ಬೆಳ್ಳಾರೆ:ಕ್ರೀಡೆಯನ್ನು ಸ್ಪರ್ಧಾತ್ಮಕವಾಗಿ ಕ್ರೀಡಾಳುಗಳು ಕಾಣಬೇಕು. ಇಂದು ಸೋತವರು ನಾಳೆ ಅಂತರಾಷ್ಟ್ರೀಯ ಮಟ್ಟದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಳ್ಳಬಹುದು. ಸೋತರೆ ಮತ್ತೊಮ್ಮೆ ಛಲದಿಂದ ಆಡಿ ವಿಜಯಲಕ್ಷ್ಮೀಯನ್ನು ಒಲಿಸಿಕೊಳ್ಳಬಹುದು ಎಂದು ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಾಳಪ್ಪ.ಕೆ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬೆಳ್ಳಾರೆ ಕೆಪಿಎಸ್ ಶಾಲೆಯ ಪಿಯುಸಿ ವಿಭಾಗದ ಆಯೋಜನೆಯೊಂದಿಗೆ ನಡೆದ ತಾಲೂಕು ಮಟ್ಟದ ಬಾಲಕ-ಬಾಲಕಿಯರ ತ್ರೋಬಾಲ್ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲೆ ಹಸೀನಾ ಬಾನು ಸೋಲು ಗೆಲುವನ್ನು ಪಡೆಯಲು ಛಲ ಹುಟ್ಟಿಸಬೇಕು. ಗೆದ್ದವರು ಅಹಂಕಾರ ಪಡದೆ ಮತ್ತಷ್ಟು ಮೇಲೇರಲು ಶ್ರಮಿಸಬೇಕು ಎಂದರು. ವೇದಿಕೆಯಲ್ಲಿ ತಾಲೂಕಿನ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.
ಹಿರಿಯ ಆಂಗ್ಲಭಾಷಾ ಉಪನ್ಯಾಸಕ ಎಂ.ಕೆ ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel