Advertisement
ಅನುಕ್ರಮ

ಗರ್ಭಪಾತ ತಡೆಗೆ ಕಠಿಣ ಕಾನೂನು ತಂದ ಯು ಎಸ್

Share

ಯುನೈಟೆಡ್ ಸ್ಟೇಟ್ಸ್ ನಲ್ಲಿ ಅಲಬಾಮ ಸೆನೆಟ್ ಗರ್ಭಪಾತ ತಡೆಗೆ ಸಂಬಂಧಿಸಿದ ಕಠಿನ ಕಾನೂನನ್ನು ಜಾರಿಗೊಳಿಸಿದೆ. ಇದರ ಪ್ರಕಾರ ಅತ್ಯಾಚಾರದ ಸಂದರ್ಭದಲ್ಲೂ ಕೂಡ, ಅತ್ಯಾಚಾರಕ್ಕೊಳಗಾದ ಮಹಿಳೆ ಗರ್ಭಿಣಿಯಾದರೆ, ಅಂತಹ ಸಂದರ್ಭದಲ್ಲಿ ಗರ್ಭಪಾತ ಮಾಡಿದರು ಕೂಡ, ಮಾಡಿದ ವೈದ್ಯರಿಗೆ ಕಠಿಣ ಶಿಕ್ಷೆ ವಿಧಿಸುವ ಅವಕಾಶವನ್ನು ನೀಡಿದೆ. ಇದರ ಲಿಖಿತ ರೂಪವನ್ನು ರಿಪಬ್ಲಿಕನ್ ನೇತೃತ್ವದ ಸೆನೇಟ್ ಅಲ್ಲಿನ ಗವರ್ನರ್ ಕೇ ಇವೇ ಇವರ ಬಳಿ ಸಹಿಗಾಗಿ ಕಳುಹಿಸಿದೆ. ಒಂದು ವೇಳೆ ಇದು ಅಂಗೀಕರಿಸಲ್ಪಟ್ಟಲ್ಲಿ , ಕಾನೂನಾತ್ಮಕ ಸಮರವು ಅಲ್ಲಿನ ಸುಪ್ರೀಂ ಕೋರ್ಟ್ ತನಕವೂ ತಲುಪಬಹುದು.

ಅದರ ಪ್ರಕಾರ ಗರ್ಭಪಾತ ಮಾಡುವ ವೈದ್ಯನಿಗೆ ಹತ್ತರಿಂದ 99 ವರ್ಷಗಳ ತನಕ ಜೈಲುಶಿಕ್ಷೆ ಅನುಭವಿಸಬೇಕಾ ಗಬಹುದು. ಗರ್ಭಿಣಿ ತಾಯಿಯ ಜೀವಕ್ಕೆ ಅಪಾಯ ಇದ್ದಲ್ಲಿ ಹಾಗೂ ಗರ್ಭದಲ್ಲಿನ ಶಿಶುವಿಗೆ ಅಪಾಯ ಇದ್ದಲ್ಲಿ ಮಾತ್ರ ಗರ್ಭಪಾತವನ್ನು ಆ ಕಾನೂನು ಮಾನ್ಯ ಮಾಡುತ್ತದೆ.

ಆದರೆ ಮಾನವ ಹಕ್ಕುಗಳ ರಕ್ಷಣೆಗೆ ಹೋರಾಟ ಮಾಡುವ ,ಅಮೆರಿಕಾದ ಎ.ಸಿ .ಎಲ್. ಯು. ಎಂಬ ಸಂಸ್ಥೆಯೊಂದು ಈ ಕಾಯ್ದೆಯನ್ನು ಜಾರಿಗೊಳಿಸುವುದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ಹೂಡಲು ಸಿದ್ಧವಾಗಿದೆ. ಅವರ ಪ್ರಕಾರ ಈ ಕಾಯ್ದೆಯು” ಅತ್ಯಾಚಾರದಿಂದ ಸಂತ್ರಸ್ತರಾದ ಮಹಿಳೆಯರನ್ನು ಶಿಕ್ಷಿಸುವಂತಿದೆ. ಮಹಿಳೆಯರಿಗೆ ಅವರ ದೇಹದ ಮೇಲಿರುವ ಹಕ್ಕನ್ನು ಮತ್ತು ನಿಯಂತ್ರಣವನ್ನು ಕಸಿದು ಕೊಳ್ಳುವಂತೆ ಇದೆ. ಅತ್ಯಾಚಾರದ ಆಕಸ್ಮಿಕಕ್ಕೆ ಒಳಗಾದ ಹೆಣ್ಣನ್ನು, ಮನಸ್ಸಿಲ್ಲದಿದ್ದರೂ ಬಲವಂತವಾಗಿ ಹೆರುವಂತೆ ಮಾಡುತ್ತದೆ”. ಅಲ್ಲಿನ ರಾಷ್ಟ್ರೀಯ ಮಹಿಳಾ ಸಂಘಟನೆಯು ಈ ಕಾಯ್ದೆಯನ್ನು ಸಂವಿಧಾನಬಾಹಿರ ಎಂದು ವರ್ಣಿಸಿದೆ. “ಅಷ್ಟೇ ಅಲ್ಲ, ಇದು ಮಹಿಳೆಯರನ್ನು ದೈಹಿಕವಾಗಿ, ಆರ್ಥಿಕವಾಗಿ ಹಾಗೂ ಜೈವಿಕವಾಗಿ ನಿಯಂತ್ರಿಸಿ, ಆಡಳಿತಗಾರರು ಶೋಷಣೆ ಮಾಡುತ್ತಿದ್ದ, ಕತ್ತಲ ದಿನಗಳ ಸ್ಥಿತಿಗೆ ತಳ್ಳುತ್ತದೆ ” ಎಂದು ಅಭಿಪ್ರಾಯ ಪಟ್ಟಿದೆ.

ಆದರೆ ಅಲಬಾಮಾ ಗವರ್ನರ್ ಆಗಿರುವ ವಿಲ್ ಐನ್ಸ್ವರ್ತ್ ಈ ಕಾಯ್ದೆಯನ್ನು ಸ್ವಾಗತಿಸಿ” ಹುಟ್ಟಲಿರುವ ಗರ್ಭಸ್ಥ ಶಿಶು ವಿನ ಹಕ್ಕುಗಳನ್ನು ರಕ್ಷಣೆ ಮಾಡಲಿರುವ ಪ್ರಬಲ ಹೆಜ್ಜೆ” ಎಂದಿದ್ದಾರೆ.

ಭಾರತದಲ್ಲೂ ಕೂಡ ಭ್ರೂಣಹತ್ಯೆಯನ್ನು ತಡೆಗಟ್ಟಲು ಇತ್ತೀಚೆಗೆ ಕಾನೂನನ್ನು ಬಲಗೊಳಿಸಿದ ಸಂದರ್ಭಗಳನ್ನು ನಾವು ನೆನಪಿಸಿಕೊಳ್ಳಬಹುದು.
ಗರ್ಭಿಣಿಯರ ಹೊಟ್ಟೆಯ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ದಾಖಲೆಗಳನ್ನು ಭಾರತದಲ್ಲಿ ಕಟ್ಟುನಿಟ್ಟಾಗಿಸಿದೆ. ಆದರೆ ಅತ್ಯಾಚಾರಕ್ಕೆ ಒಳಗಾದ ಸಂದರ್ಭದಲ್ಲಿ ಆ ಮಹಿಳೆಗೆ ಗರ್ಭಪಾತ ಮಾಡುವ ಅವಕಾಶ ಭಾರತದ ಕಾನೂನಿನಲ್ಲಿ ಇದೆ.

ತಪಾಸಣಾ ಕೇಂದ್ರಗಳು ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಕೇಂದ್ರಗಳು ದಾಖಲೆಗಳನ್ನು ಸರಿಯಾಗಿ ಇಡದಿರುವುದು ಹೆಣ್ಣು ಭ್ರೂಣ ಹತ್ಯೆಯ ಮೂಲ ಕಾರಣ., ಮತ್ತು ಕಾನೂನಿನ ಅಡಿಯಲ್ಲಿ ಅದೊಂದು ಶಿಕ್ಷಾರ್ಹ ಅಪರಾಧ ಮತ್ತು ಅದನ್ನು ಬರವಣಿಗೆಯಲ್ಲಿನ ಪ್ರಮಾದ ಎಂದು ಹೇಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. “ಲಿಂಗಗಳ ಅನುಪಾತದಲ್ಲಿನ ವ್ಯತ್ಯಯದಿಂದಾಗಿ ಮಹಿಳೆಯರ ಮೇಲಿನ ದೌರ್ಜನ್ಯ, ಮಹಿಳೆಯರ ಕಳ್ಳಸಾಗಾಟ ಹಾಗೂ ವರದಕ್ಷಿಣೆ ಪ್ರಕರಣಗಳು ಹೆಚ್ಚುತ್ತಿವೆ. ಆದುದರಿಂದ ಗರ್ಭಪಾತ ತಡೆ ಕಾನೂನನ್ನು, ಹೆಣ್ಣು ಮಗುವನ್ನು ರಕ್ಷಿಸುವ ಕಾರ್ಯದ ಭಾಗವಾಗಿ, ಸಶಕ್ತಗೊಳಿಸ ಬೇಕಾದ ಹಾಗೂ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾದ ಅಗತ್ಯವಿದೆ” ಇಂದು ಭಾರತದ ಸುಪ್ರೀಂ ಕೋರ್ಟ್ ಹೇಳಿದೆ.

ಆದರೆ ಭಾರತದ” ಫೆಡರೇಶನ್ ಆಫ್ ಓಬ್ಸ್ಟೆಟ್ರಿಕ್ಸ್ ಅಂಡ್ ಗೈನೆಕಾಲಜಿಕಲ್ ಸೊಸೈಟಿಯು , ಗರ್ಭಪಾತ ತಡೆ ಕಾನೂನನ್ನು ಸಡಿಲಗೊಳಿಸುವಂತೆ ಮನವಿ ಮಾಡಿದೆ. ಭ್ರೂಣ ಲಿಂಗ ಪತ್ತೆ ಕಾನೂನಿನ ಪ್ರಕಾರ” ಯಾವುದೇ ದಾಖಲೆ ಮಾಡುವಾಗಿನ ಬರವಣಿಗೆಯ ವ್ಯತ್ಯಾಸಗಳು ಅಥವಾ ಪ್ರಮಾದಗಳು, ದಾಖಲೆಗಳನ್ನು ಸರಿಯಾಗಿ ನಿರ್ವಹಿಸದಿರುವುದು, ಆ ಆಸ್ಪತ್ರೆ ಅಥವಾ ವೈದ್ಯರ ತನಿಖೆ, ಬಂಧನ, ಜೈಲು, ದಂಡ ಹಾಗೂ ವೈದ್ಯಕೀಯ ವೃತ್ತಿ ಅನುಮತಿಯನ್ನು ರದ್ದುಗೊಳಿಸುವ ಅವಕಾಶವನ್ನು ನೀಡಿದೆ. ಆದರೆ ವೈದ್ಯರ ಈ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.” ಭ್ರೂಣಹತ್ಯೆಗೆ ಅನುಮತಿ ಕೊಡುವುದಕ್ಕಿಂತ ದೊಡ್ಡದಾದ ಪಾಪ, ಅನೈತಿಕತೆ ಹಾಗೂ ಸಮಾಜ ವಿರೋಧಿ ಕೃತ್ಯ ಇನ್ನೊಂದಿಲ್ಲ. ದಾಖಲೆಗಳನ್ನು ಸರಿಯಾಗಿ ಇಡದಿರುವುದೇ ಅಪರಾಧ” ಎಂದು ಅರುಣ್ ಮಿಶ್ರಾ ಹಾಗೂ ವಿನೀತ್ ಶರಣ್ ಎಂಬ ನ್ಯಾಯಾಧೀಶರುಗಳನ್ನು ಒಳಗೊಂಡ ನ್ಯಾಯಪೀಠವು ಹೇಳಿದೆ.

ಆದರೆ ಪ್ರಸೂತಿ ತಜ್ಞರ ಫೆಡರೇಶನ್ ಇದನ್ನು ಪ್ರತಿನಿಧಿಸುವ ನ್ಯಾಯಮೂರ್ತಿಗಳಾದ ಸಾಲಿ ಸೊರಬ್ಜಿ ಹಾಗೂ ಶ್ಯಾಂ ದಿವಾನ್ ಇವರು , “ಬರವಣಿಗೆಯಲ್ಲಿ ಉಂಟಾಗುವ ಸಣ್ಣ ಸಣ್ಣ ಅಕ್ಷರ ವ್ಯತ್ಯಾಸಗಳು, ದಿನಾಂಕ ದಲ್ಲಿ ಉಂಟಾಗುವ ವ್ಯತ್ಯಾಸಗಳಿಂದ ವೈದ್ಯರು ಕಠಿಣ ಶಿಕ್ಷೆಗೆ ಗುರಿಯಾಗಬೇಕಾದ ಪ್ರಸಂಗಗಳು ಈ ಕಾಯಿದೆಯಿಂದ ಉಂಟಾಗುತ್ತವೆ” ಎಂದಾಗ ನ್ಯಾಯಪೀಠವು” ಜವಾಬ್ದಾರಿಯುತ ನಾದ ವೈದ್ಯನು ಈ ಕಾನೂನಿನ ಅಂಶಗಳನ್ನು ಅರಿಯಬೇಕಾದ ಮತ್ತು ತಪಾಸಣೆ ನಡೆಸುವಾಗ ಅದನ್ನು ಅನುಷ್ಠಾನಗೊಳಿಸಬೇಕಾದದ್ದು ಕರ್ತವ್ಯವಾಗಿದೆ. ಈ ಕಾನೂನನ್ನು ತೆಳ್ಳಗಾಗಿಸುವ ಯಾವುದೇ ಬದಲಾವಣೆಗಳು, ಹೆಣ್ಣುಶಿಶುವಿನ ಜೀವಿಸುವ ಹಕ್ಕನ್ನು ಪ್ರತಿಪಾದಿಸುವ ಸಂವಿಧಾನದ ಆರ್ಟಿಕಲ್ 21 ರ ಉದ್ದೇಶವನ್ನು ವಿಫಲಗೊಳಿಸುತ್ತದೆ. ಕಾನೂನಿನ ಸ್ವರೂಪ ಅರ್ಥಮಾಡಿಕೊಳ್ಳುವ ಮತ್ತು ಅಗತ್ಯವಿರುವ ದಾಖಲೆಗಳನ್ನು ಭರ್ತಿ ಮಾಡುವ, ತಪಾಸಣೆಗಳ ಉದ್ದೇಶ ಮತ್ತು ಪರಿಣಾಮವನ್ನು ದಾಖಲಿಸುವಂತದ್ದು ತಪಾಸಣಾ ಪೂರ್ವ ಅಗತ್ಯ ಆದ್ಯತೆ. ಇದನ್ನು ಅನುಷ್ಠಾನಗೊಳಿಸಲು ತಯಾರಿ ಇಲ್ಲದವನು ಶ್ರೇಷ್ಠವಾದ ವೈದ್ಯಕೀಯ ವೃತ್ತಿ ನಡೆಸಲು ಅನರ್ಹ” ಎಂದು ನ್ಯಾಯಪೀಠವು ಹೇಳಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಅಡಿಕೆ ಮಾರುಕಟ್ಟೆ- ಸದ್ಯ ಮಾರುಕಟ್ಟೆ ಸ್ಥಿರ | ರಬ್ಬರ್‌ ಧಾರಣೆ ಇಳಿಕೆಯ ಹಾದಿ

ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಇಂದು ಬೆಲೆಗಳು ಸಾಮಾನ್ಯವಾಗಿ ಸ್ಥಿರವಾಗಿದ್ದು, ಉತ್ತಮ ಗುಣಮಟ್ಟದ…

6 hours ago

ಹವಾಮಾನ ವರದಿ | 07-03-2026 | ಕರಾವಳಿಯಲ್ಲಿ ಮೋಡ–ಮಳೆಯ ಸುಳಿವು | ಜೋರು ಮಳೆಯ ಲಕ್ಷಣವಿಲ್ಲ

ಕರಾವಳಿ ಜಿಲ್ಲೆಗಳಲ್ಲಿ ಮೋಡ ಹಾಗೂ ಸೆಖೆಯ ವಾತಾವರಣ ಮುಂದುವರಿಯಲಿದ್ದು, ಕೆಲವೆಡೆ ಸಂಜೆ ಅಥವಾ…

7 hours ago

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ವಿರುದ್ಧ ಬಿಗುವಿನ ಕ್ರಮ | ಪಾಕಿಸ್ತಾನದಲ್ಲಿ ವಿಷಕಾರಿ ಅಡಿಕೆ ವಿರುದ್ಧ ದಾಳಿ

ಮ್ಯಾನ್ಮಾರ್‌ನಿಂದ ಅಡಿಕೆ ಕಳ್ಳಸಾಗಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಕಠಿಣಗೊಳಿಸಿದೆ.…

9 hours ago

ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ..

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ಮಹತ್ವದ ಘೋಷಣೆ ರಾಜ್ಯ…

13 hours ago

ಕುಕ್ಕೆ–ಕೊಲ್ಲೂರು ದೇವಾಲಯಗಳಿಗೆ ಅಭಿವೃದ್ಧಿ ಪ್ರಾಧಿಕಾರ : ಮುಜರಾಯಿ ಇಲಾಖೆಗೆ ಬಜೆಟ್ ಬಲ

ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮಹತ್ವದ…

14 hours ago

ರೈತರಿಗೆ ಬಜೆಟ್‌ನಲ್ಲಿ ಸಿಕ್ಕ 15 ಘೋಷಣೆಗಳು | ಕೃಷಿ, ಅಡಿಕೆ, ಮೀನುಗಾರಿಕೆ ಕ್ಷೇತ್ರಕ್ಕೆ ವಿಶೇಷ ಯೋಜನೆಗಳು

ರಾಜ್ಯ ಬಜೆಟ್‌ 2026-27ರಲ್ಲಿ ರೈತರಿಗೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ…

1 day ago