡೆಯಬೇಕಾದ ಸ್ವಚ್ಛತಾ ಕಾರ್ಯಕ್ರಮ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಎಸ್‍ಡಿಎಂಸಿ ಮಾಜಿ ಸತೀಶ್ ಬಿ, ಹಿರಿಯ ಶಿಕ್ಷಕಿ ರೋಹಿಣಿ, ಹೆತ್ತವರು ಹಾಗು ಶಾಲಾ ಹಿತೈಷಿಗಳು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಮೋಹಿನಿ ಎ.ಕೆ ಕಾರ್ಯಕ್ರಮ ನಿರೂಪಿಸಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel