ಕ್ಯಾಂಪ್ಕೋದಿಂದ ಅಡಿಕೆ ಬೆಳೆಗಾರರ ಡಿಜಿಟಲ್ ಮೀಟಿಂಗ್ | ಅಡಿಕೆ ಬೆಲೆ ಕುಸಿತವಾಗದು – ಧೈರ್ಯ ತುಂಬಿದ ಕ್ಯಾಂಪ್ಕೋ ಅಧ್ಯಕ್ಷರು |

April 16, 2020
8:31 PM

ಮಂಗಳೂರು: ಯಾವುದೇ ಕಾರಣಕ್ಕೂ ಅಡಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಬೇಕಾದ ಅವಶ್ಯಕತೆ ಇಲ್ಲ. ಅಡಿಕೆ ಧಾರಣೆ ಕುಸಿಯುವುದಿಲ್ಲ. ಉತ್ತರ ಭಾರತದಲ್ಲಿ ಅಡಿಕೆಗೆ ಬೇಡಿಕೆ ಇದೆ. ಲಾಕ್ಡೌನ್ ಮುಗಿದ ಬಳಿಕ ಕೆಲವೇ ದಿನಗಳಲ್ಲಿ  ಮಾರುಕಟ್ಟೆ ಸಹಜ ಸ್ಥಿತಿಗೆ ಬರಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದರು.

Advertisement

ಅವರು ಗುರುವಾರ ಕ್ಯಾಂಪ್ಕೋದಿಂದ ಆನ್ ಲೈನ್ ಮೂಲಕ ನಡೆದ ಬೆಳೆಗಾರರ ಸಭೆಯಲ್ಲಿ  ಮಾತನಾಡಿದರು. ಅಡಿಕೆಗೆ ಬೇಡಿಕೆ ಇದ್ದರೂ ಅದರ ನಂತರ ಪ್ರೊಸೆಸಿಂಗ್ ಈಗ ಸಾಧ್ಯವಾಗುತ್ತಿಲ್ಲ. ಉತ್ತರ ಭಾರತದಿಂದ ಸಾಕಷ್ಟು ಬೇಡಿಕೆ ಇದೆ. ಆದರೆ ಪೂರೈಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಡಿಕೆ ಧಾರಣೆ ಕುಸಿತವಾಗದು, ಈಗಾಗಲೇ ಶೇ.30 ರಷ್ಟು ಕಡಿಮೆ ದಾಸ್ತಾನು ಇದೆ. ಉತ್ತರ ಭಾರತದಲ್ಲೂ ಸಾಕಷ್ಟು ಅಡಿಕೆ ಕೊರತೆ ಇದೆ.  ಅಡಿಕೆ ಬೆಳೆಗಾರರು ಯಾವುದೇ ಕಾರಣಕ್ಕೂ ಆತಂಕಪಡಬೇಕಾದ ಅವಶ್ಯಕತೆ ಇಲ್ಲ ಎಂದರು.

ಅಡಿಕೆ ಬೆಳೆಗಾರರ ರಕ್ಷಣೆಗೆ ಸಹಕಾರಿ ಸಂಘಗಳು, ಸರಕಾರ ಹಾಗೂ ಇತರ ಎಲ್ಲಾ ಸಂಘಸಂಸ್ಥೆಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು  ಎಲ್ಲಾ ರೀತಿಯ ಪ್ರಯತ್ನ ಮಾಡಲಾಗಿದೆ. ಕ್ಯಾಂಪ್ಕೋ ಸದಾ ಅಡಿಕೆ ಬೆಳೆಗಾರರ ಪರವಾಗಿ ನಿಲ್ಲಲಿದೆ. ಈ ನಡುವೆ ಕ್ಯಾಂಪ್ಕೋದಲ್ಲಿ  ಠೇವಣಿ ಇಡಲೂ ಅನೇಕರು ಮುಂದೆ ಬಂದಿರುವುದು  ಕೂಡಾ ಆಶಾದಾಯಕ ಬೆಳವಣಿಗೆ ಎಂದರು. ಇದರ ಜೊತೆಗೆ ಮಳೆಗಾಲ ಮೊದಲು ಮೈಲುತುತ್ತು ಸರಬರಾಜಿಗೂ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಅನೇಕ ಬೆಳೆಗಾರರಿಂದ ಗ್ರಾಮೀಣ ಭಾಗಗಳಲ್ಲೂ ಅಡಿಕೆ ಖರೀದಿ ನಡೆಸುವ ಬಗ್ಗೆ ಬೇಡಿಕೆ ವ್ಯಕ್ತವಾಗಿತ್ತು, ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ಮುಂದಿನ ದಿನಗಳಲ್ಲಿ  ಖರೀದಿ ನಡೆಸಲಾಗುವುದು. ಈಗಾಗಲೇ ಪಂಜ ಸಹಕಾರಿ ಸಂಘ ಸೇರಿದಂತೆ ಕೆಲವು ಸಹಕಾರಿ ಸಂಘಗಳು ಕ್ಯಾಂಪ್ಕೋ ಜೊತೆ ಕೈಜೋಡಿಸಲು ಮುಂದೆ ಬಂದಿದೆ. ಹೀಗಾಗಿ ಸಹಕಾರಿ ಸಂಘಗಳ ಸಹಕಾರದಿಂದ ಅಡಿಕೆ ಖರೀದಿ ನಡೆಸಬಹುದು ಎಂದರು.

ಇದರ ಜೊತೆಗೆ ಕ್ಯಾಂಪ್ಕೋ ಬೆಳೆಗಾರರರ ಜೊತೆ ನಿಕಟ ಸಂಬಂಧ ಇರಿಸಿಕೊಳ್ಳಲು ವ್ಯಾಟ್ಸಪ್ ಗುಂಪು ರಚನೆ, ಡಿಜಿಟಲ್ ಯುಗದಲ್ಲಿ ಇನ್ನಷ್ಟು ಹತ್ತಿರವಾಗುವುದು ಮೊದಲಾದ ಸಲಹೆಗಳಿಗೆ ಅಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸಿದರು.

Advertisement

ಸಭೆಯಲ್ಲಿ  ಕ್ಯಾಂಪ್ಕೋ ಉಪಾಧ್ಯಕ್ಷ ಶಂ ನಾ ಖಂಡಿಗೆ, ಆಡಳಿತ ನಿರ್ದೇಶಕ ಸುರೇಶ್ ಭಂಡಾರಿ , ನಿರ್ದೇಶಕ ಪದ್ಮರಾಜ ಪಟ್ಟಾಜೆ ಇದ್ದರು. ಸಾಕಷ್ಟು ಬೆಳೆಗಾರರು ತಮ್ಮ ಪ್ರಶ್ನೆಗಳನ್ನು ಕೇಳಿದರು.

 

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 11-07-2025 | ಮುಂದಿನ 10 ದಿನಗಳವರೆಗೂ ಕರಾವಳಿ-ಮಲೆನಾಡು ಭಾಗದಲ್ಲಿ ಸಾಮಾನ್ಯ ಮಳೆ | ಜುಲೈ 16ರಿಂದ ಎಲ್ಲೆಲ್ಲಾ ಮಳೆ ಹೆಚ್ಚಾಗಬಹುದು ?
July 11, 2025
4:50 PM
by: ಸಾಯಿಶೇಖರ್ ಕರಿಕಳ
ಕೇತುವಿನ ಕಾಟ: ಈ ರಾಶಿಗಳಿಗೆ ಆರೋಗ್ಯದಲ್ಲಿ ಎಚ್ಚರಿಕೆ ಬೇಕು..!
July 11, 2025
7:33 AM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದರೆ ಕ್ರಿಮಿನಲ್‌ ಕೇಸು – ಎಚ್ಚರಿಕೆ
July 11, 2025
7:22 AM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ವರದಾ, ತುಂಗಭದ್ರಾ ನದಿ
July 11, 2025
7:14 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group