ಗೊಂದಲದಲ್ಲೇಳುವ ಪ್ರಶ್ನೆಗಳು…..!

June 29, 2020
10:28 AM

ಪ್ರತಿಯೊಬ್ಬರ ಬದುಕಿನ ಗುರಿ ನಮ್ಮ ಅನ್ನ ನಾವೇ ದುಡಿಯ ಬೇಕು. ನಮಗೇನು ಬೇಕೋ ಅದನ್ನು ಪಡೆಯುವ ಸಾಮರ್ಥ್ಯ ನಮ್ಮದಾಗ ಬೇಕು. ಎಲ್ಲಿಯೂ ಯಾರ ಹಂಗಿನೊಳಗೂ ಸಿಕ್ಕಿಕೊಳ್ಳದೆ ನಮ್ಮಷ್ಟಕೆ ನಾವೇ ಇರಬೇಕು.

Advertisement
ಒಂದು ಒಳ್ಳೆಯ  ಉದ್ಯೋಗ , ಅದೂ ಕೈ ತುಂಬಾ ಸಂಬಳವಿರಬೇಕು, ಅಂತಹ ಉದ್ಯೋಗವೇ ಆಗಿರಬೇಕು.  ಎಲ್ಲಾ ಹೆತ್ತವರ ಯೋಚನೆ ಇರುವುದೇ ಹಾಗೆ (ಅಪವಾದಗಳಿರಬಹುದು)  ನಮ್ಮ ಕಷ್ಟ ಮಕ್ಕಳು ಪಡಬಾರದು ಎಂಬುದು. ಆದರೆ  ಅವರವರ ಬದುಕು ಅವರದ್ದೇ ಅಲ್ಲವೇ. ಒಂದು ಹಂತದವರೆಗೆ ಜವಾಬ್ದಾರಿ ಹೆತ್ತವರದ್ದು. ಆಮೇಲೆ  ಅವರವರ ಬದುಕು ಅವರೇ ನಿಭಾಯಿಸ ತಕ್ಕದ್ದು ಅಲ್ವೇ?. ಪುಟ್ಟ ಮಕ್ಕಳಿದ್ದಾಗ ಬೇಕು ಬೇಕಾದ್ದನ್ನು ಕಷ್ಟವಾದರೂ ತೆಗೆದು ಕೊಡಿಸಿ ಅಭ್ಯಾಸ ಮಾಡಿಯಾಗಿರುತ್ತಲ್ವಾ. ಅದೇ  ಮುಂದುವರಿದ ಭಾಗವಾಗಿ ವಿದ್ಯಾಭ್ಯಾಸದ ಸಮಯದಲ್ಲೂ ನಡೆದು ಬಿಡುತ್ತದೆ. ಯೋಗ್ಯತೆಗೆ ಮೀರಿದ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡಾಗ  ಮನೆಯವರೇನು ತಾನೇ ಮಾಡಬೇಕು? ಅದಕ್ಕೆ ಸರಿಯಾದ , ಪೂರಕ ವಾತಾವರಣ ವನ್ನು ಒದಗಿಸುವ ಜವಾಬ್ದಾರಿ ಹೆತ್ತವರದ್ದು ಆಗಿರುತ್ತದಲ್ಲವೇ.
ಯಾವುದೋ  ಒಂದು ಕೋರ್ಸ್ ಉತ್ತಮ ವೆಂದು ಆಯ್ಕೆ ಮಾಡಿ ಕೊಂಡು ಓದಿಯಾಗಿರುತ್ತದೆ.  ಅಲ್ಲಿ ಒಳ್ಳೆಯ ಅಂಕಗಳಿಸಿ ಪ್ರತಿಷ್ಠಿತ ಕಂಪೆನಿಗಳಲ್ಲಿ  ಉದ್ಯೋಗವು   ದೊರೆತು  ಬಿಡುತ್ತದೆ.   ಕೈ ತುಂಬ ಸಂಬಳ ಬಂದಾಗ   ಜವಾಬ್ದಾರಿಯೂ  ಇರುತ್ತದೆ.  ಆಗಷ್ಟೇ  ಓದು  ಮುಗಿಸಿ  ಒಂದು ನಿರಾಳತೆಯನ್ನು ಸವಿಯುವ ಮೊದಲೇ ಕೈಗೆ ದ ಅಪಾಯಿಂಟ್ ಮೆಂಟ್  ಸಿಕ್ಕಮೇಲೆ   ಕೆಲಸಕ್ಕೆ ಹೋಗದೇ ಇರಲಿಕ್ಕಾಗುವುದಿಲ್ಲ ತಾನೇ. ನಗರಗಳಲ್ಲಿ ಮನೆ ಮನೆಗೇ ಬಂದು ಆಯಾ ಹೊತ್ತಿಗೆ ಅಥವಾ ಇಡೀ ದಿನಕ್ಕೆ ಅಡುಗೆ ಮಾಡಿ ಕೊಡುವುದನ್ನೇ ಉದ್ಯೋಗ ಮಾಡಿಕೊಂಡವರಿರುತ್ತಾರೆ. ಅವರನ್ನ ನೇಮಿಸಿಕೊಂಡರೆ ಯಾವ ತಲೆಬಿಸಿಯೂ ಇಲ್ಲ. ಬೇಕುಬೇಕಾದ  ತಿಂಡಿಗಳನ್ನು ರುಚಿರುಚಿಯಾಗಿ ಮಾಡಿಕೊಡುತ್ತಾರೆ. ಅವರ ಕೆಲಸ ಮುಗಿಸಿ ಹೋಗುತ್ತಾರೆ. ಮತ್ತೆ ಮನೆ ಗುಡಿಸಿ ಒರಸಿ ಮಾಡಲು ಜನ ಇರುತ್ತಾರೆ.  ಹೀಗೆ   ಕೈಯಲ್ಲಿ   ಕೆಲಸ, ದುಡ್ಡು ಇದ್ದಾಗ  ಯಾವುದನ್ನು ಯೋಚನೆ ಮಾಡ ಬೇಕಾದ್ದಿಲ್ಲ. ಜಾಸ್ತಿ ಸಂಬಳ   ಕಂಪನಿಗಳು ಸುಮ್ಮನೆ ಕೊಡುವುದಿಲ್ಲ, ಇವರಿಂದ ಏನೋ ಹೆಚ್ಚಿನ ನಿರೀಕ್ಷೆಗಳಿರುತ್ತವೆ. ಹಗಲು ಇರುಳಿನ ಭೇದವಿಲ್ಲದೆ ಕೆಲಸ ಮಾಡ ಬೇಕಾಗುತ್ತದೆ.  ಅದಾಗಷ್ಟೆ ಪದವಿ ಮುಗಿಸಿ ಹೊರಬಂದ ಉಮ್ಮೇದಿನಲ್ಲಿ  ಎಷ್ಟು ಕೆಲಸ ಮಾಡಲೂ ತಯಾರಿರುವ ಯುವಕರು ತಮ್ಮ ‌ಶಕ್ತಿ ಮೀರಿ ದುಡಿಯುತ್ತಾರೆ.  ವಾರದ 5 ದಿನ ಕೆಲಸ, ಎರಡು ದಿನ ರೆಸ್ಟ್. ಹತ್ತಿರವಿದ್ದರೆ ಊರಿಗೆ ಪಯಣ ಅದೂ ಆರಂಭದಲ್ಲಿ. ಆಮೇಲೆ ಗೆಳೆಯರು, ಕಮಿಟ್ಮೆಂಟ್ ಗಳು ಅಧಿಕವಾದಾಗ ಮನೆಯಿಂದ ಫೋನ್ ಬಂದರೂ ‌ ಉತ್ತರಿಸುವುದು  ದೂರದ ಮಾತು.  ವರ್ಷದಲ್ಲಿ ಒಂದೋ ಎರಡೋ ಬಾರಿ ಮುಖ ತೋರಿಸಿದರಾಯಿತು.  ಯಾಕೆ    ಹೀಗಾಗುತ್ತದೆ ಎಂಬುದು ಅರ್ಥವಾಗದ ಸಂಗತಿ. ಬಾಲ್ಯದಲ್ಲಿ ಹಿರಿಯರು  ಸಂಸ್ಕಾರಗಳನ್ನು ಸರಿಯಾಗಿಯೇ ಕಲಿಸಿದರೂ ದೊಡ್ಡವರಾಗುತ್ತಿದ್ದಂತೆ ಬದಲಾವಣೆಗಳು  ಹೇಗೆ ಸಾದ್ಯ?  ನಾವು ಎತ್ತಿ ಆಡಿಸಿದ ಮಕ್ಕಳು ಇವರೇ?!!! ಎಂಬಂತೆ ನೋಡುವಂತಾಗುತ್ತದಲ್ಲಾ?
ಸಾಮಾನ್ಯವಾಗಿ ನಮ್ಮ ಮೂಲ ಇರುವುದು ಕೃಷಿಯಲ್ಲಿಯೇ.  ನಮ್ಮ ಏನೇ ಉನ್ನತಿಯಿದ್ದರೂ  ಅದಕ್ಕೆ ಮೂಲ ಕೃಷಿಯೇ. ಕೈಕೆಸರಾದರೆ ಬಾಯಿ ಮೊಸರು ಎಂದು ಸಣ್ಣ ತರಗತಿಯಲ್ಲಿ ಕಲಿತ ದುಡಿಮೆಯ ಅರ್ಥಕ್ಕೆ ಮತ್ತೆ ಬೆಲೆ ಬಂದಿದೆ. ಬಿಳಿಕಾಲರ್ ಕೆಲಸವೇ ಬೇಕೆಂದು ಪೇಟೆಗೆ ಹೋದವರು ಮತ್ತೆ ಹಳ್ಳಿಯತ್ತ ಮನಸು ಮಾಡುತ್ತಿದ್ದಾರೆ.  ಈ ಬೆಳವಣಿಗೆಗೆ ಕಾರಣ ಕೊರೊನಾವೆಂದರೆ ತಪ್ಪಾಗಲಾರದು.  ನಮ್ಮ ಕಾರ್ಯ ಕ್ಷೇತ್ರದ  ಮೇಲೆ ಪ್ರಕೃತಿ ಈ ರೀತಿಯಲ್ಲಿ ಹಿಡಿತ ಸಾಧಿಸಿದೆ.
ಬದುಕು ಬಹಳಷ್ಟು ವಿಷಯಗಳನ್ನು ಕಲಿಸುತ್ತದೆ.  ವಯಸ್ಸಾಗುತ್ತಿದ್ದಂತೆ ಪಕ್ವತೆ ಮೂಡುತ್ತಾ ಹೋಗುತ್ತದೆ. ನಮ್ಮ ಕನಸುಗಳು, ಯೋಜನೆಗಳೇನೇ ಇದ್ದರೂ ಕೆಲಸಕ್ಕೆ ಬರುವುದಿಲ್ಲ. ಕಾಲ ತನ್ನದೇ ನಿರ್ಧಾರ ಗಳನ್ನು ತೆಗೆದುಕೊಂಡಿರುತ್ತದೆ. ಆಯಾ ಸಮಯಕ್ಕೇನಾಗ ಬೇಕೋ ಅದೇ ಆಗುವುದು.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಬದುಕು ಪುರಾಣ | ಮನವನ್ನು ಚುಚ್ಚುವ ಅಳಿಲು
July 14, 2025
10:56 PM
by: ನಾ.ಕಾರಂತ ಪೆರಾಜೆ
ಮೊಬೈಲ್‌ ಕಣ್ಣು ಮಾತ್ರವಲ್ಲ – ಮನಸ್ಸನ್ನೂ ಹಾಳು ಮಾಡುತ್ತದೆ..!
July 13, 2025
11:36 AM
by: ಮಹೇಶ್ ಪುಚ್ಚಪ್ಪಾಡಿ
ಹೊಸರುಚಿ | ಹಲಸಿನ ಬೀಜದ ಪರೋಟ
July 12, 2025
7:11 AM
by: ದಿವ್ಯ ಮಹೇಶ್
ಸೆಕ್ಸ್ ಎಂದರೆ ಜತೆಯಲ್ಲಿ ಕಾಫಿ ಕುಡಿದಂತಲ್ಲ!?
July 10, 2025
7:53 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror

Join Our Group