ಸುಳ್ಯ: ಕೋಲ್ಚಾರು ಪಡಿತರ ವಿತರಣೆ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಪಡಿತರಕ್ಕಾಗಿ ಗ್ರಾಹಕರು ಪ್ರತಿದಿನವೂ ಸರದಿ ಸಾಲಿನಲ್ಲಿ ನಿಂತು ಕಾಯುವ ಪರಿಸ್ಥಿತಿ ಎದುರಾಗಿದೆ.
ಕೋಲ್ಚಾರು ಸಹಕಾರಿ ಸಂಘದ ಶಾಖೆಯಲ್ಲಿ ಪಡಿತರ ವಿತರಣೆ ವಾರದ 3 ದಿನ ಮಾತ್ರ ವಿತರಿಸುತ್ತಿದ್ದು, ಈ ದಿನಗಳಲ್ಲಿ ಕರಂಟ್ ಇಲ್ಲದಿದ್ದರೆ ನೆಟ್‌ವರ್ಕ್ ಇರುವುದಿಲ್ಲ, ಇದ್ದರೂ ವೋಲ್ಟೇಜ್ ಸಮಸ್ಯೆ, ನೆಟ್ ವರ್ಕ್ ಸಮಸ್ಯೆಯಿಂದ ಸರಿ ಇರುವುದಿಲ್ಲ. ಇದರಿಂದ ಗ್ರಾಮಿಣ ಭಾಗದ ಸಾಮಾನ್ಯ ಜನರು ಕೆಲಸ ಬಿಟ್ಟು ಬಂದು ಕಾಯುವ ಪರಿಸ್ಥಿತಿ ಉಂಟಾಗಿದೆ.
ಅಲ್ಲದೆ ದೂರದ ಬಟ್ಟಂಗಾಯ ಕಣಕ್ಕೊರು ಕೊಚ್ಚಿ ಮಾಣಿಮರ್ಧು ಮುಂತಾದ ಕಡೆಯಿಂದ ಪಡಿತರಕ್ಕಾಗಿ ಬಂದು ಹೋಗುವುದ ನಿತ್ಯದ ಕೆಲಸವಾಗಿದೆ ಇದರಿಂದ ಪಡಿತರ ಗ್ರಾಹಕರು ತೀವ್ರ ಸಮಸ್ಯೆ ಎದುರಿಸುತ್ತಿರುವುದರಿಂದ ಈ ಬಗ್ಗೆ ಅಧಿಕಾರಿಗಳು ಜನಪ್ರತಿನಿಧಿಗಳು ಗಮನ ಹರಿಸಿ ಸಮಸ್ಯೆ ನಿವಾರಿಸಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel