ಗ್ರಾಮೀಣ ಭಾಗದಲ್ಲಿ ಮಳೆ ಗಾಳಿಯ ಜೊತೆ ಸಮರ ಸಾರುವ ಮೆಸ್ಕಾಂ‌ ಸಿಬಂದಿಗಳು

August 8, 2019
10:14 AM

ಕಳೆದೊಂದು‌‌ ವಾರದಿಂದ ವಿಪರೀತ ಮಳೆ‌ ಹಾಗೂ ಕಳೆದ‌ 3 ದಿನಗಳಿಂದ ಗಾಳಿ.‌ಈ ಸಂದರ್ಭ ನಿರಂತರವಾಗಿ ಶ್ರಮ‌ಪಡುವವರಲ್ಲಿ ಮೆಸ್ಕಾಂ ಸಿಬಂದಿಗಳು ಸೇರುತ್ತಾರೆ.‌ಅವರ ಕಡೆಗೆ ಫೋಕಸ್..

Advertisement
Advertisement
Advertisement

ಸುಳ್ಯ: ಮಳೆಯ ಜೊತೆ ಗಾಳಿ. ಕರೆಂಟಿಲ್ಲ ಅಂತ ನಾವು ಹೇಳಿಬಿಟ್ಟರೆ ಆಯ್ತು..!. ಕೆಲವೇ ಹೊತ್ತಲ್ಲಿ ಕರೆಂಟು ಬರುತ್ತದೆ. ಅದರ ಹಿಂದಿನ ಶ್ರಮ ಅಪಾರ ಇದೆ. ವಿದ್ಯುತ್ 24 ಗಂಟೆಯ ಸೇವೆ, ಅದಕ್ಕೆ ವೇತನವೂ ಇದೆ. ‌ಅದು ನಿಜವೇ, ಆದರೆ ನಡು ರಾತ್ರಿಯಲ್ಲೂ ನೀಡುವ ಸೇವೆ, ಹಗಲಲ್ಲೂ ನಿರಂತರ ಓಡಾಟ ಗಮನಸೆಳೆಯುತ್ತದೆ.

Advertisement

ಮೆಸ್ಕಾಂ ಸಿಬಂದಿಗಳಿಗೆ ಗ್ರಾಮೀಣ ಭಾಗದಲ್ಲಿ ಮಳೆಗಾಲ‌ ಸೇವೆ ನೀಡುವುದೇ ದೊಡ್ಡ ಸವಾಲು. ಒಂದು ಕಡೆ ಗಾಳಿ ಇನ್ನೊಂದು ಕಡೆ ಜಾರುವ ಕಂಬಗಳು. ಇನ್ನೊಂದು ಕಡೆ ಮೈನ್ ಲೈನ್ ಸಮಸ್ಯೆ.‌ಇದೆಲ್ಲಾ ಮೆಸ್ಕಾಂ ಬಗೆ ಬಹುದೊಡ್ಡ ಸವಾಲು. ಹಿರಿಯ ಅಧಿಕಾರಿಗಾಳು ಯೋಜನೆ ಹಾಕಿಕೊಂಡರೆ ಇತರ ಸಿಬಂದಿಗಳು ಕಾರ್ಯರೂಪಕ್ಕೆ ತರುತ್ತಾರೆ.‌ಲೈನ್ ಮೆನ್ ಗಳಂತೂ ಶ್ರಮವಹಿಸಿ ಓಡಾಡುತ್ತಾರೆ.

ಈಗಲೂ ಹಾಗೆಯೇ ಕಳೆದ 3 ದಿನಗಳಿಂದ ‌ನಿರಂತರ ಓಡಾಟ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಸರಿ ಮಾಡುವಂತೆ ಮಾಡಿದ ತಕ್ಷಣ ಮೈನ್‌ಲೈನ್ ಹೋಗಿರುತ್ತದೆ ಆಗ ಗ್ರಾಮೀಣ ಭಾಗದ ಲೈನ್ ಅರ್ಧದಲ್ಲೇ ಇರುತ್ತದೆ. ನಂತರ ಅದೂ ಸರಿಯಾಗುತ್ತದೆ. ಹೀಗೇ ಓಡಾಟ ,‌ಸಂಪರ್ಕ ನಡೆಯುತ್ತಲೇ ಇರುತ್ತದೆ.

Advertisement

ವಿದ್ಯುತ್ ಸಂಪರ್ಕದ ಕೆಲಸದ ಸಂದರ್ಭದಲ್ಲಿ ಪವನ್ ಎಂಬವರು ಕಂಬದಿಂದ ಬಿದ್ದು ಗಾಯಗೊಂಡು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಈಗಂತೂ ಗ್ರಾಮೀಣ ಭಾಗದಲ್ಲಿ ಸಮಸ್ಯೆ ಗಳ ಮೇಲೆ ಸಮಸ್ಯೆಯಾಗಿದೆ. ಮೆಸ್ಕಾಂ ಇಷ್ಟೆಲ್ಲಾ ಕಾರ್ಯ ಮಾಡುತ್ತಿದ್ದರೂ ಇಂತಹ ಸಂದರ್ಭದಲ್ಲಿ ಗ್ರಾಮೀಣ ಭಾಗದ ತುರ್ತು ಸಂಪರ್ಕ ವ್ಯವಸ್ಥೆಯಾದ ಬಿ ಎಸ್ ಎನ್ ಎಲ್ ಸದ್ದಿಲ್ಲದೆ ಕೂತಿದೆ. ಇದಕ್ಕೆ ಉದಾಹರಣೆ ಇಲ್ಲೊಂದು ಸಂದೇಶ..‌ ತಾಲೂಕಿನಲ್ಲಿ ಒಂದು ಈ ಬಗ್ಗೆಯೇ ಒಂದು ಸಭೆಯನ್ನ ಜನಪ್ರತಿನಿಧಿಗಳು ಮಾಡುತ್ತಿದ್ದರೆ ಸರಿಯಾಗುತ್ತಿತ್ತು…

ಬಿ ಎಸ್ ಎನ್ ಎಲ್ ಬಗ್ಗೆ ಬಂದಿರುವ ಸಂದೇಶ ಹೀಗಿದೆ..

Advertisement

ಗ್ರಾಮೀಣ ಪ್ರದೇಶವಾದ ಕೊಲ್ಲಮೊಗ್ರು, ಹರಿಹರಪಲ್ತಡ್ಕ,ಬಾಳುಗೋಡು, ಹಾಗೂ ಕಲ್ಮಕ್ಕಾರು ಪ್ರದೇಶದ ಎಲ್ಲ ಸಾರ್ವಜನಿಕ ಬಂಧುಗಳು ಬಿ ಎಸ್ ಎನ್ ಲ್ ಸರಕಾರಿ ದೂರವಾಣಿಗೆ ಅವಲಂಬಿತರಾಗಿದ್ದು ಸದ್ಯದ ಪರಿಸ್ಥಿತಿ ಯಲ್ಲಿ ಕರೆಂಟು ದಿನದ 24 ಗಂಟೆ ಇಲ್ಲದೆ ಇರುವುದರಿಂದ, ಮೊಬೈಲ್ ಫೋನ್ ಗಳು ಯಾವುದು ಈ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ.  ಕಳೆದ ವರುಷ ಪ್ರಕ್ರತಿ ವಿಕೋಪಕ್ಕೆ ತುತ್ತಾದ  ಈ ಪ್ರದೇಶದಲ್ಲಿ ಜೀವ ಭಯದಿಂದ ಬದುಕುವ ಪರಿಸ್ಥಿತಿ ಉಂಟಾಗಿದೆ ಸಂಜೆವೇಳೆ ಈ ಭಾಗದಲ್ಲಿ ಬಾರಿ ಮಳೆ ಸುರಿದ ವರದಿ ಆಗಿದೆ ಇಲ್ಲಿ ಬಿ ಸ್ ಎನ್ ಲ್ ಬಿಟ್ಟು ಬೇರೆ ವ್ಯವಸ್ಥೆ ಇಲ್ಲ ವಿದ್ಯುತ್ತಿನ ಸಮಸ್ಯೆ ಅದ ಕಾರಣ ಮೂಲ ಸೌಕರ್ಯ ವ್ಯವಸ್ಥೆ ಟವರ್ ಗೆ ಆದರೂ ಡಿಸೇಲ್ ವ್ಯವಸ್ಥೆ ಮಾಡಿ ಕೊಡಬೇಕು. ಯಾವುದಾದರೂ ಪರಿಹಾರ ನಿಧಿ ಬಳಸಿ ಈ ಬಾಗದ ಜನರ ಸಮಸ್ಯೆಗೆ ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಯವರಲ್ಲಿ ಕಳಕಳಿಯ ವಿನಂತಿ ಯಾವುದೇ ತುರ್ತುಪರಿಸ್ಥಿತಿ ಗೆ ಈ ಪರಿಸ್ಥಿತಿ ತುಂಬಾ ಕಷ್ಟ ಅರ್ಥ ಮಾಡಿಕೊಳ್ಳಿ ಇದೆ ವಿನಂತಿ….

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಕಾಡಾನೆಗಳ ಹಾವಳಿ ತಪ್ಪಿಸಲು ರೈಲ್ವೆ ಬ್ಯಾರಿಕೇಡ್
January 12, 2025
9:04 PM
by: The Rural Mirror ಸುದ್ದಿಜಾಲ
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತಿಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ
January 11, 2025
7:05 AM
by: The Rural Mirror ಸುದ್ದಿಜಾಲ
ರಾಸಾಯನಿಕ ಕೃಷಿಯಿಂದಾಗುವ ಪರಿಣಾಮಗಳ ಬಗ್ಗೆ ಭಾರತದ ರೈತರಲ್ಲೂ ಅರಿವು | ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಕಾರ್ಯಕ್ರಮದಲ್ಲಿ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್
January 10, 2025
6:56 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror