ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಕಲ್ಲಪಣೆಯಲ್ಲಿರುವ ಕುಡಿಯುವ ನೀರು ಶುದ್ಧೀಕರಣ ಘಟಕದಿಂದ ಕ್ಲೋರಿನ್ ಸೋರಿಕೆಯಾಗಿ ಜನತೆ ಆತಂಕಕ್ಕೆ ಒಳಗಾದರು. ಉಸಿರುಗಟ್ಟಿ ಮನೆಯಿಂದ ಓಡಿ ಬಂದ ಘಟನೆ ನಡೆದಿದೆ.
Advertisement
ಸೋಮವಾರ ತಡರಾತ್ರಿ ಸುಬ್ರಹ್ಮಣ್ಯ ಕಲ್ಲಪಣೆಯಲ್ಲಿರುವ ಕುಡಿಯುವ ನೀರು ಶುದ್ಧೀಕರಣ ಘಟಕದಿಂದ ಕ್ಲೋರಿನ್ ಸೋರಿಕೆಯಾಗಿ ಉಸಿರುಗಟ್ಟಿಸುವ ವಾಸನೆ ಬಂದಿತ್ತು. ಹೀಗಾಗಿ ಜನತೆ ಆತಂಕಕ್ಕೆ ಒಳಗಾಗಿ ಗ್ಯಾಸ್ ಸೋರಿಕೆಯಾಗಿದೆ ಎಂದು ಮನೆಯಿಂದ ಓಡಿ ಬಂದರು. ವಾಸನೆಗೆ ಸಮೀಪದ ಮನೆಯವರಿಗೆ ಉಸಿರಾಡಲು ಕಷ್ಟವಾಯಿತು.
Advertisement
Advertisement
ಬಳಿಕ ಅಗ್ನಿ ಶಾಮಕ ದಳದವರಿಗೂ ಮಾಹಿತಿ ನೀಡಲಾಯಿತು. ದೇವಸ್ಥಾನದ ಅಧಿಕಾರಿಗಳಿಗೆ, ಪೋಲೀಸರಿಗೆ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದರು. ಅಗ್ನಿಶಾಮಕದ ದಳದ ಸಿಬಂದಿಗಳು ಪರಿಶೀಲನೆ ನಡೆಸಿದಾಗ ಶುದ್ಧೀಕರಣ ಘಟಕದ ಟ್ಯಾಂಕ್ ನ ಒಳಗಡೆಯಲ್ಲಿ ತುಂಬಿಸಿಟ್ಟಿದ್ದ ಕ್ಲೋರಿನ್ ಸೋರಿಕೆಯಾಗಿರುವುದು ಕಂಡುಬಂತು. ಈಗ ಜನತೆಯ ಆತಂಕ ದೂರವಾಗಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement