ಬೆಳ್ಳಾರೆ: ದಿ| ಕೋಟೆ ವಸಂತಕುಮಾರ್ ಅವರ ಕೋಟೆ ಫೌಂಡೇಶನ್ ವತಿಯಿಂದ ನ್ಯಾಸ್‍ಡಾಗ್ ಹಾಗೂ ಬೆಂಗಳೂರಿನ ರೈಟ್ ಟು ಲಿವ್ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಕೋಟೆಮುಂಡುಗಾರಿನ ದಕಜಿಪಹಿಪ್ರಾ ಶಾಲಾ ವಿದ್ಯಾರ್ಥಿಗಳು ಹಾಗು ಅಂಗನವಾಡಿ ಮಕ್ಕಳಿಗೆ ಬ್ಯಾಗ್ ವಿತರಣಾ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.
ಬ್ಯಾಗ್‍ಗಳನ್ನು ವಿತರಿಸಿ ಮಾತನಡಿದ ಕೋಟೆ ಫೌಂಡೇಶನ್ ಟ್ರಸ್ಟ್ ಸಂಚಾಲಕ ಹಾಗೂ ಬೆಂಗಳೂರಿನ ರೈಟ್ ಟು ಲಿವ್ ಮುಖ್ಯಸ್ಥ ರಘುರಾಮ್ ಕೋಟೆ ಕಲಿತ ಶಾಲೆಯನ್ನು ನಾವು ಜೀವನದಲ್ಲಿ ಸದಾ ನೆನಪಿಸುತ್ತಿರಬೇಕು ಎಂದು ಹೇಳಿದರು.
ಸುಮಾರು 50ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಬ್ಯಾಗುಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಗಂಗಾಧರ ವಹಿಸಿದರು. ವೇದಿಕೆಯಲ್ಲಿ ಗಣಪ್ಪಯ್ಯ ಪೆರುವಾಜೆ, ರೈಟ್ ಟು ಲಿವ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಶ್ರೀಧರ್, ನ್ಯಾಶ್‍ಡಾಗ್ ಸಂಸ್ಥೆಯ ಸದಸ್ಯ ಶ್ರವಣ್‍ಕುಮಾರ್, ಶಾಲಾ ಎಸ್‍ಡಿಎಂಸಿ ಸದಸ್ಯ ಹಾಗು ಕಳಂಜ ಗ್ರಾ.ಪಂ ಸದಸ್ಯ ಲಕ್ಷ್ಮೀಶ ಕಜೆಮೂಲೆ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಮೋಹಿನಿ ಸ್ವಾಗತಿಸಿ, ರಾಣಿ ವಂದಿಸಿದರು. ಹಿರಿಯ ಶಿಕ್ಷಕಿ ರೋಹಿಣಿ ಕಾರ್ಯಕ್ರಮ ನಿರೂಪಿಸಿದರು.
ಮುಂಡುಗಾರಿನ ದಕಜಿಪಹಿಪ್ರಾ ಶಾಲೆಯಲ್ಲಿರುವ ಅತೀ ಬಡ ಕುಟುಂಬದ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟವಿದ್ದರೆ ಮುಂದಿನ ದಿನಗಳಲ್ಲಿ ಅತ್ಯುನ್ನತ ವಿದ್ಯಾಭ್ಯಾಸ ಪಡೆಯಲು ಇಚ್ಛಿಸಿದಲ್ಲಿ ರೈಟ್ ಟು ಲಿವ್ ಸಂಸ್ಥೆಯನ್ನು ಸಂಪರ್ಕಿಸಿದರೆ ಅಂತಹ ವಿದ್ಯಾರ್ಥಿಗಳಿಗೆ ಸಹಾಯದ ಹಸ್ತವನ್ನು ಚಾಚುವುದಾಗಿ ರೈಟ್ ಟು ಲಿವ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಶ್ರೀಧರ್ ಹಾಗೂ ಕೋಟೆ ಫೌಂಡೇಶನ್ ಸಂಚಾಲಕ ರಘುರಾಮ ಕೋಟೆ ಭರವಸೆ ನೀಡಿದರು.
Advertisement
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.