ಗುತ್ತಿಗಾರು: ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಸಾಮಾನ್ಯ ಕ್ಷೇತ್ರದಲ್ಲಿ ಬಿ ಕೆ ಬೆಳ್ಯಪ್ಪ 637 ಮತಗಳು , ನವೀನ ಬಾಳುಗೋಡು 530 ಮತಗಳು, ರವಿಪ್ರಕಾಶ್ ಬಳ್ಳಡ್ಕ 540 ಮತಗಳು, ಕಿಶೋರ್ ಕುಮಾರ್ ಅಂಬೆಕಲ್ಲು 532 ಮತಗಳು, ಎ ವಿ ತೀರ್ಥರಾಮ 445 ಮತಗಳು ಹಾಗೂ ವೆಂಕಟ್ ದಂಬೆಕೋಡಿ 596 ಮತಗಳನ್ನು ಪಡೆದು ಗೆಲುವು ಸಾಧಿಸಿದರು.
ಉದಯಕುಮಾರ್ ದೇರಪ್ಪಜ್ಜನಮನೆ 283 ಮತಗಳು, ಭರತ್ ಮುಂಡೋಡಿ 408 ಮತಗಳು, ಕೇಶವ ಹೊಸೋಳಿಕೆ 302 ಮತಗಳು, ಡಿ ಜೆ ಜನಾರ್ಧನ 131 ಮತಗಳು, ಭುವನೇಶ್ವರ 140 ಮತಗಳನ್ನು ಪಡೆದರು.
ಮಹಿಳಾ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಂಜುಳಾ ಮುತ್ಲಾಜೆ 585 ಮತ ಹಾಗೂ ಚಂದ್ರಾವತಿ ಮುಂಡೋಡಿ 531 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಶಶಿಕಲಾ ದೇರಪ್ಪಜ್ಜನಮನೆ 286 ಮತ ಪಡೆದರು. ಪ್ರೇಮಲತಾ ಮುಂಡೋಡಿ 190 ಮತ ಪಡೆದರು.
ಹಿಂದುಳಿದ ವರ್ಗ ಎ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೃಷ್ಣಯ್ಯ ಮೂಲೆತೋಟ 575 ಮತ ಪಡೆದು ಗೆಲುವು ಸಾಧಿಸಿದರು. ದಿನೇಶ್ ಸರಸ್ವತಿ ಮಹಲ್ 220 ಮತ ಪಡೆದರು.
ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಯಪ್ರಕಾಶ್ ಮೊಗ್ರ 413 ಮತ ಪಡೆದು ಗೆಲುವು ಸಾಧಿಸಿದರು. ಶೈಲೇಶ್ ಅಂಬೆಕಲ್ಲು 378 ಮತ ಪಡೆದರು.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…