ಸುಳ್ಯ: ಮಹಾತ್ಮಾ ಗಾಂಧೀಜಿಯವರು ಎಲ್ಲರ ಆತ್ಮದ ಸೊತ್ತು. ಗಾಂಧೀಜಿಯ ಮನಸ್ಸು ಎಲ್ಲೆಡೆ ಕೆಲಸ ಮಾಡ್ತಾ ಇದೆ. ಪ್ರತಿಯೊಬ್ಬರ ಮನಸ್ಸಿನಲ್ಲಿ ಗಾಂಧೀಜಿ ನೆಲೆಯಾಗಬೇಕು. ಆ ಮೂಲಕ ಗಾಂಧೀಜಿಯ ಕಲ್ಪನೆಯ ನಾಡು ಸಾಕಾರಗೊಳ್ಳಬೇಕು ಎಂದು ಕಲಾವಿದ, ನಾಟಕಕಾರ ಮೋಹನ್ ಸೋನ ಹೇಳಿದ್ದಾರೆ.
ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ಗಾಂಧಿ ಚಿಂತನ ವೇದಿಕೆಯ ವತಿಯಿಂದ ಬೆಳ್ಳಾರೆಯಿಂದ ಸುಳ್ಯಕ್ಕೆ ನಡೆದ ಗಾಂಧಿ ನಡಿಗೆ ಕಾರ್ಯಕ್ರಮಕ್ಕೆ ಸೋಣಂಗೇರಿಯಲ್ಲಿ ನೀಡಿದ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ಸುಗುಣ ಗೌಡ, ರುಕ್ಮಯ್ಯ ಗೌಡ, ಬಾಲಕೃಷ್ಣ ಆಳ್ವ, ಮೋಂಟಡ್ಕ ರಾಘವ ಗೌಡ, ದೇರ್ಲ ನಾರಾಯಣ ರೈ, ಕೃಷ್ಣ ಸ್ವಾಮಿ ಕುಕ್ಕಂದೂರು, ಪುಟ್ಟ ಅಜಕ್ಕಳಮನೆ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎನ್.ಭವಾನಿಶಂಕರ, ನ.ಪಂ.ಮುಖ್ಯಾಧಿಕಾರಿ ಎನ್.ಮತ್ತಡಿ, ಜಾಲ್ಸೂರು ಗ್ರಾ.ಪಂ.ಉಪಾಧ್ಯಕ್ಷ ದಿನೇಶ್ ಅಡ್ಕಾರ್, ಗೌರಿ ಶಂಕರ ಎಂ, ಶಾಲಾ ಮುಖ್ಯ ಶಿಕ್ಷಕಿ ರೇವತಿ, ಗಾಂಧಿ ಚಿಂತನಾ ವೇದಿಕೆಯ ಸಂಚಾಲಕರಾದ ಹರೀಶ್ ಬಂಟ್ವಾಳ್, ಡಾ.ಸುಂದರ ಕೇನಾಜೆ, ದಿನೇಶ್ ಮಡಪ್ಪಾಡಿ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಶಂಕರ್ ಪೆರಾಜೆ ಉಪಸ್ಥಿತರಿದ್ದರು.
ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್, ನೆಹರೂ ಸ್ಮಾರಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ಗಿರಿಧರ ಗೌಡ, ಡಾ.ಪ್ರಭಾಕರ ಶಿಶಿಲ, ಎಂ.ಡಿ.ವಿಜಯಕುಮಾರ್, ಪೂವಪ್ಪ ಕಣಿಯೂರು ಮತ್ತಿತರರು ನಡಿಗೆಯಲ್ಲಿ ಭಾಗವಹಿಸಿದ್ದರು.
ಬೆಳಿಗ್ಗೆ ಒಂಭತ್ತು ಗಂಟೆಗೆ ಬೆಳ್ಳಾರೆಯಿಂದ ಆರಂಭಗೊಂಡ ನಡಿಗೆ ಮೂರೂವರೆ ಗಂಟೆಗೆ ಸುಳ್ಯಕ್ಕೆ ಆಗಮಿಸಿತು. ಜ್ಯೋತಿ ಸರ್ಕಲ್ ನಲ್ಲಿ ಜಾಥಾಕ್ಕೆ ಸ್ವಾಗತ ನೀಡಲಾಯಿತು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ.1 ರಂದು ಕೇಂದ್ರ ಬಜೆಟ್ ಮಂಡಿಸಲಿದ್ದು,…
ಮಾನಸಿಕ ವಿಕಲಚೇತನರಾಗಿ ಉಡುಪಿಯಲ್ಲಿ ರಸ್ತೆ ಬದಿ ತಿರುಗಾಡುತ್ತಿದ್ದ ಬಿಹಾರದ ರಮಾದೇವಿ ಅವರು ವರ್ಷದ…
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…