ಗುರುಕುಲ ಪದ್ಧತಿಯಂತೆ ಚೂಂತಾರು ಸ್ಕಂದಕೃಪಾದಲ್ಲಿ ನಡೆಯುತ್ತಿದೆ ವಸಂತ ವೇದ ಶಿಬಿರ

August 26, 2019
7:00 PM

ಚೊಕ್ಕಾಡಿ: ವೇದೋಖಿಲಂ ಧರ್ಮಮೂಲಂ ಧರ್ಮಕ್ಕೆ ಮೂಲಕಾರಣವೇ ವೇದ. ಅಂತಹ ಹಿಂದೂ ಸನಾತನ ಧರ್ಮದ ನಿರ್ವಹಣೆ ಎಲ್ಲರ ಆದ್ಯ ಕರ್ತವ್ಯ. ಇದರಲ್ಲಿ  ವೇದಗಳ ಉಳಿವು ಹಾಗೂ ಬೆಳೆಸುವುದು  ಕೂಡಾ ಸೇರಿದೆ. ಈ ಕಾರಣದಿಂದಲೇ ಆರಂಭವಾದ್ದು ಸ್ಕಂದಕೃಪಾ ವೇದ ಶಿಬಿರ. ಚೂಂತಾರಿನಲ್ಲಿ  ಕಳೆದ ಕೆಲವು ವರ್ಷಗಳಿಂದ ಈ ವೇದ ಶಬಿರ ಉಚಿತವಾಗಿ ನಡೆಯುತ್ತಿದೆ.

Advertisement

ವೇದಗಳ ಸಂರಕ್ಷಣೆಯ ನಿಟ್ಟಿನಲ್ಲಿ ಹಿಂದಿನ ಋಷಿ ಮುನಿಗಳು ಮತ್ತು ಆಚಾರ್ಯ ಪುರುಷರು ಕೆಲವು ಸಂಸ್ಕಾರಗಳನ್ನು ತಿಳಿಸಿರುತ್ತಾರೆ. ಅದರಲ್ಲಿ ಷೋಡಶ ಸಂಸ್ಕಾರಗಳು ಅತ್ಯಂತ ಪ್ರಾಧಾನ್ಯವಾದುದು.ಈ ಸಂಸ್ಕಾರಗಳಲ್ಲಿ ಉಪನಯನ ಸಂಸ್ಕಾರ ಬಹಳ ಶ್ರೇಷ್ಠವಾದುದು. ಈ ಸಂಸ್ಕಾರದಿಂದಲೇ ದ್ವಿಜತ್ವ ಸಿದ್ಧಿಯಾಗಿ ವೇದಾಧ್ಯಯನಕ್ಕೆ ಅರ್ಹತೆ ಬರುತ್ತದೆ. ಆದರೆ ಕಾಲದ ಪ್ರಭಾವದಿಂದ ಸಂಸ್ಕಾರಕ್ಕೆ ಪ್ರಾಧಾನ್ಯತೆ ಕಮ್ಮಿಯಾಗಿ ಆಡಂಬರಗಳು ಹೆಚ್ಚಾಗುವ ಸಂದರ್ಭದಲ್ಲಿ 2009 ಎಪ್ರಿಲ್ 12 ರಂದು  ಚೂಂತಾರು ಮನೆಯಲ್ಲಿ ಗುರುಕುಲ ಪದ್ಧತಿಯಂತೆ ಸ್ಕಂದಕೃಪಾ ವಸಂತ ವೇದ ಶಿಬಿರವು ಪ್ರಾರಂಭ ಮಾಡಲಾಯಿತು.

ಅನ್ನದಾನಾತ್ ಪರಂದಾನಂ ವಿದ್ಯಾದಾನ ಮತಃ ಪರಂ
ಅನ್ನೇನ ಕ್ಷಣಿಕಾ ತೃಪ್ತಿಃ ಯಾವಜ್ಜೀವಂಚ ವಿದ್ಯಯಾ 

ಅನ್ನದಾನವು ಶ್ರೇಷ್ಠವಾದುದು. ಅದಕ್ಕಿಂತಲೂ ಶ್ರೇಷ್ಠವಾದುದು ವಿದ್ಯದಾನ.ಅನ್ನದಿಂದ ಕ್ಷಣಿಕ ತೃಪ್ತಿಯು ಆದರೆ ವಿದ್ಯೆಯಿಂದ ಜೀವನವಿರುವವರೆಗೂ ತೃಪ್ತಿಯೇ.ಈ ಸದುದ್ದೇಶದಿಂದಲೇ ಈ ಶಿಬಿರವು ಪ್ರಾರಂಭವಾಯಿತು. 10 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ಈ ವಸಂತ ವೇದ ಶಿಬಿರವು ಪ್ರಕೃತ 38 ವೇದ ವಿದ್ಯಾರ್ಥಿಗಳು ಅಧ್ಯಯನ ಮತ್ತು ಅಧ್ಯಾಪನ ಮಾಡುತ್ತಿದ್ದಾರೆ ಎಂದು ಹೇಳಲು ಸಂತೋಷಪಡುತ್ತಾರೆ ವೇದ ಶಿಬಿರದ ಸಮಿತಿ ಕಾರ್ಯದರ್ಶಿ ಶಿವಪ್ರಸಾದ್ ಚೂಂತಾರು.

ಯೋಗ,ಮುದ್ರೆಗಳು,ವರ್ಣಚಿಕಿತ್ಸೆಯ ಬಗ್ಗೆ ತರಬೇತಿಯನ್ನು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರ ಮಾರ್ಗದರ್ಶನದಲ್ಲಿ ಜರಗುತ್ತಿದೆ. ವಿಶೇಷವಾಗಿ ಮಕ್ಕಳಿಗೆ ಭಜನಾ ತರಬೇತಿಯನ್ನು ದೇಲಂಪಾಡಿ ಮಹಾಲಕ್ಷ್ಮೀ ಪ್ರಕಾಶ್ ನೀಡುತ್ತಾರೆ‌ ಅದೇ ರೀತಿಯಾಗಿ ಇಲ್ಲಿಯ ವಿದ್ಯಾರ್ಥಿಗಳಿಗೆ ಸಭಾಕಂಪನವನ್ನು ಹೋಗಲಾಡಿಸುವ ಉದ್ದೇಶದಿಂದ ಪ್ರತಿ ಶನಿವಾರದಂದು ಮಧ್ಯಾಹ್ನ ಪ್ರತಿಭಾ ಪ್ರದರ್ಶನವನ್ನು ತಮ್ಮದೇ ಸ್ವಸಾಮರ್ಥ್ಯದಿಂದ ಮಕ್ಕಳು ನಡೆಸಿಕೊಂಡು ಬರುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಂಗೀತ, ನಟನೆ,ಯೋಗ ಇತ್ಯಾದಿಯಾಗಿ ಉಳ್ಳಂತಹ ಪ್ರತಿಭೆಗಳನ್ನು ಪ್ರದರ್ಶಿಸಲಾಗುತ್ತಿದೆ. ತದುತ್ತರವಾಗಿ ಮಕ್ಕಳಿಗೆ ಮನೋಲ್ಲಾಸವನ್ನು ತಂದುಕೊಡುತ್ತದೆ.

Advertisement

ಹಾಗೆಯೇ ಇಲ್ಲಿಯ ವಿದ್ಯಾರ್ಥಿಗಳು ಶತರುದ್ರಾಭಿಷೇಕ,ಏಕಾದಶ ರುದ್ರಾಭಿಷೇಕ,ಪ್ರಯೋಗ ಭಾಗವಾದಂತಹ ಸತ್ಯನಾರಾಯಣ ಪೂಜೆ, ಗಣಪತಿ ಹೋಮ,ಗ್ರಹಶಾಂತಿ,ತ್ರಿಕಾಲ ಪೂಜೆ,ವಸೋರ್ಧಾರಾ ಸಹಿತ ರುದ್ರಹೋಮದಲ್ಲಿಯೂ ಭಾಗವಹಿಸಿರುತ್ತಾರೆ.ಸಮಾರೋಪ ಸಮಾರಂಭದಲ್ಲಿ ಗಣ್ಯ ವಿದ್ವಾಂಸರನ್ನು ವಿಶೇಷವಾಗಿ ಗೌರವಿಸಲಾಗುತ್ತದೆ.

ಊಟ,ತಿಂಡಿ ಮತ್ತು ವಸತಿಯನ್ನು ಉಚಿತವಾಗಿ ನೀಡಲಾಗುತ್ತದೆ. ವಿದ್ಯಾಸರಸ್ವತಿಯವರು ಭೋಜನದ ವ್ಯವಸ್ಥೆಯನ್ನು ಶುಚಿಯಾಗಿ ನಿರ್ವಹಿಸುತ್ತಿದ್ದಾರೆ. ಸಹಕಾರ ರೂಪದಲ್ಲಿ ನೆರೆಹೊರೆಯವರು, ಹಾಗೆಯೇ ವಿದ್ಯಾರ್ಥಿಗಳ ಪೋಷಕರು ಯಥಾಶಕ್ತಿಯಾಗಿ ಧನ-ಧಾನ್ಯ, ತರಕಾರಿ, ಶ್ರಮಿಕವಾದಂತಹ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಇನ್ನು ಮುಂದಿನ ವರ್ಷದಲ್ಲಿ ಪಾಠಶಾಲೆಯ ಏಳಿಗೆಯನ್ನು ಬಯಸುತ್ತಾ ಈ ಸದುದ್ದೇಶವನ್ನು ಎಲ್ಲಾ ವೇದಾಭಿಮಾನಿಗಳ ಪ್ರೋತ್ಸಾಹ ಬೇಕಾಗಿದೆ ಎನ್ನುತ್ತಾರೆ ವೇದಶಿಬಿರದ ಸಮಿತಿ ಅಧ್ಯಕ್ಷ ಸತ್ಯಶಂಕರ ಚೂಂತಾರು.

ಈ ಬಗ್ಗೆ ಹೆಚ್ಚಿನ ಮಾಹಿತಿಗೆ 8296101524 –  9448858734  ಸಂಪರ್ಕಿಸಬಹುದು.

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಂಪತ್ತಿನಷ್ಟೇ ಸದ್ಭುದ್ಧಿಯೂ ಮುಖ್ಯ – ರಾಘವೇಶ್ವರ ಶ್ರೀ
July 13, 2025
9:37 PM
by: The Rural Mirror ಸುದ್ದಿಜಾಲ
ಭಾರತತ್ವವನ್ನೇ ಕಳೆದುಕೊಂಡು ಯಾವ ಸಾಧನೆಯೂ ಮಾಡಲಾಗದು – ರಾಘವೇಶ್ವರ ಶ್ರೀ
July 10, 2025
7:42 PM
by: The Rural Mirror ಸುದ್ದಿಜಾಲ
ಜು.10 ರಿಂದ ರಾಘವೇಶ್ವರ ಶ್ರೀಗಳ ಸ್ವಭಾಷಾ ಚಾತುರ್ಮಾಸ್ಯ ಆರಂಭ
July 5, 2025
10:24 PM
by: The Rural Mirror ಸುದ್ದಿಜಾಲ
ಅಮರನಾಥ ಯಾತ್ರೆಗೆ ಚಾಲನೆ | ಮೊದಲ ಗುಂಪಿನ 5,880 ಯಾತ್ರಿಗಳು ಪ್ರಯಾಣ
July 3, 2025
11:46 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group