(ಇಂಟರ್ ನೆಟ್ ಚಿತ್ರ )
ಕೊಟ್ಟಾಯಂ: ಇದೊಂದು ಆಘಾತಕಾರಿ ಚಿಕಿತ್ಸೆ. ಮಹಿಳೆಯೊಬ್ಬರಿಗೆ ಕ್ಯಾನ್ಸರ್ ಇದೆ ಎಂದು ಚಿಕಿತ್ಸೆ ನೀಡಿದ ಬಳಿಕ ಯಾವುದೇ ಕ್ಯಾನ್ಸರ್ ಅಂಶ ಇಲ್ಲದೇ ಇರುವುದು ಬೆಳಕಿಗೆ ಬಂದಿದೆ. ಅದಾಗಲೇ ಕಿಮೋಥೆರಪಿ ಚಿಕಿತ್ಸೆ ನಡೆದಿತ್ತು. ಇದೀಗ ಮಹಿಳೆ ಸಂಕಷ್ಟ ಎದುರಿಸುತ್ತಿದ್ದಾರೆ.
ಕೊಟ್ಟಾಯಂನ 38 ವರ್ಷದ ರಜನಿ ಎಂಬ ಮಹಿಳೆಯ ಸ್ತನದಲ್ಲಿ ಗಂಟು ಕಾಣಿಸಿಕೊಂಡಿತ್ತು. ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದು, ಅದರಲ್ಲಿ ಕ್ಯಾನ್ಸರ್ ಇದೆ ಎಂಬ ವರದಿ ಬಂದಿದೆ. ಈ ವರದಿ ಆಧಾರದ ಮೇಲೆ ಸರಕಾರಿ ಆಸ್ಪತ್ರೆ ವೈದ್ಯರು ಕೀಮೊಥೆರಪಿ ಮಾಡಿದ್ದರಂತೆ. ಮಹಿಳೆಗೆ ಕ್ಯಾನ್ಸರ್ ಇಲ್ಲದಿದ್ದರೂ ವೈದ್ಯರು ಕಿಮೋಥೆರಪಿ ನೀಡಿದ್ದು ಈಗ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಕ್ಯಾನ್ಸರ್ ಬಗ್ಗೆ ವಿಪರೀತ ಚರ್ಚೆ ನಡೆಯುತ್ತಿದೆ. ಅದರ ಚಿಕಿತ್ಸೆ ಬಗ್ಗೆ ಎರಡು ಪಟ್ಟು ಹೆಚ್ಚು ಚರ್ಚೆ ನಡೆಯುತ್ತಿದೆ. ವಿಪರೀತ ಖರ್ಚಾಗುವ ಕ್ಯಾನ್ಸರ್ ಚಿಕಿತ್ಸೆಗೆ ಸರಕಾರದಿಂದ ಸಾಕಷ್ಟು ವ್ಯವಸ್ಥೆ ಮಾಡಲಾಗುತ್ತಿದೆ. ಹಾಗಿದ್ದರೂ ರೋಗಿಗಳು ತಕ್ಷಣದ ಚಿಕಿತ್ಸೆಗೆ ಒಳಪಡುವಂತೆ ಮಾಡುವ ಕೆಲವು ದಂಧೆಗಳು ನಡೆಯುತ್ತಿರುವ ಬಗ್ಗೆ ಆರೋಪಗಳು ಇವೆ. ಹೀಗಾಗಿ ಸರಿಯಾದ ಚಿಕಿತ್ಸೆ ಹಾಗೂ ಪರೀಕ್ಷೆಗಳು ಅಗತ್ಯವಾಗಿದೆ ಎಂಬುದಕ್ಕೆ ಕೇರಳದ ಈ ಘಟನೆ ಸಾಕ್ಷಿಯಾಗಿದೆ.
ಉತ್ತರ ಭಾರತದ ಶುಷ್ಕ ಗಾಳಿ ಹಾಗೂ ಪೆಸಿಫಿಕ್ ಸಾಗರದ ಪ್ರಬಲ ಚಂಡಮಾರುತಗಳ ಪರಿಣಾಮ…
ಹೊಸ ಅಡಿಕೆಯ ಆರಂಭಿಕ ಧಾರಣೆ ₹330–350ಕ್ಕೆ ನಿಗದಿಯಾಗಿದ್ದು, ಆಮದು ಅಡಿಕೆಗೆ ಇರುವ ₹351ರ…
ಪದವಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನಕ್ಕೆ…
ಕರ್ನಾಟಕದಲ್ಲಿ ಬೀಜದಿಂದ ಗ್ರಾಹಕರ ತಟ್ಟೆಯವರೆಗೆ ಕೃಷಿ ಉತ್ಪನ್ನದ ಪಯಣವನ್ನು ಪತ್ತೆಹಚ್ಚಲು AI ಆಧಾರಿತ…
ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಒಂದೇ ದಿನ 4 ಚಿನ್ನ ಸೇರಿದಂತೆ 7 ಪದಕ…
ಅಸ್ಸಾಂನಲ್ಲಿ 5.74 ಟನ್ ಅಡಿಕೆ ವಶ, ಕೇರಳದಲ್ಲಿ 380 ಚೀಲ ಅಡಿಕೆ ಬಿಡುಗಡೆಗೆ…