ಕ್ಷಯ ರೋಗದ ವಿರುದ್ಧದ ಹೋರಾಟದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ವಿವಿಧ ಕ್ರಮ ಕೈಗೊಳ್ಳುತ್ತಿದೆ. 2025 ರ ವೇಳೆಗೆ ಭಾರತದಲ್ಲಿ ಕ್ಷಯ ರೋಗ ನಿರ್ಮೂಲನೆಗೆ ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಈ ಕಡೆಗೆ ನಮ್ಮ ಬೆಳಕು…
ಕೇಂದ್ರ ಆರೋಗ್ಯ ಸಚಿವಾಲಯವು ಕ್ಷಯರೋಗದ ವಿರುದ್ಧದ ಹೋರಾಟದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಬಳಕೆಯನ್ನು ಅನ್ವೇಷಿಸುತ್ತಿದೆ. ಭಾರತವು ಅತಿ ಹೆಚ್ಚು ಟಿಬಿ ರೋಗಿಗಳನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದ್ದು 2025 ರ ವೇಳೆಗೆ ರೋಗವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿ ಈಗಾಗಲೇ ವಿವಿಧ ಪ್ರಯತ್ನ ಮಾಡುತ್ತಿದೆ.
ಆರೋಗ್ಯ ಸಚಿವಾಲಯದ ಕೇಂದ್ರ ಟಿಬಿ ವಿಭಾಗವು ಮುಂಬೈ ಮೂಲದ ವಾಧ್ವಾನಿ ಇನ್‌ಸ್ಟಿಟ್ಯೂಟ್ ಫಾರ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದದ ಪ್ರಕಾರ ಸಂಸ್ಥೆಯು ಪರಿಷ್ಕೃತ ರಾಷ್ಟ್ರೀಯ ಟಿಬಿ ನಿಯಂತ್ರಣ ಕಾರ್ಯಕ್ರಮವನ್ನು (ಆರ್‌ಎನ್‌ಟಿಸಿಪಿ) ಬೆಂಬಲಿಸುತ್ತದೆ, ಇದರಲ್ಲಿ “ಎಐ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು, ಪೈಲಟ್ ಮಾಡುವುದು ಮತ್ತು ನಿಯೋಜಿಸುವುದು” ಒಳಗೊಂಡಿರುತ್ತದೆ. “ಇದು ಹಾಟ್-ಸ್ಪಾಟ್ ಮ್ಯಾಪಿಂಗ್, ಸ್ಕ್ರೀನಿಂಗ್ ಮತ್ತು ಡಯಾಗ್ನೋಸ್ಟಿಕ್ಸ್‌ನ ಹೊಸ ವಿಧಾನಗಳನ್ನು ರೂಪಿಸುವುದು ಮತ್ತು ಇತರ ಎಐ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಆರ್‌ಎನ್‌ಟಿಸಿಪಿಯನ್ನು ಬೆಂಬಲಿಸುವುದರ ಹೊರತಾಗಿ ಆರೈಕೆ ನೀಡುವವರಿಗೆ ಬೆಂಬಲವನ್ನು ಒದಗಿಸುತ್ತದೆ” ಎಂದು ತಿಳಿಸಿದೆ.