ಗೌರವ ಸಮರ್ಪಣೆ ನಮ್ಮ ಸಂಸ್ಕೃತಿ: ಡಾ. ಪ್ರಭಾಕರ್ ಭಟ್‍ ಕಲ್ಲಡ್ಕ

November 1, 2019
4:00 PM

ಪುತ್ತೂರು: ಕೃತಜ್ಞತೆ ಸಲ್ಲಿಸುವುದು ಭಾರತದ ಸಂಸ್ಕೃತಿ. ತಂದೆ, ತಾಯಿ, ಗುರುಗಳನ್ನು ಮಾತ್ರವಲ್ಲ, ಎಲ್ಲರನ್ನು ಮತ್ತು ಎಲ್ಲವನ್ನುಪೂಜ್ಯ ಭಾವದಿಂದ ಕಂಡು ಕೃತಜ್ಞತೆ ಸಲ್ಲಿಸುತ್ತಿರುವುದು ನಮ್ಮ ಹಿರಿಮೆ. ನಮ್ಮಜೀವನದ ಪ್ರತಿಯೊಂದು ಹಂತದಲ್ಲೂ ಒಂದೊಂದು ರೀತಿಯಲ್ಲಿ ಸಹಕಾರಿಯಾಗುವ ಸರ್ವರಿಗೂ ಗೌರವ ಸಮರ್ಪಿಸುವುದು ಒಂದು ಭಾವನಾತ್ಮಕ ಸಂಬಂಧವನ್ನು ವೃದ್ಧಿಸುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್‍ ಕಲ್ಲಡ್ಕ ಹೇಳಿದರು.

Advertisement

ಅವರು ವಿವೇಕಾನಂದ ವಸತಿ ನಿಲಯಗಳ ಆಶ್ರಯದಲ್ಲಿ ಆಯೋಜಿಸಲಾದ “ಮಾತೃಸ್ವರೂಪಿ ಅಡುಗೆ ಮಾಡುವ ಬಂಧುಗಳಿಗೆ ಗೌರವ ಸಮರ್ಪಣ ಕಾರ್ಯಕ್ರಮ”ದಲ್ಲಿ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು. ವಿದ್ಯಾಭ್ಯಾಸದ ದೃಷ್ಟಿಯಿಂದ ಬೇರೆ ಪ್ರದೇಶಗಳಿಂದ ಆಗಮಿಸಿ, ವಸತಿ ನಿಲಯಗಳಲ್ಲಿ ಆಶ್ರಯಿಸಿರುವ ಸಾವಿರಾರು ವಿದ್ಯಾರ್ಥಿಗಳಿಗೆ ರುಚಿಶುಚಿಯಾದ ಅಡುಗೆಯನ್ನು ಉಣಬಡಿಸುವ ಬಾಣಸಿಗರು, ಮಾತೃಸ್ವರೂಪಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಹೇಗೆ ಮನೆಯಲ್ಲಿ ತಾಯಿಯು ಕಾಳಜಿ ವಹಿಸಿ, ಅಡುಗೆಯನ್ನು ಮನೆಮಂದಿಗೆಲ್ಲಾ ತಯಾರಿಸುತ್ತಾಳೋ, ಹಾಗೆಯೇ ವಸತಿ ನಿಲಯವೆಂಬ ದೊಡ್ಡ ಕುಟುಂಬಕ್ಕೆ ಊಟವನ್ನು ತಯಾರಿಸುತ್ತಾರೆ ಎಂದರು. ನಮಗೆಲ್ಲ ರುಚಿಯುಕ್ತ ಭೋಜನವನ್ನುಉಣಬಡಿಸುವ ಈ ಕೈಗಳ ಶ್ರಮ ನಿಜಕ್ಕೂ ಶ್ಲಾಘನೀಯ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕಾದರೆ, ಅವರಿಗೆ ಏನೂ ತೊಂದರೆಯಾಗದಂತೆ ಸಹಕರಿಸುವುದು ನಮ್ಮ ಜವಾಬ್ದಾರಿ. ಆತ್ಮೀಯತೆ ನಮ್ಮ ನಡುವಿನ ಸಂಬಂಧವನ್ನು ಬೆಸೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ವಿವೇಕಾನಂದ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಣಸಿಗರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ವಸತಿ ನಿಲಯದ ಅಧ್ಯಕ್ಷ ಶಿವಣ್ಣ ಗೌಡ, ವಸತಿ ನಿಲಯದ ಆಡಳಿತಾಧಿಕಾರಿ ಬಿ.ಹರೇಕೃಷ್ಣ, ಬಾಣಸಿಗರ ಕುಟುಂಬಸ್ಥರು ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘದ ಮತ್ತು ವಿವೇಕಾನಂದ ವಸತಿ ನಿಲಯದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಸತಿ ನಿಲಯದ ಕಾರ್ಯದರ್ಶಿ ಅಚ್ಯುತ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಸತಿ ನಿಲಯದ ವಿದ್ಯಾರ್ಥಿನಿಯರಾದ ಮೈಥಿಲಿ ಸ್ವಾಗತಿಸಿ, ಸಾಕ್ಷಿತಾ ವಂದಿಸಿದರು. ವಸತಿ ನಿಲಯದ ವಿದ್ಯಾರ್ಥಿಗಳಾದ ಜೀವನ್ ಮತ್ತು ಪೂಜಾ ಕಾರ್ಯಕ್ರಮವನ್ನು ನಿರೂಪಿಸಿದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶರಧಿ.ಡಿ.ಎಸ್
July 13, 2025
8:14 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕೃತಿಕಾ
July 13, 2025
8:01 AM
by: ದ ರೂರಲ್ ಮಿರರ್.ಕಾಂ
ರಾಜ್ಯಾದ್ಯಂತ ಲಕ್ಷ ವೃಕ್ಷ ಗಿಡಗಳ ನಾಟಿ ಕಾರ್ಯಕ್ರಮ | ಹೆಬ್ರಿಯ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ಚಾಲನೆ
July 13, 2025
7:50 AM
by: The Rural Mirror ಸುದ್ದಿಜಾಲ
ಶತ್ರುಗಳಿಂದ ಈ ರಾಶಿಯವರಿಗೆ ಜೀವಕ್ಕೆ ಅಪಾಯವಿದೆ..?
July 13, 2025
7:40 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group