ಸುಳ್ಯ: ಕ್ವಾರಂಟೈನ್ ಉಲ್ಲಂಘನೆ ಆರೋಪದಡಿ ಐದು ಮಂದಿಯ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.
Advertisement
ಜುಲೈ 15 ರಂದು ಸುಳ್ಯದ ಖಾಸಗೀ ಆಸ್ಪತ್ರೆಯೊಂದಕ್ಕೆ ಮೆಷಿನ್ ರಿಪೇರಿಗೆಂದು ತಮಿಳುನಾಡಿನಿಂದ ಆಗಮಿಸಿದ್ದ ವಾನನ್ಸ್, ದೇವರಾಮನ ,ಪ್ರೇಮಕುಮಾರ್ ಜಿ ಹಾಗೂ ಗಾಂಧೀನಗರ ನಿವಾಸಿ ಪ್ರವೀಣ್ ಜಾರ್ಜ್, ಬೆಳ್ಳಾರೆ ನಿವಾಸಿ ಶ್ರುತಿ ಎಂಬವರುಗಳನ್ನು ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಮಿತ್ತ ಕ್ವಾರೆಂಟೈನ್ ಗೆ ಒಳಗಾಗಲು ಅದೇಶಿಸಲಾಗಿತ್ತು. ಆದರೆ ಈ ವ್ಯಕ್ತಿಗಳು ಸರಕಾರ ಅದೇಶಿರುವ ಕೋವಿಡ್-19 ನಿಯಮವನ್ನು ಉಲ್ಲಂಘಿಸಿರುತ್ತಾರೆ ಎಂದು ಆರೋಪಿಸಲಾಗಿದ್ದು. ಸುಳ್ಯ ತಹಶಿಲ್ದಾರರು ನೀಡಿದ ದೂರಿನಂತೆ ಇವರ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗ ಕಾಯ್ದೆ 2020 ಯಂತೆ ಪ್ರಕರಣ ದಾಖಲಾಗಿರುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement