ಗುತ್ತಿಗಾರು : ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣಾ ನಾಮಪತ್ರ ಪರಿಶೀಲನೆ ಭಾನುವಾರ ಸಂಘದ ಕಚೇರಿಯಲ್ಲಿ ಚುನಾವಣಾಧಿಕಾರಿ ನಾಗೇಂದ್ರ ಅವರಿಂದ ನಡೆಯಿತು. ಒಟ್ಟು 32 ನಾಮಪತ್ರ ಸಲ್ಲಿಕೆಯಾಗಿತ್ತು. ಪರಿಶೀಲನೆ ಬಳಿಕ ಒಟ್ಟು 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಫೆ.17 ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನವಾಗಿದೆ.
ನಾಮಪತ್ರ ಪರಿಶೀಲನೆ ಬಳಿಕ ಸಾಲಗಾರರಲ್ಲದ ಕ್ಷೇತ್ರದಿಂದ ಹಾಲಿ ಅದ್ಯಕ್ಷ ಮುಳಿಯ ಕೇಶವ ಭಟ್ ಅವಿರೋಧವಾಗಿ ಆಯ್ಕೆಯಾದರೆ ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಆನಂದ ಹಾಗೂ ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಕುಂಞ ಅವಿರೋಧವಾಗಿ ಆಯ್ಕೆಯಾದರು. ಇವರು 3 ಮಂದಿ ಕೂಡಾ ಸಹಕಾರ ಭಾರತಿ-ಬಿಜೆಪಿ ಬೆಂಬಲಿತರಾಗಿದ್ದಾರೆ.
ಸಾಲಗಾರರ ಕ್ಷೇತ್ರದಿಂದ ಮಹೇಶ್ ಕುಮಾರ್ ಪುಚ್ಚಪ್ಪಾಡಿ, ಜನಾರ್ಧನ ಡಿ ಜೆ, ನವೀನ್ ಬಾಳುಗೋಡು, ಬೆಳ್ಯಪ್ಪ ಗೌಡ ಕಡ್ತಲ್ ಕಜೆ , ವೆಂಕಟ್ ದಂಬೆಕೋಡಿ , ಕೇಶವ ಹೊಸೋಳಿಕೆ, ದಿವಾಕರ ಮುಂಡೋಡಿ, ಪದ್ಮನಾಭ ಎಂ, ಕಿಶೊರ್ ಕುಮಾರ್ ಅಂಬೆಕಲ್ಲು , ದುರ್ಗಾದಾಸ್ ಎಂ, ನಾಗೇಶ್ ಪಿ, ಉದಯಕುಮಾರ್ ಡಿ ಆರ್ , ರವಿಪ್ರಕಾಶ್ ಬಿ ವಿ, ಭರತ್ ಮುಂಡೋಡಿ, ವೆಂಕಟ್ ವಳಲಂಬೆ, ತೀರ್ಥರಾಮ ಎವಿ,ಭುವನೇಶ್ವರ ಎಚ್ ಆರ್
ಹಾಗೂ ಮಹಿಳಾ ಕ್ಷೇತ್ರದಿಂದ ಶಶಿಕಲಾ ಡಿ ಪಿ, ಮಂಜುಳಾ ಎಂ ಡಿ, ಚಂದ್ರಾವತಿ , ಪ್ರೇಮಲತಾ ಕಣದಲ್ಲಿದ್ದಾರೆ.
ಉಳಿದಂತೆ ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಕೃಷ್ಣಯ್ಯ ಮೂಲೆತೋಟ ಹಾಗೂ ದಿನೇಶ್ ಕೆ ಮತ್ತು ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರದಿಂದ ಜಯಪ್ರಕಾಶ್ ಎ ಆರ್ ಹಾಗೂ ಶೈಲೇಶ್ ಅಂಬೆಕಲ್ಲು ಕಣದಲ್ಲಿದ್ದಾರೆ.
4 ನಾಮಪತ್ರಗಳು ತಿರಸ್ಕೃತಗೊಂಡಿತ್ತು. ಆನಂದ ಕೆಂಬಾರೆ, ಎರಡು ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದ ಜನಾರ್ಧನ ಡಿಜೆ , ಜಾತಿ ಸರ್ಟಿಫಿಕೇಟ್ ನೀಡದ ಹಿನ್ನೆಲೆಯಲ್ಲಿ ದಿನಕರ ಹಾಗೂ ಸಾಲರಹಿತ ಕ್ಷೇತ್ರದಲ್ಲಿ ಸೂಕ್ತ ಚುನಾವಣಾ ಠೇವಣಿ ಪಾವತಿಸದ ಹಿನ್ನೆಲೆಯಲ್ಲಿ ಚಂಚಲಾಕ್ಷಿ ಅವರ ನಾಮಪತ್ರ ತಿರಸ್ಕೃತವಾಗಿತ್ತು.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…