ಮಂಗಳೂರು: ಅಡಿಕೆ ಬೆಳೆಗಾರರ ಹೆಮ್ಮೆಯ ಸಂಸ್ಥೆ ಕ್ಯಾಂಪ್ಕೋ ಈ ಬಾರಿ ಅಧಿಕ ಪ್ರಮಾಣದಲ್ಲಿ ಅಡಿಕೆ ಖರೀದಿ ಮಾಡಿದ್ದು ಈ ಬಾರಿ ಸಂಸ್ಥೆಯು 1589.15 ಕೋಟಿ ರೂಪಾಯಿಗಳ ಮೌಲ್ಯದ 57209.64 ಮೆ.ಟನ್‍ಅಡಿಕೆಯನ್ನು ಖರೀದಿಸಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ತಿಳಿಸಿದ್ದಾರೆ.
ಇವುಗಳಲ್ಲಿ 882.61ಕೋಟಿರೂಪಾಯಿ ಮೌಲ್ಯದ 27362.90 ಮೆ.ಟನ್ ಕೆಂಪಡಿಕೆ ಮತ್ತು 706.54 ಕೋಟಿ ರೂಪಾಯಿ ಮೌಲ್ಯದ 29846.74 ಮೆ.ಟನ್ ಬಿಳಿ ಅಡಿಕೆ ಒಳಗೊಂಡಿರುತ್ತದೆ. 1593.40 ಕೋಟಿ ರೂಪಾಯಿಗಳ ಮೌಲ್ಯದ 54767.30 ಮೆ.ಟನ್‍ಅಡಿಕೆಯನ್ನು ಮಾರಾಟ ಮಾಡಿದೆ. ಇವುಗಳಲ್ಲಿ 826.03 ಕೋಟಿರೂಪಾಯಿ ಮೌಲ್ಯದ 25066.57 ಮೆ.ಟನ್‍ಕೆಂಪಡಿಕೆ ಮತ್ತು 767.37 ಕೋಟಿರೂಪಾಯಿ ಮೌಲ್ಯದ 29700.73 ಮೆ.ಟನ್ ಬಿಳಿ ಅಡಿಕೆ ಒಳಗೊಂಡಿರುತ್ತದೆ.
ಒಟ್ಟು ಈ ಬಾರಿ ಕ್ಯಾಂಪ್ಕೋ 2018-19 ನೇ ಸಾಲಿನಲ್ಲಿ1878 ಕೋಟಿ ರೂಪಾಯಿಗಳ ವ್ಯವಹಾರ ನಡೆಸುವ ಮೂಲಕ ತನ್ನ 46 ವರ್ಷಗಳ ಸದಸ್ಯ ಕೃಷಿಕರ ಸೇವೆಯಲ್ಲಿ ಹೊಸದಾಖಲೆ ನಿರ್ಮಿಸಿದೆ. 193 ಕೋಟಿ ರೂಪಾಯಿಗಳ ಮೌಲ್ಯದ ಚಾಕಲೇಟು ಮತ್ತು ಕೊಕ್ಕೊ ಕೈಗಾರಿಕೋತ್ಪನ್ನಗಳು ಮಾರಾಟವಾಗಿದ್ದು, ಇದರಲ್ಲಿ 16.75 ಕೋಟಿ ರೂಪಾಯಿಗಳ ಮೌಲ್ಯದ 1106 ಮೆ.ಟನ್ ರಫ್ತು ಒಳಗೊಂಡಿರುತ್ತದೆ.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…