ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿಯಲ್ಲಿ #ವಿಶ್ವಪರಿಸರದಿನಾಚರಣೆ | 600 ಕ್ಯಾಂಪ್ಕೋ ಉದ್ಯೋಗಿಗಳ ಮನೆಯಲ್ಲಿ ಹಸಿರು ಚಿಂತನೆ |

June 5, 2020
1:25 PM

ಪುತ್ತೂರು: ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಕೆಮ್ಮಿಂಜೆ ಹಾಗೂ ಕ್ಯಾಂಪ್ಕೋ ಉದ್ಯೋಗಿಗಳ ರಿಕ್ರಿಯೇಷನ್ ಸೆಂಟರ್ ವತಿಯಿಂದ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

Advertisement

ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ಡಿ.ಜಿ.ಎಂ ಪ್ರಾನ್ಸಿಸ್ ಡಿಸೋಜ ಹಾಗೂ ಎ.ಜಿ.ಎಂ ಅವಿನಾಶ್ ರೈ ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಆ ಪ್ರಯುಕ್ತ 600 ಕ್ಯಾಂಪ್ಕೋ ಉದ್ಯೋಗಿಗಳ ಮನೆಯಲ್ಲಿ ಗಿಡಗಳನ್ನು ನೆಡುವ ಸಂಕಲ್ಪ ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಕ್ಯಾಂಪ್ಕೋ ಎಂಪ್ಲಾಯಿಸ್ ರಿಕ್ರಿಯೇಷನ್ ಸೆಂಟರಿನ ಅಧ್ಯಕ್ಷರಾದ ಶ್ಯಾಮ್ ಪ್ರಸಾದ್ ಎಚ್, ಕಾರ್ಯದರ್ಶಿ ರಮೇಶ ರೈ ನೆಗಳಗುಳಿ ,ಕೋಶಾಧಿಕಾರಿ ಪ್ರಶಾಂತ್ ಭಟ್, ಜತೆ ಕಾರ್ಯದರ್ಶಿ ಜಗದೀಶ್,ಸದಸ್ಯರಾದ ಪ್ರಶಾಂತ್ ಡಿ.ಎಸ್,ಮಹೇಶ್ ಪ್ರಭು ಎನ್, ಹಾಗೂ ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಅಧಿಕಾರಿಗಳು ಮತ್ತು ನೌಕರ ವೃಂದದವರು ಉಪಸ್ಥಿತರಿದ್ದರು.

 

 

ವಿಶ್ವ ಪರಿಸರ  ದಿನಾಚರಣೆಯ ಮೂಲಕ ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಹೆಚ್ಚಿಸಲು ಮತ್ತು ಪರಿಸರ ಸಂರಕ್ಷಣೆಗಾಗಿ ಕ್ರಮ ತೆಗೆದುಕೊಳ್ಳಲು ವಿಶ್ವದಾದ್ಯಂತ ಜನರನ್ನು ಪ್ರೋತ್ಸಾಹಿಸಲಾಗುತ್ತದೆ. ಈ ದಿನವನ್ನು ಈಗ ವಿಶ್ವದಾದ್ಯಂತ 100 ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲಾಗುತ್ತದೆ ಮತ್ತು ಭೂಮಿ ಮತ್ತು ಪರಿಸರವನ್ನು ನೋಡಿಕೊಳ್ಳುವ ಪ್ರಯತ್ನಕ್ಕಾಗಿ ಇದನ್ನು ಜನಸಾಮಾನ್ಯರ ದಿನವೆಂದೂ ಕರೆಯಲಾಗುತ್ತದೆ. ಹೀಗಾಗಿ ಈಗ  ಪರಿಸರ ಸಂರಕ್ಷಣೆಗಾಗಿ ಕ್ರಮ ಕೈಗೊಂಡು ಹಸಿರು ಕ್ರಾಂತಿ ಮಾಡಬೇಕಾಗಿದೆ.

ವಿಶ್ವಸಂಸ್ಥೆಯ ಪ್ರಕಾರ, 2020 ರ ವಿಶ್ವ ಪರಿಸರ ದಿನದ ವಿಷಯವು ಜೀವವೈವಿಧ್ಯತೆಯಾಗಿದೆ- ಇದು ತುರ್ತು ಮತ್ತು ಅಸ್ತಿತ್ವವಾದದ ಕಾಳಜಿ ಎರಡನ್ನೂ ಒಳಗೊಂಡಿದೆ. “ಇತ್ತೀಚಿನ ಘಟನೆಗಳು, ಬ್ರೆಜಿಲ್, ಅಮೇರಿಕಾ ಮತ್ತು ಆಸ್ಟ್ರೇಲಿಯಾದಲ್ಲಿನ ಕಾಳ್ಗಿಚ್ಚಿನಿಂದ ಹಿಡಿದು ಪೂರ್ವ ಆಫ್ರಿಕಾದಾದ್ಯಂತ ಮೋಡದಂತೆ ಮಿಡತೆಗಳು ಮುತ್ತಿಕೊಳ್ಳುವಿಕೆಗೆ – ಮತ್ತು ಈಗ, ಜಾಗತಿಕ ಸಾಂಕ್ರಾಮಿಕ ರೋಗ – ಮಾನವರ ಪರಸ್ಪರ ಅವಲಂಬನೆ ಮತ್ತು ಜೀವನದ ಜಾಲಗಳನ್ನು ಅಸ್ತಿತ್ವದಲ್ಲಿದ್ದಂತೆ ತೋರಿಸುತ್ತದೆ” ಎಂದು ವಿಶ್ವಸಂಸ್ಥೆಯ ಹೇಳಿಕೆಯಲ್ಲಿ ವಿವರಿಸಲಾಗಿದೆ.

ಈ ವರ್ಷದ ಪರಿಸರ ದಿನಾಚರಣೆ ಒಂದಿಷ್ಟು ಮಹತ್ವವನ್ನು ಪಡೆದುಕೊಂಡಿದೆ. ವಿಶ್ವದ ಬಹುತೇಕ ರಾಷ್ಟ್ರಗಳ ಜನರನ್ನು ಕೋವಿಡ್‌ ಹೆಮ್ಮಾರಿಯಂತೆ ಕಾಡುತ್ತಿರುವುದರಿಂದ ಜನರಲ್ಲಿ ಪರಿಸರದ ಬಗೆಗೆ ಒಂದಿಷ್ಟು ಕಾಳಜಿ ಮೂಡುವಂತೆ ಮಾಡಿದೆ. ವಾಯುಮಾಲಿನ್ಯದಿಂದಾಗಿ ಮನುಷ್ಯ ಮಾತ್ರ ವಲ್ಲದೆ ಜೀವಸಂಕುಲ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದೆ.

ಪರಿಸರಕ್ಕೆ ಸಂಬಂಧಿಸಿದ ಅಂಶಗಳಾದ ವಾಯುಮಾಲಿನ್ಯ, ಶಬ್ದ ಮಾಲಿನ್ಯ, ಕಲುಷಿತ ನೀರು ಮತ್ತು ಹೆಚ್ಚಿರುವ ಶಾಖ ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರಕಾರ, ಪ್ರತಿ ವರ್ಷ ಮೂರು ದಶಲಕ್ಷ ಮಕ್ಕಳು ಪರಿಸರ ಸಂಬಂಧಿತ ಕಾರಣಗಳಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಾರೆ.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹರಿಯಾಣ | 800 ಮೆ.ವ್ಯಾ.ವಿದ್ಯುತ್ ಉತ್ಪಾದನಾ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ
April 14, 2025
7:40 PM
by: The Rural Mirror ಸುದ್ದಿಜಾಲ
ಚಾಮರಾಜನಗರ ಜಿಲ್ಲೆ ಸಿದ್ದಾಪುರ ಜಮೀನು ವಿವಾದ | ರೈತರು ಆತಂಕಪಡುವ ಅಗತ್ಯವಿಲ್ಲ
April 14, 2025
7:28 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ |14.04.2025 | ಕರಾವಳಿ ಕೆಲವು ಕಡೆ ಗುಡುಗು ಸಹಿತ ಮಳೆ | ಎ.19ರ ನಂತರ ಮಳೆಯ ಪ್ರಮಾಣ ತೀರಾ ಕಡಿಮೆ |
April 14, 2025
12:45 PM
by: ಸಾಯಿಶೇಖರ್ ಕರಿಕಳ
ಅನುಭವದ ಕೃಷಿಯಿಂದ ಡಾಟಾ ಆಧಾರಿತ “ಸ್ಮಾರ್ಟ್ ಫಾರ್ಮಿಂಗ್ “‌ ಕಡೆಗೆ ಆಧುನಿಕ ಕೃಷಿ
April 14, 2025
7:28 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group