ಸುಳ್ಯ: ಇದು ಗುಡಿಸಲೂ ಅಲ್ಲದ ಮನೆಯೊಂದರ ಕತೆ. ಅಚ್ಚರಿಯಾಗುತ್ತದೆ, ಆಧುನಿಕ ಎಲ್ಲಾ ಸೌಲಭ್ಯಗಳು ಈಗ ಸಾಲದೆನ್ನುವ ಕಾಲದಲ್ಲಿ , ಆಡಳಿತ ಸುಧಾರಣೆ ಎನ್ನುವ ಕಾಲದಲ್ಲಿ ಈಗಲೂ ಇಂತಹದ್ದೊಂದು ಮನೆ ಇದೆಯೇ ಎಂಬ ಪ್ರಶ್ನೆ ಮೂಡುತ್ತದೆ.
ಸುಳ್ಯ ತಾಲೂಕಿನ ಮಂಡೆಕೋಲು ಬಳಿ ಒಂದು ಗುಡಿಸಲು ಇದೆ. ಪ್ಲಾಸ್ಟಿಕ್ ಹೊದಿಕೆ ಹಾಕಿದ, ಸರಿಯಾದ ನೆಲವೂ ಇಲ್ಲದ ಮನೆ ಇದೆ. ಈಗ ಯುವ ಬ್ರಿಗೆಡ್ ಇವರಿಗೊಂದು ಪುಟ್ಟ ಮನೆ ನಿರ್ಮಾಣಕ್ಕೆ ಮುಂದಾಗಿದೆ. ಆಡಳಿತ ವ್ಯವಸ್ಥೆಗೆ ಈಗಲಾದರೂ ಇದು ಕಾಣಬೇಕು…!
ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಮಡಿವಾಳ ಮೂಲೆ ಎಂಬಲ್ಲಿ ಪಕೀರ ಎಂಬವರ ಮನೆಯ ಕತೆ ಇದು. ಸಣ್ಣ ಕುಟುಂಬ ಇದು. ಪುಟ್ಟ ಪುಟ್ಟ ಮಕ್ಕಳೊಂದಿಗಿನ ಕುಟುಂಬ. ದಿನವೂ ದುಡಿದು ಬದುಕು ಸಾಗಿಸುವ ವ್ಯವಸ್ಥೆ ಇವರದು. ಸ್ವಂತ ಜಾಗ ಇದೆ. ಸ್ಥಳೀಯರು ಕೊಡಮಾಡಿದ ಜಾಗ ಇದೆ. ಆದರೆ ರೇಶನ್ ಕಾರ್ಡ್, ಆಧಾರ್ ಕಾರ್ಡ್ ಸಹಿತ ಯಾವುದೇ ದಾಖಲೆ ಇಲ್ಲ. ಹೀಗಾಗಿ ಯಾವ ವ್ಯವಸ್ಥೆಯೂ ಇದುವರೆಗೆ ಆಗಿಲ್ಲ ಎನ್ನುವುದು ಈಗಿನ ಮಾಹಿತಿ.
ಕಳೆದ ಅನೇಕ ವರಷಗಳಿಂದ ಇದೇ ಮನೆಯಲ್ಲಿ ಅವರು ವಾಸ ಮಾಡುತ್ತಿದ್ದಾರೆ. ಮಳೆಗಾಲವಂತೂ ಇವರ ಬದುಕು ಅಯೋಮಯ. ವ್ಯವಸ್ಥೆಯ ಕಾರಣದಿಂದ ಮಕ್ಕಳೂ ಶಾಲೆಗೂ ಹೋಗಲಾಗದೆ ಮನೆಯಲ್ಲೂ ಉಳಿದುಕೊಳ್ಳಲಾದರ ಸ್ಥಿತಿ ಇದೆ. ಚುನಾವಣೆ ಬಂದಾಗ ಇಲ್ಲಿನ ಎರಡು ಓಟಿಗಾಗಿ ಹೆಚ್ಚು ಗಮನವೂ ಪಕ್ಷಗಳು ನೀಡದೇ ಇದ್ದರೆ ಪಕೀರ ಅವರ ಮದ್ಯಪಾನದ ಚಟವೂ ಅವರನ್ನು ದೂರ ಮಾಡಿದೆ. ಹೀಗಾಗಿ ಅವರ ಮಕ್ಕಳೂ ದಿಕ್ಕಿಲ್ಲದಾಗಿದ್ದಾರೆ.
ಇದೀಗ ಯುವ ಬ್ರಿಗೇಟ್ ಈ ಕುಟುಂಬನ್ನು ಗಮನಿಸಿ ಸಹಾಯಕ್ಕೆ ಮುಂದಾಗಿದೆ. ಪುಟ್ಟ ಮನೆಯನ್ನು ದಾನಿಗಳ ಸಹಾಯದಿಂದ ನಿರ್ಮಾಣ ಮಾಡಲು ಮುಂದಾಗಿದೆ. ಭಾನುವಾರ ಮನೆಯನ್ನು ಕಟ್ಟಿಕೊಡುವ ಕೆಲಸ ಮಾಡುತ್ತದೆ.
ಪಕೀರ ಕುಟುಂಬದ ಮಕ್ಕಳನ್ನು ಶಾಲೆಗೆ ಸೇರಿಸುವ ಪ್ರಯತ್ನ ಮಾಡುತ್ತಿದ್ದೇವೆ . ಅವರಿಗೆ ಓದಿನ ವ್ಯವಸ್ಥೆಗೆ ಮಾತುಕತೆ ನಡೆಯುತ್ತದೆ ಎನ್ನುತ್ತಾರೆ ಯುವಬ್ರಿಗೆಡ್ ಮುಂದಾಳು ಶರತ್. ಈ ಮೂಲಕ ಪಕೀರ ಕುಟುಂಬಕ್ಕೆ ಆಧಾರ ಸಿಗಲಿ. ಆಧಾರ್ ಕಾರ್ಡ್ ಇಲ್ಲದೇ ಇದ್ದರೂ ಈಗ ಬದುಕಿಗೆ ಆಧಾರ ಸಿಗುವಂತಾಗಲಿ.
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್ಆರ್ ಎಲ್ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…