ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ಉದ್ಘಾಟನೆಗೊಂಡಿತು ಅಂತರಾಷ್ಟ್ರೀಯ ಗುಣಮಟ್ಟದ ಲ್ಯಾಬ್ : ಸಿದ್ಧವಾಗುತ್ತಿದೆ ತೋಟದ ಮಣ್ಣು ಪರೀಕ್ಷೆಗೆ ವ್ಯವಸ್ಥೆ

November 20, 2019
8:32 PM

ಪುತ್ತೂರು: ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ನವೀಕರಣಗೊಂಡ ಎನಲೆಟಿಕಲ್ ಲ್ಯಾಬ್ (National Accreditation Board for Testing and Calibration Laboratories – NABL)  ಉದ್ಘಾಟನೆ ಬುಧವಾರ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಟಂದೂರು ನೂತನ ಲ್ಯಾಬ್ ಉದ್ಘಾಟಿಸಿ ಶುಭ ಹಾರೈಸಿದರು.

Advertisement
Advertisement

ಕ್ಯಾಂಪ್ಕೋ ಅಧ್ಯಕ್ಷ  ಎಸ್.ಆರ್. ಸತೀಶ್ಚಂದ್ರ ಸಭಾಧ್ಯಕ್ಷತೆ ವಹಿಸಿದರು. ಈ ಸಂದರ್ಭ ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ , ಕ್ಯಾಂಪ್ಕೋ ಉಪಾಧ್ಯಕ್ಷ   ಶಂ.ನ.ಖಂಡಿಗೆ , ಸಾಮಾಜಿಕ ಕಾರ್ಯಕರ್ತ ಆರ್ ಸಿ ನಾರಾಯಣ ರೆಂಜ, ಪತ್ರಕರ್ತ ಮಹೇಶ್ , ಹಿರಿಯ ಅಧಿಕಾರಿ  ರಾಮಚಂದ್ರ ಕಾಮತ್,  ಕ್ಯಾಂಪ್ಕೋ ಎ.ಜಿ.ಎಂ ಇಂಜಿನಿಯರಿಂಗ್ ಅವಿನಾಶ್ ರೈ, ಎ.ಜಿ.ಎಂ ಟೆಕ್ನಿಕಲ್ ,ಶ್ಯಾಮ್ ಪ್ರಸಾದ್ ಎಚ್, ಎ.ಜಿ.ಎಂ ಪ್ರೊಡಕ್ಷನ್ ಅನೂಪ್ ಮೊದಲಾದವರು  ಉಪಸ್ಥಿತರಿದ್ದರು.

Advertisement

ಈ ನೂತನ ಲ್ಯಾಬ್ ನಲ್ಲಿ ಮೈಕ್ರೋಬಯೋಲಜಿ ಲ್ಯಾಬ್, ಕೆಮೆಸ್ಟ್ರಿ ಲ್ಯಾಬ್, ಕೋಕೋ ಬೀನ್ಸ್ ಹಾಗೂ ಇತರ ಕೃಷಿ ಉತ್ಪನ್ನಗಳ ಲ್ಯಾಬ್ ಎಂಬ ಮೂರು ವಿಭಾಗಗಳಿದೆ. ಲ್ಯಾಬಿನಲ್ಲಿ ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯಲ್ಲಿ ಉತ್ಪಾದಿಸಿದ ಎಲ್ಲಾ ಉತ್ಪನ್ನಗಳನ್ನು ಹಾಗೂ ಉತ್ಪಾದನೆಗೆ ಬಳಕೆಯಾಗುವ ಕಚ್ಚಾ ವಸ್ತುಗಳನ್ನು ಹಾಗೂ ಉತ್ಪಾದನಾ ವಾತಾವರಣದಲ್ಲಿ ಈ ಲ್ಯಾಬ್ ನಲ್ಲಿ ಪರೀಕ್ಷೆಗೊಳಪಡಿಸಿ ಗುಣಮಟ್ಟವನ್ನು ಖಾತರಿಗೊಳಿಸಲಾಗುತ್ತದೆ.

ಮುಂದಿನ ದಿನದಲ್ಲಿ ಕ್ಯಾಂಪ್ಕೋ ಸದಸ್ಯ ಬೆಳೆಗಾರರ ತೋಟದ ಮಣ್ಣು ಪರೀಕ್ಷೆಯನ್ನು ಈ ಲ್ಯಾಬ್ ನಲ್ಲಿ ಅಳವಡಿಸಲಾಗುವುದು ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ  ಹೇಳಿದರು.

Advertisement
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬಾಳೆದಿಂಡಿನ ರಸ ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸಬಲ್ಲುದು..!
April 30, 2024
9:03 PM
by: ಕುಮಾರ್ ಪೆರ್ನಾಜೆ
ಆರೋಗ್ಯ ಕವಚ ಸಿಬಂದಿಗಳಿಗೆ ವೇತನವಾಗಿಲ್ಲ..! | ಗ್ರಾಮೀಣ ಭಾಗದ ಜೀವ ರಕ್ಷಕರು ಅತಂತ್ರದಲ್ಲಿ..!
April 30, 2024
7:15 PM
by: ದ ರೂರಲ್ ಮಿರರ್.ಕಾಂ
ಮಲೆನಾಡ ಗಿಡ್ಡ ತಳಿಯ ಗೋರಕ್ಷಣೆ ಅನಿವಾರ್ಯತೆ ಏಕೆ..? | ಅವುಗಳ ಮಹತ್ವ ಏನು ? ಜೀವಾಮೃತದಿಂದ ಅಡಿಕೆ ತೋಟ ಏನಾಯ್ತ..?
April 30, 2024
2:28 PM
by: ಮುರಳಿಕೃಷ್ಣ ಕೆ ಜಿ
Karnataka Weather | 30-04-2024 | ರಾಜ್ಯದಲ್ಲಿ ಮೋಡದ ವಾತಾವರಣ | ಕೆಲವು ಕಡೆ ತುಂತುರು ಮಳೆ ಸಾಧ್ಯತೆ |
April 30, 2024
11:19 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror