ಆರು ತಿಂಗಳ ಹಿಂದೆ ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಲಸಾಗಿದೆ.ಈದೀಗ ಸೇತುವೆ ಕಾಮಗಾರಿಗೆ ಟೆಂಡರ್ ಆದರೂ ಕಾಮಗಾರಿ ಆರಂಭವಾಗಿಲ್ಲ. ಕೇಳಿದರೆ ಮಳೆಗಾಲದ ನೆಪ. ಹೀಗೇ ಅನೇಕ ವರ್ಷಗಳು ಉರುಳಿದವು… ಈಗ ಗುದ್ದಲಿ ಪೂಜೆಯಾದರೂ ಸೇತುವೆ ನಿರ್ಮಾಣ ಆಗುತ್ತೋ ಇಲ್ಲವೋ ಎಂಬ ಅನುಮಾನ ಶುರುವಾಗಿದೆ.. ಹೀಗೆಂದು ಆತಂಕ, ನೋವು ತೋಡಿಕೊಳ್ಳುವವರು ತೊಡಿಕಾನ- ಮುಪ್ಪಸೇರು -ಕುದರೆಪಾಯ-ಮಾಪಳಕಜೆ ಪ್ರದೇಶದ ಜನತೆ. ಏನಿದು ಕತೆ ? ಇಲ್ಲಿ ಓದಿ…
ತೊಡಿಕಾನ- ಮುಪ್ಪಸೇರು -ಕುದರೆಪಾಯ-ಮಾಪಳಕಜೆಗೆ ಮತ್ಸ್ಯ ತೀರ್ಥ ಹೊಳೆಗೆ ಸಂಪರ್ಕ ಸೇತುವೆ ನಿರ್ಮಾಣವಾದ ಹಿನ್ನಲೆಯಲ್ಲಿ ಈ ಭಾಗದ ಜನರು ಅನೇಕ ಸಂಕಷ್ಟ ಎದುರಿಸುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಕೆಲ ದಿನಗಳ ಹಿಂದೆ ವಾಹನ ಸಂಪರ್ಕ ಸಾದ್ಯವಾಗದ ಪರಿಣಾಮ ಸ್ಥಳೀಯ ಮಹಿಳೆಗೆ ದಾರಿ ಮದ್ಯೆ ಹೆರಿಗೆಯಾದ ಘಟನೆ ನಡೆದಿದೆ.ಇದು ಒಂದು ಉದಾಹರಣೆಯಾದರೆ ಐದಾರು ವರ್ಷಗಳ ಹಿಂದೆ ಮಳೆಗಾಲ ಅಸೌಖ್ಯಕೊಳಗಾದ ವ್ಯಕ್ತಿಯೊಬ್ಬರನ್ನು ತುರ್ತಾಗಾಗಿ ಸಕಾಲಕ್ಕೆ ಆಸ್ಪತ್ರೆಗೆ ಕೊಂಡುಹೋಲು ಸಾಧ್ಯವಾಗದೇ ದಾರಿ ಮದ್ಯೆ ಅವರು ಮೃತಪಟ್ಟಿದ್ದರು.
ಈ ಸೇತುವೆ ನಿರ್ಮಾ
ಇದೆಲ್ಲದರ ಪರಿಣಾಮ 6 ತಿಂಗಳ ಹಿಂದೆ ಈ ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ.ಈದೀಗ ಸೇತುವೆ ಕಾಮಗಾರಿಗೆ ಟೆಂಡರ್ ಆದರೂ ಕಾಮಗಾರಿ ಪ್ರಾರಂಭಿಸದಿರುವುದು ಈ ಭಾಗದ ಜನರ ನೋವಿಗೆ ಕಾರಣವಾಗಿದೆ. ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯ ಮತ್ಸ್ಯ ತೀರ್ಥ ಹೊಳೆಯಿಂದ ದ.ಕ ಕೊಡಗು ಜಿಲ್ಲೆಯ ಗಡಿಭಾಗ ತನಕ ದ.ಕ ಜಿಲ್ಲೆಯ ವ್ಯಾಪ್ತಿಗೆ ಈ ರಸ್ತೆ ಒಳಪಡುತ್ತದೆ. ಮತ್ಸ್ಯ ತೀರ್ಥ ಹೊಳೆ ಬದಿಯಿಂದ ಗಡಿಭಾಗ ಸುಮಾರು 1.5 ಕಿ.ಮೀ ರಸ್ತೆ ಅಭಿವೃದ್ದಿಯಾಗಬೇಕಾಗಿದೆ.ಸುಮಾರು ಎರಡು ವರ್ಷಗಳ ಹಿಂದೆ ಪೆರಂಬಾರು ಬಳಿ 60 ಮೀಟರ್ ರಸ್ತೆಯನ್ನು ಸ್ಥಳೀಯ ಗ್ರಾಮ ಪಂಚಾಯತ್,ಜಿಲ್ಲಾ ಪಂಚಾಯತ್,ಶಾಸಕ ಅನುದಾನದಲ್ಲಿ ಕಾಂಕ್ರೀಟಿಕರಣಗೊಳಿಸಲಾಗಿದೆ. ಇದರಲ್ಲಿ ಸುಮಾರು 100 ಮೀ ರಸ್ತೆ ಕಾಂಕ್ರೀಟಿಕರಣವಾಗಲು ಬಾಕಿ ಉಳಿದಿದೆ.
ಕೊಡಗು ರಸ್ತೆ ಅಭಿವೃದ್ದಿ : ದ.ಕ ಜಿಲ್ಲೆಯ ಗಡಿಭಾಗ ತನಕ ಕೊಡಗು ಜಿಲ್ಲೆಗೆ ಸೇರಿದ ರಸ್ತೆ ಸಂಪೂರ್ಣ ಸರ್ವ ಋತು ರಸ್ತೆಯಾಗಿ ಅಭಿವೃದ್ದಿಗೊಂಡಿದೆ.ಇಲ್ಲಿಯ ಮಾಪಳಕಜೆ ತೋಡಿಗೆ ಕಿರು ಸೇತುವೆ ಕಾಮಗಾರಿ ನಡೆಯುತ್ತಿದ್ದು ಅದು ಕೊನೆ ಹಂತದಲ್ಲಿದೆ.ಇದೀಗ ತೊಡಿಕಾನ ಮತ್ಸ್ಯ ತೀರ್ಥ ಹೊಳೆಗೆ ಸೇತುವೆ ನಿರ್ಮಾಣಗೊಂಡು ರಸ್ತೆ ಅಭಿವೃದ್ದಿಯಾದರೆ ತೊಡಿಕಾನ- ಕುದರೆಪಾಯ ಮಾಪಳಕೆ ರಸ್ತೆ ಸರ್ವ ಋತು ರಸ್ತೆಯಾಗಿ ಅಭಿವೃದ್ದಿಗೊಳ್ಳಲು ಸಹಕಾರಿಯಾಗುತ್ತದೆ.ಇದರಿಂದ ಅಂತರ್ ಜಿಲ್ಲಾ ಸಂಪರ್ಕ ರಸ್ತೆ ಅಭಿವೃದ್ದಿಯಾಗುತ್ತದೆ. ತೊಡಿಕಾನ ಪ್ರವಾಸಿ,ಧಾರ್ಮಿಕ ಕೇಂದ್ರವಾಗಿ ಅಭಿವೃದ್ದಿಗೊಳ್ಳಲು ಸಹಕಾರಿಯಾಗುತ್ತದೆ.ಸುಮಾರು ಒಂದುವರೆ ಕಿ ಮೀ ನಷ್ಟು ರಸ್ತೆಯನ್ನು ಅಬಿವೃದ್ದಿ ಮಾಡಲು ದ.ಕ ಜಿಲ್ಲೆಯ ಜನಪ್ರತಿನಿಧಿಗಳು ಮುಂದೆಯೂ ಪ್ರಮಾಣಿಕ ಪ್ರಯತ್ನ ಮಾಡಬೇಕಾಗಿದೆ.ಅಲ್ಲದೆ ಕಿರು ಸೇತುವೆ ಕಾಮಗಾರಿ ಪ್ರಾರಂಭಿಸಲು ಗುತ್ತಿಗೆದಾರರಿಗೆ ಸಂಬಂಧಪಟ್ಟ ಇಲಾಖೆ,ಜನಪ್ರತಿನಿಧಿಗಳು ಸೂಚಿಸಬೇಕಾಗಿದೆ.
ತೊಡಿಕಾನ ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿದ ಸುದ್ದಿ ಕೇಳಿ ಕುಸಿಯಾಯಿತು.ಆದರೆ ಇನ್ನು ಕಾಮಗಾರಿ ಪ್ರಾರಂಭವಾಗದಿರುವುದು ನಿರಾಶೆ ತಂದಿದೆ.ಕಾಮಗಾರಿ ಆದಷ್ಟು ಬೇಗ ಪ್ರಾರಂಬಿಸುವಂತೆ ಜನಪ್ರತಿನಿಧಿಗಳು ಗುತ್ತಿಗೆದಾರರ ಮೇಲೆ ಒತ್ತಡ ಹೇರಬೇಕಾಗಿದೆ ಎನ್ನುತ್ತಾರೆ ಸ್ಥಳಿಯರಾದ ಪುರುಷೋತ್ತಮ
ಕಳೆದ ಮೂರು ವರ್ಷಗಳಿಂದ ಕಾಡಾನೆ ದಾಳಿಗೆ ಒಟ್ಟು 129 ಮಂದಿ ರೈತರು ಬಲಿಯಾಗಿದ್ದಾರೆ.…
ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಆಗಸ್ಟ್ 15ರಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಈಗಿನಂತೆ…
ವೈಜ್ಞಾನಿಕ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…
ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…
ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ…
ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ…