#ಗ್ರಾಮವಿಕಾಸ | ಲಾಕ್ಡೌನ್ ನಂತರ ಸುಳ್ಯದಲ್ಲಿ ಸ್ವಾವಲಂಬನೆಯ ಹೆಜ್ಜೆ | ಇದು ಆತ್ಮನಿರ್ಭರ ಭಾರತದ ಹೆಜ್ಜೆ |

June 6, 2020
8:15 PM
ಇದೊಂದು ಕ್ರಾಂತಿಕಾರಕ ಹೆಜ್ಜೆ…!. ಲಾಕ್ಡೌನ್ ನಂತರ ಕೈಗೊಂಡ ಸ್ವಾವಲಂಬನೆಯ ಪಥದ ಹೆಜ್ಜೆ. ಆತ್ಮನಿರ್ಭರ ಭಾರತದ ಕಡೆಗಿನ ಹೆಜ್ಜೆ ಇದು. ಸುಳ್ಯ ತಾಲೂಕಿನ ಸುಮಾರು 6000 ಕುಟುಂಬಗಳು ತರಕಾರಿಯಲ್ಲಿ  ಸ್ವಾವಲಂಬನೆಯನ್ನು  ಹೊಂದಲಿದೆ. ಸುಳ್ಯ ತಾಲೂಕಿನ ಗ್ರಾಮ ವಿಕಾಸ ಸಮಿತಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಆಶ್ರಯದಲ್ಲಿ ತರಕಾರಿ ಬೀಜ ವಿತರಣೆಯಾಗಿ  ತರಕಾರಿ ಕೃಷಿ ಈ ಮಳೆಗಾಲ ಕಾಣಲಿದೆ. ಉಳಿದ ತರಕಾರಿಗಳು ಸಹಕಾರಿ ಸಂಘಗಳ ಮೂಲಕ, ಸ್ಥಳೀಯ ಅಂಗಡಿಗಳ ಮೂಲಕ ಜನರಿಗೂ ಸಿಗಲಿದೆ. 

Advertisement
Advertisement
Advertisement

ಸುಳ್ಯ ತಾಲೂಕಿನಲ್ಲಿ  ಗ್ರಾಮ ವಿಕಾಸ ಸಮಿತಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಆಶ್ರಯದಲ್ಲಿ  ಈ ಬಾರಿ ತರಕಾರಿ ಬೀಜಗಳ ವಿತರಣೆ ನಡೆಯಲಿದೆ.ಇದಕ್ಕಾಗಿ ಈಗಾಗಲೇ ಸಿದ್ಧತೆಗಳು ನಡೆದಿದ್ದು ತರಕಾರಿ ಬೀಜಗಳ ಸಂಗ್ರಹ ನಡೆದಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Advertisement

ಆಸಕ್ತ ಕೃಷಿಕರು ತರಕಾರಿ ಬೀಜವನ್ನು ಬಿತ್ತುವಂತೆ ಹಾಗೂ ತರಕಾರಿ ಬೆಳೆಯನ್ನು  ಬೆಳೆಯುವಂತೆ ಉತ್ತೇಜನ ನೀಡಲಾಗಿದೆ. ಆತ್ಮನಿರ್ಭರ ಭಾರತ ಹೆಜ್ಜೆಯಾಗಿರುವ ಈ ಯೋಜನೆಯಲ್ಲಿ ಆಸಕ್ತ ಕೃಷಿಕರು ತೊಡಗಿಸಿಕೊಳ್ಳಬಹುದಾಗಿದೆ. ಮುಖ್ಯವಾಗಿ ಅಲಸಂಡೆ, ಪಡುವಲಕಾಯಿ, ಹಾಗಲಕಾಯಿ, ಬೆಂಡೆಕಾಯಿ, ಸೋರೆಕಾಯಿ, ಬದನೆ, ಚೀನೀಕಾಯಿ ಸೇರಿದಂತೆ ವಿವಿಧ ತರಕಾರಿ ಬೀಜಗಳು ಲಭ್ಯವಾಗಲಿದೆ.  ಗುಣಮಟ್ಟದ ತರಕಾರಿ ಬೀಜಗಳನ್ನೇ ಆಯ್ಕೆ ಮಾಡಲಾಗಿದ್ದು ಜೂ.8 ರ ಬಳಿಕ ವಿವಿಧ ಸಹಕಾರಿ ಸಂಘ ಹಾಗೂ ಗ್ರಾಮ ವಿಕಾಸ ಸಮಿತಿಗಳ ಆಶ್ರಯದಲ್ಲಿ  ಕೃಷಿಕರಿಗೆ ವಿತರಣೆಯಾಗಲಿದೆ. ಈಗಿನ ಅಂದಾಜು ಪ್ರಕಾರ ತಾಲೂಕಿನ ಸುಮಾರು 6000 ಕುಟುಂಬಗಳಿಗೆ ತರಕಾರಿ ಬೀಜ ವಿತರಣೆ ಮಾಡುವ ಗುರಿ ಹೊಂದಲಾಗಿದೆ.  ಇದಕ್ಕಾಗಿ ಸಹಕಾರಿ ಸಂಘಗಳೂ ಸಹಕಾರ ನೀಡಲಿದೆ.

ಜೂ.8 ರಂದು ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಗ್ರಾಮ ವಿಕಾಸ ಸಮಿತಿ ಸುಳ್ಯ ಮತ್ತು ಅಜ್ಜಾವರ ಆಶ್ರಯದಲ್ಲಿ ತರಕಾರಿ ಬೀಜ ವಿತರಣಾ ಕಾರ್ಯಕ್ರಮ  ಸುಳ್ಯ ಸಿಎ ಬ್ಯಾಂಕ್ ವಠಾರದಲ್ಲಿ ನಡೆಯಲಿದೆ. ಶಾಸಕ ಅಂಗಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ತಾಲೂಕಿನಲ್ಲಿ ಪ್ರತೀ ಗ್ರಾಮ ಮಟ್ಟದಲ್ಲೂ ಆಯಾ ಗ್ರಾಮದ ಸಹಕಾರಿ ಸಂಘ ಮತ್ತು ಗ್ರಾಮ ವಿಕಾಸ ಸಮಿತಿಯ ವತಿಯಿಂದ ತರಕಾರಿ ಬೀಜ ವಿತರಣೆ ನಡೆಯುವುದು.

Advertisement

ತರಕಾರಿ ಬೆಳೆಯು ಕೃಷಿಕರಿಗೆ ಸ್ವಾವಲಂಬನೆಯ ದಾರಿಯನ್ನು  ಹೇಳುವುದಲ್ಲದೆ ಉತ್ತಮ ಆದಾಯವನ್ನೂ ತರಬಲ್ಲುದು. ಆತ್ಮನಿರ್ಭರ ಭಾರತದ ಉದ್ದೇಶಕ್ಕೂ ಪೂರಕವಾಗಲಿದೆ. ಕೃಷಿಕರು ತರಕಾರಿ ಬೆಳೆದು ತಾವು ಉಪಯೋಗಿಸಿ ಹೆಚ್ಚಾಗಿರುವ ತರಕಾರಿಯನ್ನು ಮಾರಾಟ ಮಾಡಲು ಕೂಡಾ ಅವಕಾಶವೂ ಸಿಗಲಿದೆ.

 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗದಗದ ಲಕ್ಕುಂಡಿಯಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮಕ್ಕೆ ಚಾಲನೆ
November 25, 2024
7:33 AM
by: The Rural Mirror ಸುದ್ದಿಜಾಲ
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ
November 25, 2024
7:26 AM
by: The Rural Mirror ಸುದ್ದಿಜಾಲ
ಮಲೆನಾಡಿನಲ್ಲಿ ಕಾಡಾನೆ ಹಾವಳಿ ತಡೆಗೆ ಅಧಿವೇಶನದಲ್ಲಿ ಚರ್ಚಿಸಿ ಶಾಶ್ವತ ಪರಿಹಾರ
November 25, 2024
7:15 AM
by: The Rural Mirror ಸುದ್ದಿಜಾಲ
ಅಡಿಕೆ ಹಳದಿ ಎಲೆರೋಗ ಬಾಧಿಸಿದ ನಂತರದ ಕೃಷಿ ಬದುಕು ಹೇಗೆ ? ಕೃಷಿಕರು ಸವಾಲನ್ನು ಹೇಗೆ ಸ್ವೀಕರಿಸಬಹುದು..? | ಸಂಪಾಜೆಯ ಕೃಷಿಕ ಶಂಕರಪ್ರಸಾದ್‌ ರೈ ಅವರ ಅಭಿಪ್ರಾಯ |
November 25, 2024
6:52 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror