ಖಗೋಳ ವೀಕ್ಷಕರಿಗೊಂದು ಅಪರೂಪದ ವಿದ್ಯಮಾನ | ಮೇ.13 ರಂದು ಬೆಳಗ್ಗೆ ಕಾಣಿಸಲಿದೆ ಸ್ವಾನ್ ಧೂಮಕೇತು |

May 12, 2020
7:29 PM

ಆಗಸದಲ್ಲಿ ಬುಧವಾರ (ಮೇ13) ಬೆಳಗಿನ ಜಾವ ಅಚ್ಚರಿಯ ವಿದ್ಯಮಾನವೊಂದು ಘಟಿಸಲಿದೆ. ಭೂಮಿಯ ಸಮೀಪ ಅಂದರೆ 8.33 ಕೋಟಿ ಕಿ.ಮೀ.ದೂರದಲ್ಲಿ ಸ್ವಾನ್ ಧೂಮಕೇತು ಹಾದು ಹೋಗಲಿದೆ. ಇದು ಈ ಧೂಮಕೇತು 5.7 ರಷ್ಟು ಪ್ರಕಾಶಮಾನ (Magnitude) ಹೊಂದಿದೆ. ಕನಿಷ್ಟ 6.0 ರಷ್ಟು ಕಾಂತಿ ಹೊಂದಿರುವ ಯಾವುದೇ ಆಕಾಶಕಾಯ ಬರಿಗಣ್ಣಿಗೆ ಗೋಚರಿಸುತ್ತದೆ.

Advertisement

ಸಮಭಾಜಕ ವೃತ್ತದಿಂದ ದಕ್ಷಿಣ ಭಾಗದಲ್ಲಿ ವಾಸಿಸುವ ಮಂದಿ ಈ ಧೂಮಕೇತುವನ್ನು ಬರಿ ಕಣ್ಣಿನಿಂದ ವೀಕ್ಷಿಸಬಹುದಾಗಿದೆ.ನಾವು ಉತ್ತರ ಭಾಗದಲ್ಲಿರುವ ಕಾರಣ ಬರಿಗಣ್ಣಿಗೆ ಗೋಚರಿಸುವ ಸಾಧ್ಯತೆ ಕಡಿಮೆ. ಆದಾಗ್ಯೂ ದೂರದರ್ಶಕದ ಮೂಲಕ ವೀಕ್ಷಿಸಬಹುದಾಗಿದೆ. ಬೆಳಗ್ಗೆ ಸುಮಾರು 4.30 ರ ನಂತರ ಈಶಾನ್ಯ ಉತ್ತರ ಭಾಗದಲ್ಲಿ ಮೀನ ರಾಶಿಯಲ್ಲಿ ಕಾಣಿಸಿಕೊಳ್ಳಲಿದೆ.

ಮೇ.27 ಕ್ಕೆ ಈ ಧೂಮಕೇತು ಸೂರ್ಯನನ್ನು ಸಮೀಪಿಸಲಿದೆ. CometSWAN ಎಂಬ ಟ್ವಿಟರ್ ಖಾತೆಯಲ್ಲಿ ಈ ಧೂಮಕೇತುವಿನ ಚಲನೆಯನ್ನು ಅನುಸರಿಸಬಹುದು.

ಏನಿದು ಧೂಮಕೇತು:  ಅಸಂಖ್ಯಾತ ಕ್ಷುದ್ರ ಕಾಯಗಳು ಸೂರ್ಯನಿಗೆ ಪರಿಭ್ರಮಣೆ ಹಾಕುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಹೆಚ್ಚಿನ ಧೂಳಿನ ಅಂಶ ಹೊಂದಿರುತ್ತವೆ.ಅವು ಸೂರ್ಯನ ಸಮೀಪ ಬರುತ್ತಿದ್ದಂತೆ ಸೂರ್ಯನ ವಿಪರೀತ ಶಾಖಕ್ಕೆ ಧೂಳಿನ ಹೊಗೆಯನ್ನು ಬಾಲದ ರೂಪದಲ್ಲಿ ಹೊರಸೂಸುತ್ತವೆ. ಅದುವೇ ಧೂಮಕೇತು.

76 ವರ್ಷಗಳಿಗೊಮ್ಮೆ ಸೂರ್ಯನ ಸಮೀಪ ಬರುವ ಹ್ಯಾಲಿ ಧೂಮಕೇತುವಿನಂತೆ ನಿಗದಿತ ಕಕ್ಷೆಯಲ್ಲಿ ಚಲಿಸುವ ಧೂಮಕೇತುಗಳೂ ಇವೆ.ಇನ್ನೂ ಒಂದು ಧೂಮಕೇತು ATLAS ಇದೇ ಮೇ 23 ರಂದು ಭೂಮಿಯ ಸಮೀಪ ಹಾದು ಹೋಗಲಿದೆ. ಇದು ಮೇ 31 ರಂದು ಸೂರ್ಯನ ಸಮೀಪ ದಾಟಿಹೋಗಲಿದೆ.ಇದು ಕೂಡಾ ಬರಿಗಣ್ಣಿಗೆ ಗೋಚರಿಸುವ ಸಾಧ್ಯತೆ ಕಡಿಮೆ.

Advertisement

ಮಾಹಿತಿ :

 

 

 

Advertisement

ಪಿ ಜಿ ಎಸ್ ಎನ್ ಪ್ರಸಾದ್ ಬಾಳಿಲ

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶರಧಿ.ಡಿ.ಎಸ್
July 13, 2025
8:14 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕೃತಿಕಾ
July 13, 2025
8:01 AM
by: ದ ರೂರಲ್ ಮಿರರ್.ಕಾಂ
ರಾಜ್ಯಾದ್ಯಂತ ಲಕ್ಷ ವೃಕ್ಷ ಗಿಡಗಳ ನಾಟಿ ಕಾರ್ಯಕ್ರಮ | ಹೆಬ್ರಿಯ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ಚಾಲನೆ
July 13, 2025
7:50 AM
by: The Rural Mirror ಸುದ್ದಿಜಾಲ
ಶತ್ರುಗಳಿಂದ ಈ ರಾಶಿಯವರಿಗೆ ಜೀವಕ್ಕೆ ಅಪಾಯವಿದೆ..?
July 13, 2025
7:40 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group