ಗ್ರಾಮೀಣ ಭಾಗದ ಜನರ ಪ್ರಮುಖವಾದ ಸಂಪರ್ಕ ವ್ಯವಸ್ಥೆ ಬಿ ಎಸ್ ಎನ್ ಎಲ್ ಪುನರುಜ್ಜೀವನಗೊಳ್ಳುವ ನಿರೀಕ್ಷೆ ಇದೆ. ಹಣಕಾಸು ಸಚಿವಾಲಯ ಮತ್ತು ಪ್ರಧಾನ ಮಂತ್ರಿ ಕಚೇರಿ 50,000 ಕೋಟಿ ರೂಪಾಯಿ ನೀಡಲು ಮುಂದಾಗಿದೆ ಎಂಬ ಸುಳಿವು ಲಭ್ಯವಾಗಿದ್ದು ಮುಂದಿನ ವಾರ ಈ ಬಗ್ಗೆ ಕೇಂದ್ರ ಸರಕಾರದಲ್ಲಿ ಚರ್ಚೆಯಾಗಲಿದೆ. ಹೀಗಾಗಿ ಮತ್ತೆ ಬಿ ಎಸ್ ಎನ್ ಎಲ್ ಸುಧಾರಣೆಯ ಹಾದಿಯತ್ತ ಸಾಗಲಿದೆ.
ಇದೇ ವೇಳೆ ವೇತನವೂ ಬಿ ಎಸ್ ಎನ್ ಎಲ್ ನೌಕರರಿಗೆ ಸಿಗಲಿದೆ. ಸೆಪ್ಟೆಂಬರ್ ತಿಂಗಳ ಸಂಬಳ ದೀಪಾವಳಿಗೂ ಮುನ್ನವೇ ನೌಕರರಿಗೆ ಸಿಗಲಿದೆ. ದೀಪಾವಳಿ ಹಬ್ಬದ ಮೊದಲು ಕಂಪನಿಯು ತನ್ನ ಸಂಪನ್ಮೂಲಗಳ ಮೂಲಕ ನೌಕರರಿಗೆ ಸಂಬಳ ನೀಡಲಿದೆ ಎಂದು ಬಿಎಸ್‌ಎನ್‌ಎಲ್ ಅಧ್ಯಕ್ಷರು ಹೇಳಿದ್ದಾರೆ. ವಿಆರ್‌ಎಸ್ ಯೋಜನೆಯ ಬಗ್ಗೆ ಇದೇ ವೇಳೆ ಒಪ್ಪಂದಕ್ಕೆ ಬರುವ ನಿರೀಕ್ಷೆಯಿದೆ. ಕಂಪನಿ ಪ್ರತಿ ತಿಂಗಳು 1,600 ಕೋಟಿ ಗಳಿಸುತ್ತಿದೆ. ಅದೇ ಸಮಯದಲ್ಲಿ ನೌಕರರಿಗೆ ಸಂಬಳ ನೀಡಲು ಕಂಪನಿ 850 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ.
ಇಲ್ಲಿ ವೇತಕ್ಕೆ ಅಧಿಕ ಖರ್ಚಾಗುತ್ತಿದೆ. ಅದೇ ಮಾದರಿಯ ಕೆಲಸಗಳು ನಡೆಯುತ್ತಿಲ್ಲ ಎಂಬ ಕಾರಣದಿಂದಲೇ ಬಿ ಎಸ್ ಎನ್ ಎಲ್ ಕಡೆಗೆ ಆಸಕ್ತಿ ಕಡಿಮೆಯಾಗಿತ್ತು. ಖಾಸಗಿ ಕಂಪನಿಗೆ ಪೈಪೋಟಿ ನೀಡಲು ಕಾರ್ಯತತ್ಪರತೆಯೂ ಅಗತ್ಯವಾಗಿತ್ತು. ಅಧಿಕ ಸಂಬಳ ಪಡೆದರೂ, ಸರಕಾರ ನೀಡಿದರೂ ಅದೇ ಮಾದರಿಯಲ್ಲಿ ಕೆಲಸಗಳು , ಸರಕಾರದ ನಿಯಮಗಳಲ್ಲಿ ಬದಲಾವಣೆ ಆಗದೇ ಇರುವುದು, ಹಿರಿಯ ಅಧಿಕಾರಿಗಳ ನಿರಾಸಕ್ತಿ, ಖಾಸಗಿ ಕಂಪನಿಗಳೊಂದಿಗೆ ಒಳ ಒಪ್ಪಂದ ಬಿ ಎಸ್ ಎನ್ ಎಲ್ ಹಿಂದೆ ಉಳಿಯಲು ಕಾರಣವಾದರೆ, ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡಲು ಶಕ್ತವಾಗಲಿಲ್ಲ ಎಂಬ ವಿಶ್ಲೇಷಣೆ ಹಿರಿಯ ತಜ್ಞರಿಂದ ನಡೆದಿತ್ತು. ಇದೀಗ ಕೇಂದ್ರ ಸರಕಾರವು ಮತ್ತೆ ಬಿ ಎಸ್ ಎನ್ ಎಲ್ ಸುಧಾರಣೆಯತ್ತ ಮುಖ ಮಾಡಿರುವುದು ಗ್ರಾಮೀಣ ಭಾಗದ ಜನರಿಗೆ ಸಂಪರ್ಕ ವ್ಯವಸ್ಥೆ ಸುಧಾರಣೆಯಾಗುವ ನಿರೀಕ್ಷೆ ಮೂಡಿಸಿದೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 953515649
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಾಗಲಿರುವ ವಾಯುಭಾರ ಕುಸಿತವು ನಾಳೆ ಬಂಗ್ಲಾ ದೇಶದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ…
ಮಳೆಯ ಕಾರಣದಿಂದ ಪೆರಿಯಾರ್ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಹೀಗಾಗಿ ಆಲುವಾ ಶಿವ ದೇವಾಲಯದ…
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಗಿರುವ ವಾಯುಭಾರ ಕುಸಿತವು ಮುಂದಿನ 3 ಅಥವಾ…