ಸುಬ್ರಹ್ಮಣ್ಯ:ಗಿರಿಜನರ ಗುಣಾತ್ಮಕ ಆಚಾರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರ ಸಂಸ್ಕೃತಿಯನ್ನು ಮಕ್ಕಳು ಮತ್ತು ಯುವಜನತೆಗೆ ತಿಳಿಸಿಕೊಡುವ ಅಗತ್ಯವಿದೆ ಎಂದು ಜಿ.ಪಂ ಸದಸ್ಯೆ ಅಶಾ ತಿಮ್ಮಪ್ಪ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೆಎಸ್‍ಎಸ್ ಕಾಲೇಜು ಸಹಕಾರದಲ್ಲಿ ಕಾಲೇಜು ಸಭಾಂಗಣದಲ್ಲಿ ನಡೆದ ಗಿರಿಜನ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಂಸ್ಕೃತಿ ಇಂದು ನಶಿಸುತ್ತಿದೆ. ಗಿರಿಜನರು ಇಂದಿಗೂ ಕೂಡ ತಮ್ಮ ಪುರಾತನ ಸಂಸ್ಕೃತಿಯನ್ನು ಉಳಿಸಿಕೊಂಡಿರುವುದು ಸಂತೋಷದ ವಿಚಾರ. ಇದನ್ನು ಮುಂದೆಯೂ ಉಳಿಸುವ ಪ್ರಯತ್ನ ಯುವಜನತೆಯಿಂದ ಆಗಬೇಕು ಅದಕ್ಕೆ ಗಿರಿಜನ ಉತ್ಸವದ ಮೂಲಕ ಪ್ರೋತ್ಸಾಹ ಸಿಗುತ್ತಿದೆ ಎಂದು ಅವರು ಹೇಳಿದರು.
ಕಾಲೇಜು ಪ್ರಾಂಶುಪಾಲ ಪ್ರೋ ಉದಯಕುಮಾರ್ ಕೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ವಿವಿದ ಸಮುದಾಯದ ಮಂದಿ ವಾಸಿಸುತ್ತಿದ್ದು ಇಲ್ಲಿ ಗಿರಿಜನ ಉತ್ಸವ ನಡೆಯುತ್ತಿರುವುದು ಸಂತೋಷ ತಂದಿದೆ. ವಿವಿಧ ಸಮುದಾಯದ ಆಚರ ವಿಚಾರ, ಕಲೆಗಳು ಗರಿಜನ ಉತ್ಸವದ ಮೂಲಕ ಪ್ರದರ್ಶನಗೊಂಡು ಇಂದಿನ ಸಮುದಾಯಕ್ಕೆ ತಿಳಿದಾಗ ಸಂಪ್ರದಾಯ ಜೀವಂತಿಕೆ ಉಳಿಯುತ್ತದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಾಜೇಶ್ ಜಿ ಪ್ರಸ್ತಾವನೆಗೈದು ಮಾತನಾಡಿ ನಶಿಸುತ್ತಿರುವ ಸಾಂಪ್ರಾದಾಯಿಕ ಕಲೆಗಳನ್ನು ಯುವಜನತೆಗೆ ಪರಿಚಯಿಸಲು ಗಿರಿಜನ ಉತ್ಸವ ಹಮ್ಮಿಕೊಳ್ಳಾಗಿದೆ ಎಂದರು.
ಕಾಲೇಜಿನ ಇತಿಹಾಸ ಮತ್ತು ಸಮಾಜಶಾಸ್ತ್ರ ವಿಭಾಗದ ಸಹಕಾರ ನೀಡಿದರು. ಉಪನ್ಯಾಸಕ ಡಾ. ಪ್ರಸಾದ್ ವಂದಿಸಿದರು. ಉಪನ್ಯಾಸಕಿ ಪ್ರೋ ಆರತಿ ಕಾರ್ಯಕ್ರಮ ನಿರೂಪಿಸಿದರು.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…