Advertisement
ಸುದ್ದಿಗಳು

ಗುರುಂಪುನಿಂದ-ನಾಗಪಟ್ಟಣದವರೆಗೆ ಆರಂಭಗೊಳ್ಳದ ರಸ್ತೆ ದುರಸ್ಥಿ: ನಗರ ಪಂಚಾಯತ್ ಎದುರು ನಾಗರಿಕರ ಪ್ರತಿಭಟನೆ

Share

ಸುಳ್ಯ: ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಗುರುಂಪುನಿಂದ-ನಾಗಪಟ್ಟಣದವರೆಗೆ 15 ದಿನಗಳೊಳಗೆ ರಸ್ತೆ ದುರಸ್ಥಿ ಆರಂಭಗೊಳಿಸುತ್ತೇವೆ ಎಂದು ಭರವಸೆ ನೀಡಿದ ನ.ಪಂ
ಅಧಿಕಾರಿಗಳು ಇನ್ನೂ ಕಾಮಗಾರಿ ಆರಂಭಿಸದಿರುವ ಹಿನ್ನಲೆಯಲ್ಲಿ ನ.ಪಂ. ವಿರುದ್ಧ ನಗರ ಪಂಚಾಯತ್ ಮುಂಭಾಗ ನಾಗರಿಕರು ಶನಿವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈಯವರು ಕಳೆದ ಬಾರಿ ಸೇತುವೆ ಬಳಿ ಪ್ರತಿಭಟನೆ ನಡೆಸಿದಾಗ 15 ದಿನದಲ್ಲಿ ಗುರುಂಪಿನಿಂದ ನಾಗಪಟ್ಟಣದವರೆಗಿನ ರಸ್ತೆ ಹೊಂಡ ಮುಚ್ಚುವ ಕಾಮಗಾರಿ ನಡೆಸುವ ಭರವಸೆ ನೀಡಿದ್ದರೂ ಆರಂಭಿಸಿಲ್ಲ. ನಾವು ಗ್ರಾಮಸ್ಥರ ಜತೆ ಸೇರಿ ರಸ್ತೆ ಅಭಿವೃದ್ಧಿ ಗೆ ಒತ್ತಾಯಿಸಿದರೆ ಅದಕ್ಕೆ ಶಾಸಕರು ಕಾಂಗ್ರೆಸ್ ಪ್ರತಿಭಟನೆ ಎಂದು ಹೇಳಿಕೆ ನೀಡುತ್ತಾರೆ. ಆ ರೀತಿಯ ಹೇಳಿಕೆ ನೀಡುವುದಕ್ಕಿಂತ ಶಾಸಕರು ಕೆಲಸ ಮಾಡಿ ತೋರಿಸಲಿ ಎಂದು ಆಗ್ರಹಿಸಿದರು.

ನ.ಪಂ‌.ಸದಸ್ಯ ಎಂ.ವೆಂಕಪ್ಪ ಗೌಡ ಮಾತನಾಡಿ ಕೂಡಲೇ ರಸ್ತೆ ದುರಸ್ಥಿ ಆರಂಭಿಸುವಂತೆ ಒತ್ತಾಯಿಸಿದರು. ಪ್ರಮುಖರಾದ ತೇಜಕುಮಾರ್ ಬಡ್ಡಡ್ಕ, ಸತ್ಯಕುಮಾರ್ ಆಡಿಂಜ, ಡೇವಿಡ್‌ ಧೀರಾ ಕ್ರಾಸ್ತ ಮಾತನಾಡಿದರು.  ಮುಖಂಡರಾದ ಬೆಟ್ಟ ರಾಜಾರಾಂ ಭಟ್, ಬೀರಾ ಮೊಯ್ದೀನ್, ಶರೀಫ್ ಕಂಠಿ, ಧರ್ಮಪಾಲ ಕೊಯಿಂಗಾಜೆ, ಶ್ರೀಲತಾ ಪ್ರಸನ್ನ, ತಿರುಮಲೇಶ್ವರಿ, ನಂದರಾಜ ಸಂಕೇಶ, ಭವಾನಿಶಂಕರ ಕಲ್ಮಡ್ಕ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಳಿಕ ಆಗಮಿಸಿದ ನ.ಪಂ.ಮುಖ್ಯಾಧಿಕಾರಿ ಮತ್ತಡಿಯವರನ್ನು ರಸ್ತೆ ಅಭಿವೃದ್ಧಿ ಪಡಿಸದ ಕುರಿತು ಪ್ರಶ್ನಿಸಿದರು. ಮಾತುಕತೆ ನಡೆದು ರಸ್ತೆ ದುರಸ್ಥಿ ನಡೆಸುವುದಾಗಿ ಮುಖ್ಯಾಧಿಕಾರಿ ಭರವಸೆ ನೀಡಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸೌದೆ ಬೇಡಿಕೆ ಏರಿಕೆ ಹಿನ್ನೆಲೆ | ಅಕ್ರಮ ಮರ ಕಡಿತಲೆ ತಡೆಯಲು ಸಚಿವ ಈಶ್ವರ ಖಂಡ್ರೆ ಕಟ್ಟುನಿಟ್ಟಿನ ಸೂಚನೆ

ಸೌದೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಅಕ್ರಮ ಮರ ಕಡಿತಲೆ ತಡೆಯಲು ಸಚಿವ ಈಶ್ವರ…

3 hours ago

ಕೃಷಿ ಗುರಿ ಕೇವಲ ‘ಆಹಾರ ಭದ್ರತೆ’ ಅಲ್ಲ, ಅದನ್ನೂ ಮೀರಿದ ಕೃಷಿ ಚಿಂತನೆ ಅಗತ್ಯ

ಕೃಷಿಯ ಮೂಲಕ ಕೇವಲ ಆಹಾರ ಉತ್ಪಾದನೆ ಹೆಚ್ಚಿಸುವುದಕ್ಕಿಂತ ಸಮಾನ ವಿತರಣೆ, ಪರಿಸರ ಸಂರಕ್ಷಣೆ…

4 hours ago

ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ | ಭಾರತೀಯ ಟಯರ್ ಉದ್ಯಮಕ್ಕೆ ತುರ್ತು ನೆರವಿನ ಬೇಡಿಕೆ

ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮದಿಂದ ಭಾರತೀಯ ಟೈರ್ ಉದ್ಯಮಕ್ಕೆ ರಫ್ತು ಮತ್ತು ವೆಚ್ಚದ…

5 hours ago

ಗೃಹ ಬಳಕೆ ಗ್ಯಾಸ್ ಕೊರತೆ ಇಲ್ಲ : ವದಂತಿಗಳಿಗೆ ಕಿವಿಗೊಡಬೇಡಿ — ಸಮಸ್ಯೆ ಇದ್ದರೆ ಈ ಸಹಾಯವಾಣಿ ಸಂಪರ್ಕಿಸಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಕೊರತೆ ಇಲ್ಲ ಎಂದು…

6 hours ago

ಪಿಎಂ ಕಿಸಾನ್‌ 22ನೇ ಕಂತು ಬಿಡುಗಡೆಗೆ ಸಿದ್ಧತೆ | 9.32 ಕೋಟಿ ರೈತರಿಗೆ ₹18,640 ಕೋಟಿ ನೇರ ನಗದು

ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ಹಣವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ.…

19 hours ago