ಗುಡ್ಡದ ಮೇಲೆ ನೀರು ಹಿಡಿದಿಡುವುದು – ತುಂಬುವುದರ ಬಗ್ಗೆ ಒಂದು ಸಂದೇಹ…..

August 13, 2019
9:00 AM
ಗುಡ್ಡದ ಮೇಲೆ ನೀರು ಹಿಡಿದಿಡುವುದು  ಹಾಗೂ ತುಂಬುವುದರ ಬಗ್ಗೆ ಸುಳ್ಯ ತಾಲೂಕಿನ ಕಲ್ಮಡ್ಕದ ಕೃಷಿಕ ಸುರೇಶ್ಚಂದ್ರ  ಸಂದೇಹವೊಂದನ್ನು ಮುಂದಿಟ್ಟಿದ್ದಾರೆ. ಅವರ ಸಂದೇಹ ಹಲವರ ಸಂದೇಹ, ಪ್ರಶ್ನೆಯೂ ಆಗಿದೆ. ಹೀಗಾಗಿ ಸುರೇಶ್ಚಂದ್ರ ಅವರ ಬರಹ ಯಥಾವತ್ತಾಗಿ ಇಲ್ಲಿದೆ….

ಹಾಗೇ ಸುಮ್ಮನೆ,  ಮನಸಿನಲ್ಲೊಂದು ಹಾದು ಹೋದ ಯೋಚನೆ ,ಹಂಚಿಕೊಳ್ಳೋಣವೆಂದು ಕಂಡಾಗ ಬರಹ ಮೂಲಕ ಪ್ರಸ್ತಾವನೆ ಅಷ್ಟೇ. ನಮ್ಮ ದ.ಕ ದ ಪರಿಸ್ಥಿತಿಯಲ್ಲಿ ಮಳೆಗಾಲದ ಮಳೆ ನೀರನ್ನು ಇಂಗಿಸಲು ಹೊರಟರೆ ಅನಾಹುತಗಳಾಗಬಹುದೋ ಎಂದು ಮನಸ್ಸಿನಲ್ಲಿ ಮೂಡಿದ ಬಾವ. ಖಂಡಿತಾ ಋಣಾತ್ಮಕ ವಿಚಾರವಲ್ಲ. ಅರಿತವರು ಈ ಬಗ್ಗೆ ತಿದ್ದುವ ಸದಾವಕಾಶ ಇದ್ದೇ ಇದೆ.
     ಕಳೆದ ವರ್ಷ ಮಡಿಕೇರಿ, ವಯನಾಡ್, ಈಗ ಬೆಳ್ತಂಗಡಿಯ ಘಟ್ಟದ ತಪ್ಪಲಿನ ಗುಡ್ಡಗಳು,ಚಿಕ್ಕಮಗಳೂರು ಪರ್ವತ ಶ್ರೇಣಿಗಳು ಕುಸಿಯುವುದು.. …. ಜಾರುತ್ತಿರುವುದು ತುಂಬಾ ಆಲೋಚಿಸಬೇಕಾದ ವಿಚಾರವಲ್ಲವೇ.
 ಈ ಹಿನ್ನೆಲೆಯಲ್ಲಿ ಮನಸ್ಸೋಡಿದಾಗ,ನಮ್ಮ ಊರುಗಳಲ್ಲಿ ನಾವು ಗುಡ್ಡಗಳಲ್ಲಿ,ಇಳಿಜಾರುಗಳಲ್ಲಿ ನೀರು ಇಂಗಿಸುವ ಪ್ರಕ್ರಿಯೆ ನಮಗೂ ಮುಂದೊಂದು ದಿನ ಈ ಪರಿಸ್ಥಿತಿ ತಂದಿಡಬಹುದೇ ಎಂದು ಸಣ್ಣ ಹೆದರಿಕೆ ಮೂಡುತ್ತಿದೆ.
   ಪ್ರಾಕೃತಿಕ ವ್ಯವಸ್ಥೆಯಂತೆ ಭುವಿಯೊಳಗೆ ನೀರಿಂಗುವುದು,ಒರತೆಗಳಾಗುವುದು…ಮುಂತಾದ ಪ್ರಕೃತಿಗೆ ಅದರದ್ದೇ ಆದ ಲೆಕ್ಕಾಚಾರಗಳಿರಬಹುದು. ನಾವು ಗುಡ್ಡದ ಮೇಲೆಲ್ಲಾ ನೀರನ್ನು ಹಿಡಿದಿಟ್ಟಾಗ  ಅದು ಆ ಪ್ರಾಕೃತಿಕ ಲೆಕ್ಕಾಚಾರಕ್ಕೆ ವಿರುದ್ದವಾಗದೇ ?  ಉದಾಹರಣೆಗೆ ನಾವು ಬಾಯಾರಿದಾಗ ಒಂದು ತಪ್ಪಿದರೆ ಎರಡು ಲೋಟ ನೀರು ಕುಡಿಯಬಹುದು,ಅದೇ ಏಳೆಂಟು ಲೋಟ ಕುಡಿದರೆ ಹೊಟ್ಟೆಯೊಳಗೆ ಅಲ್ಲೋಲ ಕಲ್ಲೋಲವಾಗುತ್ತದಲ್ಲವೇ….ಅದೇ ರೀತಿ ಭೂಮಿಗೂ ಆಗದೇ. ಭೂಮಿಯ ಮಣ್ಣಿನ ರಚನೆ ಪದರು ಪದರಾಗಿ ಕೊನೆಗೆ ಕಲ್ಲಿನ ಮೇಲೆ ನಿಂತಿರುವುದಂತೆ, ಈ ನೀರು ತುಂಬಿ ಮೆತ್ತಗಾದ,ಉಬ್ಬಿದ ಮಣ್ಣು ಈ ಕಲ್ಲಿನ ಪದರದಿಂದ ಜಾರಿಬಿಡಬಹುದೇ…ಯಾಕೆಂದರೆ…. ನಮ್ಮೂರು ಕಲ್ಮಡ್ಕದಲ್ಲಿ ಮಣ್ಣಿನ ಪದರ ಎಪ್ಪತ್ತೈದರಿಂದ ನೂರಿಪ್ಪತ್ತು ಫೀಟ್ ತನಕವಿದೆ….ಇಂತಲ್ಲಿ ಅಷ್ಟು ಸಮಸ್ಯೆ ಆಗದೋ ಏನೋ…ಅದೇ ಕೆಲವು ಪ್ರದೇಶಗಳಲ್ಲಿ ಇಪ್ಪತೈದು ಫೀಟ್ ಗಿಂತ ಕಡಿಮೆ ಮಣ್ಣಿನ ಪದರವಿರುವಲ್ಲಿ ಜಾರುವ ಸಂಭವ ಹೆಚ್ಚಾಗಬಹುದೇ ಎಂದು ಮನಸ್ಸಿಗೆ ಬರುವ ಪ್ರಶ್ನೆ. ಎಲ್ಲೋ ಹಾರಂಗಿ ಅಣೆಕಟ್ಟೆಯ ನೀರೊತ್ತಡ,ಎತ್ತಿನಹೊಳೆಗಾಗಿ ಕಡಿದ ಭೂಭಾಗಗಳಲ್ಲಿ ಒಳ ಸೇರಿದ ನೀರು ಎಲ್ಲೆಲ್ಲೋ ಹೋಗಿ ಇಡೀ ಭೂಪದರ ಕುಸಿಯಲು ಕಾರಣವಾಗುತ್ತಿದೆ ಎಂದಾದರೆ ಇದೂ ಆಲೋಚಿಸಬೇಕಾದ ವಿಚಾರವಲ್ಲವೇ.
   ಹಾಗಾದರೆ ಬೇಸಿಗೆಯ ನೀರ ಕೊರತೆಗೆ ಏನು ಮಾಡಬಹುದು ಎಂದರೆ ಉತ್ತರ ನನ್ನಲ್ಲಿಲ್ಲ.ಒಟ್ಟಾರೆ ಪ್ರಕೃತಿಯ ಅತಿ ಶೋಷಣೆ ಇಂತಹ ದುರಂತಗಳಿಗೆ ಈ ಹಿಂದೆಯೂ ಮುಂದೆಯೂ ಕಾರಣವೇನೋ ಅನಿಸುತ್ತಿದೆ…ಹಿಂದೆ ಹುಲಿ ಮುಂದೆ ಝರಿ ಎಂಬ ಅಂಚಿಗೆ ನಾವೆಲ್ಲರೂ ಬಂದು ನಿಂತಿದ್ದೇವೇನೋ ಎಂದೆನಿಸುತ್ತಿದೆ..

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕುಕ್ಕೆ ಸುಬ್ರಹ್ಮಣ್ಯವನ್ನೂ…… ಪವಿತ್ರ ಕುಮಾರಧಾರ ನದಿಯನ್ನೂ ಮಲಿನ ಮಾಡ್ತೀರಾ….?
March 9, 2025
10:21 PM
by: The Rural Mirror ಸುದ್ದಿಜಾಲ
ಗ್ರಾಹಕನಿಗೆ ಶಾಕ್‌ ಕೊಟ್ಟ ವಿದ್ಯುತ್‌ ಇಲಾಖೆ | ಬರೋಬ್ಬರಿ 17 ಕೋಟಿ ರೂ. ಕರೆಂಟ್ ಬಿಲ್…!
May 15, 2024
7:50 PM
by: The Rural Mirror ಸುದ್ದಿಜಾಲ
ಗ್ರಾಮೀಣ ಭಾಗದಲ್ಲೂ ಗೋಹತ್ಯೆ…!? | ವೈರಲ್‌ ಆಯ್ತು ವಿಡಿಯೋ… | ಕೊಲ್ಲಮೊಗ್ರದಲ್ಲಿ ನಕ್ಸಲ್‌ ಸದ್ದಿನ ಜೊತೆಗೆ ಗೋಹತ್ಯೆಯ ಸದ್ದು…!
March 19, 2024
7:31 PM
by: ದ ರೂರಲ್ ಮಿರರ್.ಕಾಂ
ಬಟ್ಟೆ ಗಲೀಜಾಗಿದೆ ಎಂದು ಮೆಟ್ರೋದ ಒಳಗೆ ಬಿಡದ ಸಿಬ್ಬಂದಿ | ರೈತನನ್ನು ಅವಮಾನಿಸಿದ್ದಕ್ಕೆ ಸಹಪ್ರಯಾಣಿಕರ ಆಕ್ರೋಶ | ಮೆಟ್ರೋ ಸಿಬ್ಬಂದಿ ವಜಾ
February 26, 2024
12:24 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group