ಸುಳ್ಯ: ಸುಳ್ಯದಲ್ಲಿ ಕಂಕಣ ಸೂರ್ಯಗ್ರಹಣ ನೋಡಲು ಸಾಧ್ಯವಾಗುತ್ತದೆ ಎಂಬ ನೆಲೆಯಲ್ಲಿ ಹಲವರು ಹೊರಗಿನಿಂದಲೂ ಬಂದು ಗ್ರಹಣ ವೀಕ್ಷಣೆ ಮಾಡಿದರು.
Advertisement
ತಿಪಟೂರು ಕಲ್ಪತರು ಕಾಲೇಜಿನ ನಿವೃತ್ತ ಗಣಿತ ಉಪನ್ಯಾಸಕರಾದ ಪ್ರೊ.ಟಿ.ಬಿ.ಜಯಾನಂದಯ್ಯ, ನಿವೃತ್ತ ಜಿಯೋಗ್ರಫಿ ಉಪನ್ಯಾಸಕ ಡಾ.ಜಗದೀಶ್ ಇವರ ಮನೆಯವರಾದ
ನಂದಾಮಣಿ, ವಿಜಯಾ ಸುಳ್ಯಕ್ಕೆ ಬಂದು ಸೂರ್ಯಗ್ರಹಣ ವೀಕ್ಷಿಸಿದರು. ಸುಳ್ಯ ಬಸ್ ನಿಲ್ದಾಣದ ಬಳಿಯಲ್ಲಿ ಇವರು ಗ್ರಹಣ ವೀಕ್ಷಿಸಿದರು. ಮೋಡ ಅಥವಾ ಇನ್ಯಾವುದೇ ಅಡೆ ತಡೆ ಇಲ್ಲದೆ ಪೂರ್ತಿಯಾಗಿ ಗ್ರಹಣ ವೀಕ್ಷಿಸಲು ಸಾಧ್ಯವಾಗಿರುವುದಿ ಖುಷಿ ಕೊಟ್ಟಿದೆ ಎಂದು ಇವರು ಹೇಳಿದ್ದಾರೆ. ಮೂರು ಗಂಟೆಗಳ ಕಾಲ ಇವರು ಸೂರ್ಯಗ್ರಹಣ ವೀಕ್ಷಿಸಿರುವುದರ ಜೊತೆಗೆ ತಾವು ತಂದಿದ್ದ ಕನ್ನಡಕದ ಮೂಲಕ ಹಲವರಿಗೆ ಗ್ರಹಣ ತೋರಿಸಿದ್ದಾರೆ.
ಅಲ್ಲದೆ ಹಲವು ಮಂದಿ ಅಲ್ಲಲ್ಲಿ ವಾಹನಗಳನ್ನು ನಿಲ್ಲಿಸಿ ಸೂರ್ಯಗ್ರಹಣ ನೋಡುತ್ತಿದ್ದರು. ಮೊಬೈಲ್ ಮೂಲಕ ಪೋಟೋ ತೆಗೆಯಲು ಪ್ರಯತ್ನಿಸುವುದು ಕಂಡು ಬಂದಿತ್ತು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement