ಸುಳ್ಯ: ತಾಲೂಕಿನ ಪ್ರತೀ ಗ್ರಾಮದಲ್ಲಿ ಕನಿಷ್ಟ 250 ಗಿಡಗಳನ್ನು ನೆಡಲು ಆರ್ಟ್ ಆಫ್ ಲಿವಿಂಗ್ ಯೋಜನೆ ರೂಪಿಸಿದೆ. ವಿಶ್ವ ಪರಿಸರದ ದಿನ ಸಾಂಕೇತಿಕವಾಗಿ ಗಿಡ ನೆಟ್ಟು ಈ ಯೋಜನೆಗೆ ಚಾಲನೆ ನೀಡಲಾಗಿದೆ.
ಆರ್ಟ್ ಆಫ್ ಲಿವಿಂಗ್ ದೇಶದ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಸರ ಉಳಿಸುವ ಹಾಗೂ ಬೆಳೆಸುವ ಯೋಜನೆ ಹಮ್ಮಿಕೊಂಡಿದೆ. ಇದರ ಜೊತೆಗೆ ನದಿ ಉಳಿಸುವ ಯೋಜನೆಯನ್ನೂ ಹಾಕಿಕೊಂಡಿದೆ. ಇದೀಗ ಪ್ರತೀ ತಾಲೂಕು ಮಟ್ಟದಲ್ಲಿ ಪರಿಸರ ಯೋಜನೆಗೆ ಮುಂದಾಗಿದ್ದು ಸುಳ್ಯ ತಾಲೂಕಿನ ಪ್ರತೀ ಗ್ರಾಮದಲ್ಲಿ ಕನಿಷ್ಟ 250 ಗಿಡಗಳನ್ನು ನೆಡಲು ಯೋಜನೆ ರೂಪಿಸಿದ್ದು ಮಲೆ ಆರಂಭವಾದ ಬಳಿಕ ಗ್ರಾಮಗಳಲ್ಲಿ ಈ ಕಾರ್ಯ ನಡೆಯಲಿದೆ ಎಂದು ಸುಳ್ಯ ತಾಲೂಕು ಸೇವಾ ಯೋಧ ಆರ್.ಕೆ.ಭಟ್ ತಿಳಿಸಿದ್ದಾರೆ.
ಪರಿಸರ ಉಳಿಯಬೇಕು ಹಾಗೂ ಬೆಳೆಸಬೇಕು ಎಂಬುದು ಇದರ ಉದ್ದೇಶವಾಗಿದ್ದು, ಪ್ರತೀಮಮನೆಯಲ್ಲಿ ಗಿಡಗಳನ್ನು ನೆಡುವಂತೆ ಆರ್ಟ್ ಆಪ್ ಲಿವಿಂಗ್ ಕಾರ್ಯಕರ್ತರು ಕರೆ ನೀಡಿದ್ದಾರೆ.ಕನಿಷ್ಟ ಒಂದು ಗಿಡವಾದರೂ ನೆಡಬೇಕು ಎಂದು ಕರೆ ನೀಡಿದ್ದಾರೆ. ಶಾಲೆಗಳಲ್ಲಿ ಹಾಗೂ ಖಾಳಿ ಇರುವ ಜಾಗದಲ್ಲಿ ಗಿಡಗಳನ್ನು, ಹಣ್ಣಿನ ಗಿಡಗಳನ್ನು ನೆಡುವಂತಗಬೇಕು ಎಂದು ಆರ್ಟ್ ಆಫ್ ಲಿವಿಂಗ್ ಬಯಸುತ್ತದೆ.