ಹಬ್ಬ ಬಂತೆಂದರೆ ಮನೆಮನಗಳಲ್ಲಿ ಸಂಭ್ರಮದ ವಾತಾವರಣ. ದಿನನಿತ್ಯದ ಬದುಕಿನ ಜಂಜಾಟಗಳನ್ನು ಬದಿಗಿಟ್ಟು ಮನೆಮಂದಿ ಎಲ್ಲಾಒಟ್ಟಾಗಿ ಸೇರಿಹಬ್ಬದ ಆಚರಣೆ ಜೊತೆಗೆ ಭೂರಿಭೋಜನ ಮಾಡುವ ಸದಾವಕಾಶ ದೊರೆಯುವುದು ಇಂತಹ ಸಂದರ್ಭಗಳಲ್ಲಿಯೇ. ಅದರಲ್ಲೂ ತಿಂಡಿ ಪ್ರಿಯನಾದ ಗಣೇಶನ ಹಬ್ಬದಲ್ಲಿ ಬಗೆಬಗೆಯ ತಿಂಡಿಗಳಿಗೆ ತುಸು ಹೆಚ್ಚಿನ ಪ್ರಾಧಾನ್ಯತೆಎಂದರೆತಪ್ಪಲ್ಲ.
ಭಾರತಾದ್ಯಂತ ಅದ್ಧೂರಿಯಾಗಿ ಆಚರಿಸುವ ಹಬ್ಬವಾದ ಗಣೇಶಚೌತಿ ಅಂದಾಕ್ಷಣ ಮೊದಲು ನೆನಪಾಗುವುದು “ಶ್ರೀ ಕ್ಷೇತ್ರ ಸೌತಡ್ಕ”.
ನಾವು ನೋಡಿದಂತೆ ಹೆಚ್ಚಿನ ಎಲ್ಲಾ ದೇವಸ್ಥಾನಗಳಲ್ಲೂ ದೇವರನ್ನುಗರ್ಭಗುಡಿಯಲ್ಲಿಟ್ಟು ಪೂಜಿಸಲಾಗುತ್ತದೆ.ಆದರೆ ಬೆಳ್ತಂಗಡಿ ತಾಲೂಕಿನ ಊರುಕೊಕ್ಕಡಕ್ಕೆ ಸನಿಹವಾದ “ಸೌತಡ್ಕ”ದಲ್ಲಿ ನೆಲೆಸಿರುವ ಗಣಪ ಮಾತ್ರ ಸಕಲ ಜೀವರಾಶಿಗಳಿಗೂ ಮುಕ್ತವಾಗಿ ದರ್ಶನ ನೀಡುತ್ತಾಎಲ್ಲರಿಗಿಂತ ಭಿನ್ನನೆನಿಸಿಕೊಂಡಿದ್ದಾನೆ.
ಇತಿಹಾಸದ ಪ್ರಕಾರ ಸುಮಾರು 800 ವರ್ಷಗಳ ಹಿಂದೆರಾಜರ ಆಳ್ವಿಕೆಯಲ್ಲಿ ರಾಜವಂಶಸ್ಥರಿಗೆ ಸೇರಿದ ದೇವಾಲಯ ಈ ಊರಿನಲ್ಲಿಇತ್ತಂತೆ. ಕಾಲಾನಂತರ ಈ ದೇವಸ್ಥಾನವು ಸಂಗ್ರಾಮವೊಂದರಲ್ಲಿ ನಾಶವಾಯಿತು. ಹಲವು ವರ್ಷಗಳ ನಂತರ ಗೋವನ್ನು ಮೇಯಿಸುತ್ತಿದ್ದ ಬಾಲಕರಿಗೆ ಸುಂದರವಾದ ಗಣೇಶನ ವಿಗ್ರಹವೊಂದು ದೊರೆಯಿತು. ಅವರು ಪ್ರಸ್ತುತ ಈಗ ಇರುವ ಮರದ ಬುಡಕ್ಕೆ ವಿಗ್ರಹವನ್ನುತಂದುಇಟ್ಟು, ತಮ್ಮಜಾಗದಲ್ಲಿ ಬೆಳೆದಿದ್ದ ಸೌತೆಕಾಯಿಗಳನ್ನು ತಂದು ಪ್ರತಿದಿನ ಪೂಜಿಸುತ್ತಿದ್ದರು.ಅಂದಿನಿಂದ ಈ ಪ್ರದೇಶ “ಸೌತಡ್ಕ” ಎಂದು ಪ್ರಸಿದ್ದಿಯಾಯಿತು ಎನ್ನುತ್ತದೆ ಸ್ಥಳ ಪುರಾಣ.
ತದ ನಂತರ ಇಲ್ಲಿಯ ಬ್ರಾಹ್ಮಣರೊಬ್ಬರು ಗಣೇಶನಿಗೆ ಗೋಪುರ ಕಟ್ಟಲು ನಿರ್ಧರಿಸಿದಾಗ ದೇವರು ದನ ಮೇಯಿಸುವ ಬಾಲಕನ ರೂಪದಲ್ಲಿ ಕನಸಿನಲ್ಲಿ ಬಂದು ತನಗೆ ಗೋಪುರ ಕಟ್ಟಿಸುವುದಾದರೆ ಕಾಶಿಯಲ್ಲಿರುವ ತನ್ನತಂದೆ ವಿಶ್ವನಾಥನಿಗೆ ಕಾಣಿಸುವಷ್ಟುಎತ್ತರದ ಗೋಪುರವನ್ನು ದಿನ ಬೆಳಗಾಗುವುದರೊಳಗಾಗಿ ಕಟ್ಟಬೇಕು ಎಂದು ಹೇಳದನಂತೆ. ಅಂದಿನಿಂದ ಇಲ್ಲಿಗೋಪುರ ಕಟ್ಟುವ ನಿರ್ಧಾರವನ್ನು ಕೈ ಬಿಡಲಾಯಿತು.ಹೀಗಾಗಿ ಇಲ್ಲಿಗಣೇಶ ವರ್ಷದ 365 ದಿನವೂ ಭಕ್ತರಿಗೆ ಮುಕ್ತವಾಗಿ ದರ್ಶನ ನೀಡುತ್ತಾನೆ.
ಇಂದು ನಾವು ಅಲ್ಲಲ್ಲಿ ಸಾರ್ವಜನಿಕವಾಗಿ ಗಣೇಶನ ಮೂರ್ತಿಗಳನ್ನು ಇಟ್ಟು ಪೂಜಿಸುವುದನ್ನು ಕಾಣುತ್ತೇವೆ. ಆದರೆ ಕೊಕ್ಕಡದ ಪರಿಸರದಲ್ಲಿ ಗಣೇಶ ಎಂದರೆ ಅದು “ಸೌತಡ್ಕ ಮಹಾಗಣಪತಿ”.ಈ ಪರಿಸರದ ಜನ ತಮ್ಮ ಮನೆಗಳಲ್ಲಿ ಅಪ್ಪ, ಪಂಕಜ್ಜಾಯ, ಮೋದಕ ಇತ್ಯಾದಿ ಬಗೆ ಬಗೆಯ ಭಕ್ಷ್ಯಗಳನ್ನು ಮಾಡಿ ಸೌತಡ್ಕದ ಗಣೇಶನಿಗೆ ಅರ್ಪಿಸಿದ ನಂತರ ಪ್ರಸಾದವಾಗಿ ಸೇವಿಸುತ್ತಾರೆ. ಪ್ರಸಿದ್ಧಿ ಪಡೆದಿರುವ ಇಲ್ಲಿಯ ಗಣೇಶನಿಗೆ ಚೌತಿಯ ದಿನದಂದು 108 ತೆಂಗಿನ ಕಾಯಿಗಳ ಗಣಪತಿಹೋಮ, ಪಂಚಾಮೃತದೊಂದಿಗೆ 108 ಸೀಯಾಳ ಅಭೀಷೇಕ ಅಪ್ಪ, ಪಂಜಕಜ್ಜಾಯ, ಪಾಯಸ, ನೈವೇಧ್ಯ, ಹಣ್ಣು ಹಂಪಲು ತಾಂಬೂಲ ಸಮರ್ಪಿಸಲಾಗುತ್ತದೆ.
# ವಂದನಾರವಿ ಕೆ.ವೈ.ವೇಣೂರು.
ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಗ್ರಾಮೀಣ ಮಹಿಳೆಯರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಅರಣ್ಯ, ಪರಿಸರ ಸಚಿವ ಈಶ್ವರ ಬಿ.ಖಂಡ್ರೆ…
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2024025 ನೇ ಸಾಲಿನಲ್ಲಿ ಎಫ್ಎಕ್ಯೂ ಗುಣಮಟ್ಟದ…
ದೀಪಾವಳಿ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಯ ಬಿಂಡಿಗ ದೇವಿರಮ್ಮ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸಿ,…
ಈಗಿನಂತೆ ಈ ಮಳೆಯು ನವೆಂಬರ್ 4ರ ವರೆಗೆ ಮುಂದುವರಿಯುವ ಲಕ್ಷಣಗಳಿವೆ.
ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ದೀಪಾವಳಿಗೆ ದೀಪವೇ ವಿಶೇಷ. ವಿವಿಧ ವಿನ್ಯಾಸದ ಬಣ್ಣದ ದೀಪಗಳನ್ನು…