ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ನೈತಾಡಿ -ಬೆದ್ರಾಳ ಭಗತ್ ಸಿಂಗ್ ಸಾರ್ವಜನಿಕ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಕಪ್ಪು ಬಣ್ಣದ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರು ಠಾಣಾ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದು ಸಾಝಿಲ್ ಅಹಮ್ಮದ್ (24) ಎಂಬವನನ್ನು ವಶಕ್ಕೆ ಪಡೆದಿದ್ದು ಮತ್ತೊಬ್ಬ ಪರಾರಿಯಾಗಿದ್ದಾನೆ.
ನರಿಮೊಗರು ಗ್ರಾಮದ ಸಾಝಿಲ್ ಅಹಮ್ಮದ್ (24) ಪೊಲೀಸರು ವಶಕ್ಕೆ ಪಡೆದ ವ್ಯಕ್ತಿಯಾದರೆ, ಪರಾರಿಯಾದ ವ್ಯಕ್ತಿ ಪುತ್ತೂರು ಕೆಮ್ಮಿಂಜೆ ಗ್ರಾಮದ ಮಹಮ್ಮದ್ ಅಶ್ರಫ್ ಎಂದು ತಿಳಿದುಬಂದಿರುತ್ತದೆ. ಬಂಧಿತ ಆರೋಪಿಯನ್ನು ಮತ್ತು ಆತನ ಬಳಿಯಿದ್ದ ದ್ವಿಚಕ್ರ ವಾಹನನ್ನು ತಪಾಸಣೆ ನಡೆಸಲಾಗಿ ಆತನಿಂದ ಅಂದಾಜು ಸುಮಾರು ರೂ 3000 ಮೌಲ್ಯದ 166 ಗ್ರಾಂ ಗಾಂಜಾ, ಸುಮಾರು ರೂ 40,000 ಮೌಲ್ಯದ ದ್ವಿಚಕ್ರ ವಾಹನ ಮತ್ತು ಸುಮಾರು ರೂ 12,000 ಮೌಲ್ಯದ ಮೊಬೈಲ್ ಪೋನ್ ನ್ನು ವಶಕ್ಕೆ ಪಡೆಯಲಾಗಿದ್ದು, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel