ಮಡಿಕೇರಿ :ಮಹಾಮಳೆಯ ಗುಡ್ಡ ಕುಸಿತದಿಂದ ಜೀವಹಾನಿಯಾದ ತೋರ ಗ್ರಾಮದ ಘಟನಾ ಸ್ಥಳಕ್ಕೆ ಸಂಸದ ಪ್ರತಾಪ ಸಿಂಹ ಅವರು ಭೇಟಿ ನೀಡಿ, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ಭೂ ಕುಸಿತದಿಂದ ಕುಟುಂಬದ ಸದಸ್ಯರನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿರುವ ಪ್ರಭು ಕುಮಾರ್ ಭಟ್ ಮತ್ತು ಹರೀಶ್ ಅವರನ್ನು ಭೇಟಿಯಾಗಿ, ಸಾಂತ್ವನ ನುಡಿದ ಸಂಸದರು, ಇದೇ ಸಂದರ್ಭ ನಾಪತ್ತೆಯಾದವರ ಶೋಧ ಕಾರ್ಯಾಚರಣೆಯನ್ನು ವೀಕ್ಷಿಸಿ, ತಂಡದ ಮುಖ್ಯಸ್ಥರೊಂದಿಗೆ ಕಾರ್ಯಾಚರಣೆಯ ಮಾಹಿತಿ ಪಡೆದರು.
ಸೂರು ಒದಗಿಸುವ ಭರವಸೆ- ಪ್ರಾಕೃತಿಕ ವಿಕೋಪದಿಂದ ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಕೇಂದ್ರ ಸರಕಾರವು ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದ ಸಂಸದರು, ರಾಜ್ಯ ಸರಕಾರ ಸಂತ್ರಸ್ತರಿಗೆ ನೀಡಿದ ಪರಿಹಾರದೊಂದಿಗೆ ಕೇಂದ್ರ ಸರಕಾರದಿಂದಲೂ ಪರಿಹಾರ ಧನವನ್ನು ನೀಡಲಾಗುತ್ತದೆಂದು ಸ್ಪಷ್ಟಪಡಿಸಿದರು.
ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಸರಕಾರಿ ಜಮೀನು ಅಥವ ಖಾಸಗಿ ಜಮೀನನ್ನು ಸರಕಾರದ ಮೂಲಕ ಖರೀದಿಸಿ ಸೂರು ಒದಗಿಸುವ ಭರವಸೆಯನ್ನು ನೀಡಿ, ಪ್ರಾಕೃತಿಕ ವಿಕೋಪದಲ್ಲಿ ಕೃಷಿ ಫಸಲು ಹೊಂದಿದ ಭೂಮಿಯನ್ನು ಹಲವರು ಕಳೆದುಕೊಂಡಿದ್ದಾರೆ. ಇಂತಹವರಿಗೆ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದೊಂದಿಗೆ ಸಮಾಲೋಚನೆ ನಡೆಸಿ ಪರಿಹಾರ ಒದಗಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭ ತಾಲ್ಲೂಕು ತಹಶೀಲ್ದಾರ್ ಪುರಂದರ ಅವರಿಂದ ಪರಿಹಾರ ಕಾರ್ಯಗಳ ಬಗ್ಗೆ ಸಂಸದರು ಮಾಹಿತಿ ಪಡೆದುಕೊಂಡರು.
ಸಂಸದರ ತೋರ ಭೇಟಿ ಸಂದರ್ಭ ಕಂದಾಯ ಅಧಿಕಾರಿ ಪಳಂಗಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಅರುಣ್ ಭೀಮಯ್ಯ, ಜಿಪಂ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ತಾಪಂ ಸದಸ್ಯರಾದ ಬಿ.ಎಂ. ಗಣೇಶ್, ಪಿಡಿಒ ಪ್ರಮೋದ್ ಕುಮಾರ್ ಮೊದಲಾದವರಿದ್ದರು.
ತಾಪಮಾನ ಅಧಿಕವಾಗಿದ್ದರೂ, ರಾತ್ರಿಯ ವೇಳೆ ತಂಪು ವಾತಾವರಣ ಇರುವುದರಿಂದ ಮಳೆಯ ಸಾಧ್ಯತೆ ಕ್ಷೀಣಿಸುತ್ತಿದೆ.
ಪರಿಶುದ್ಧ ಮನಸ್ಸಿನಿಂದ ಶಿವನ ಧ್ಯಾನ, ಉಪಾಸನೆ ಮಾಡಿದಾಗ ಸಕಲ ಪಾಪ ಕರ್ಮಗಳ ಕೊಳೆ…
ತಮಿಳುನಾಡಿನ ಕೊಯಮತ್ತೂರಿನ ಈಶಾ ಫೌಂಡೇಷನ್ ಆದಿ ಯೋಗಿ ಪ್ರತಿಮೆಯ ಬಳಿ ಹಮ್ಮಿಕೊಂಡಿದ್ದ ಶಿವರಾತ್ರಿ…
ಮಹಾಶಿವರಾತ್ರಿಯ ಹಿನ್ನಲೆಯಲ್ಲಿ ನೇಪಾಳದ ಕಠ್ಮಂಡುವಿನಲ್ಲಿರುವ ಪಶುಪತಿನಾಥ ಮಂದಿರಕ್ಕೆ ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡಿ…
ರೈಲ್ವೆ ಇಲಾಖೆ ಪ್ರಯಾಗ್ರಾಜ್ನಿಂದ 350 ಕ್ಕೂ ಹೆಚ್ಚು ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ಮ್ಯಾನ್ಮಾರ್ ಅಡಿಕೆ ಮಾರುಕಟ್ಟೆ ವಲಯದಲ್ಲಿ ಈ ಬಾರಿ ಭಾರತವು ಅಡಿಕೆ ಖರೀದಿಯನ್ನು ಪುನರಾರಂಭ…