ಗೆದ್ದರೂ ಪಾಕಿಸ್ಥಾನ ವಿಶ್ವಕಪ್ ಕ್ರಿಕೆಟ್ ನಿಂದ ಔಟ್

July 6, 2019
6:10 AM

ಲಂಡನ್​​: ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿಯ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಆಕರ್ಷಕ ಗೆಲುವು ದಾಖಲಿಸಿದರೂ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಲಾಗದೆ ಟೂರ್ನಿಯಿಂದ ಹೊರಬಿದ್ದಿದೆ.

Advertisement
Advertisement

ಆರಂಭಿಕ ಆಟಗಾರ ಇಮಾಮ್​​​-ಉಲ್​-ಹಕ್​​​​ (100) ಶತಕ ಹಾಗೂ ಶಾಹೀನ್​​ ಆಫ್ರಿದಿ (35ಕ್ಕೆ 6​) ಅವರ ಬಿರುಗಾಳಿ ಬೌಲಿಂಗ್​ ನೆರವಿನಿಂದ ಪಾಕಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ 94 ರನ್​ಗಳಿಂದ ಗೆಲುವು ಸಾಧಿಸಿತು. ಎದುರಾಳಿ ತಂಡವನ್ನು 7 ರನ್​ಗಳಿಗೆ ಆಲೌಟ್​ ಮಾಡುವ ಅಸಾಧ್ಯ ಗುರಿಯನ್ನು ಸಾಧಿಸಲಾಗದೆ ವಿಶ್ವಕಪ್ ಟೂರ್ನಿಯಿಂದ ನಿರ್ಗಮಿಸಿತು.

ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 50 ಓವರ್​ಗಳಲ್ಲಿ 9 ವಿಕೆಟ್​​ ನಷ್ಟಕ್ಕೆ 315 ರನ್​​ ಗಳಿಸಿತು. ಗೆಲ್ಲಲು 316 ರನ್​ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾ 44.1 ಓವರ್​​ಗಳಲ್ಲಿ 221 ರನ್​ಗಳಿಗೆ ಆಲೌಟ್​​ ಸೋಲೊಪ್ಪಿಕೊಂಡು.

ಪಾಕಿಸ್ತಾನದ ಪರ ಬಾಬರ್​​ ಅಜಂ (98 ) ಶತಕದಂಚಿನಲ್ಲಿ ಎಡವಿದರು. ಬಾಂಗ್ಲಾ ಪರ ಮುಸ್ತಿಫಿಜುರ್​ ರಹಮಾನ್​​​​ 75ಕ್ಕೆ 5 ಮತ್ತು ಮೊಹಮ್ಮದ್​​​ ಸೈಫುದ್ದೀನ್​​​​​​​​​ 77ಕ್ಕೆ 3 ವಿಕೆಟ್​​​​​​​​ ಕಬಳಿಸಿದರು.

ಬಾಂಗ್ಲಾದೇಶ ಶಕೀಬ್​​ ಆಲ್​​ ಹಸನ್​​ (66) ಮತ್ತು ಲಿಟನ್​ ದಾಸ್​​​ (32) ಉತ್ತಮ ಆಟವಾಡಿದರು. ಆದರೆ ಉಳಿದವರಿಂದ ನಿರೀಕ್ಷಿತ ಬೆಂಬಲ ದೊರೆಯಲಿಲ್ಲ. ಬೌಲಿಂಗ್​ನಲ್ಲಿ ಪಾಕ್​​ನ ಶಾಹೀನ್​​ ಶಬ್ದಾದ್​​ ಖಾನ್​​ 59ಕ್ಕೆ 2 ವಿಕೆಟ್​​​ ಉರುಳಿಸಿದರು.

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜೇನು ಸಿಹಿ ಮಾತ್ರವಲ್ಲ- ಆರೋಗ್ಯ, ಸ್ವ-ಉದ್ಯೋಗ ಮತ್ತು ಸ್ವಾವಲಂಬನೆಯ ಉದಾಹರಣೆ
May 26, 2025
3:59 PM
by: The Rural Mirror ಸುದ್ದಿಜಾಲ
ಜಾಗತಿಕ ಆರ್ಥಿಕತೆಯಲ್ಲಿ ಭಾರತ 4ನೇ ಅತಿ ದೊಡ್ಡ ದೇಶ
May 26, 2025
3:49 PM
by: The Rural Mirror ಸುದ್ದಿಜಾಲ
ಮೇ 29 | ವಿಕಸಿತ  ಕೃಷಿ ಸಂಕಲ್ಪ ಅಭಿಯಾನಕ್ಕೆ ಚಾಲನೆ
May 26, 2025
3:21 PM
by: The Rural Mirror ಸುದ್ದಿಜಾಲ
2028ರ ವೇಳೆಗೆ ಭಾರತದ ಉಪಗ್ರಹ ಸಂವಹನದ ಮಾರುಕಟ್ಟೆ 20 ಶತಕೋಟಿ  ಡಾಲರ್
May 21, 2025
11:18 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group