ಗುತ್ತಿಗಾರು: ಗುತ್ತಿಗಾರು ಸರಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಜಲಾಮೃತ ಯೋಜನೆಯಡಿಯಲ್ಲಿ ಶಾಲೆಯ ಪರಿಸರ ಸಂಘದ ಸಹಯೋಗದೊಂದಿಗೆ ಮನೆಮನೆ ಇಂಗುಗುಂಡಿ ಅಭಿಯಾನ ನಡೆಯಿತು. ಕಾರ್ಯಕ್ರಮವನ್ನು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ದಾಮ್ಲೆ ಉದ್ಘಾಟಿಸಿದರು.
ಬಳಿಕ ಇಂಗುಗುಂಡಿ ಹಾಗೂ ಜಲಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಜೊತೆಗೆ ಪ್ರತೀ ಮನೆಯಲ್ಲೂ ವಿದ್ಯಾರ್ಥಿಗಳು ಇಂಗುಗುಂಡಿ ಮಾಡಿ ಜಲಸಂರಕ್ಷಣೆಯತ್ತ ಮನಸ್ಸು ಮಾಡಲು ಕರೆ ನೀಡಿದರು. ಈ ಸಂದರ್ಭ ಇಂಜಿನಿಯರ್ ಹಾಗೂ ಸಾಮಾಜಿಕ ಕಾರ್ಯಕರ್ತ ಕಾರ್ತಿಕೇಯನ್, ಸುಳ್ಯನ್ಯೂಸ್.ಕಾಂ ಸಂಪಾದಕ ಮಹೇಶ್ ಪುಚ್ಚಪ್ಪಾಡಿ, ಶಾಲಾ ಅಧ್ಯಾಪಕಿ ಚೈತ್ರಾ ಉಪಸ್ಥಿತರಿದ್ದರು.
ಇದೇ ಸಂದರ್ಭ ಎಲ್ಲಾ ವಿದ್ಯಾರ್ಥಿಗಳು ಇಂಗುಗುಂಡಿ ಮಾಡುವ ಭರವಸೆ ನೀಡಿದರು.
ಶಾಲಾ ಮುಖ್ಯೋಪಾಧ್ಯಾಯ ನೆಲ್ಸನ್ ಪ್ರಸ್ತಾವನೆಗೈದರು. ಅಧ್ಯಾಪಕ ಗಿರೀಶ್ ಸ್ವಾಗತಿಸಿ ಸುನಿಲ್ ಕುಮಾರ್ ವಂದಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel