ಕಳೆದೊಂದು ವಾರದಿಂದ ವಿಪರೀತ ಮಳೆ ಹಾಗೂ ಕಳೆದ 3 ದಿನಗಳಿಂದ ಗಾಳಿ.ಈ ಸಂದರ್ಭ ನಿರಂತರವಾಗಿ ಶ್ರಮಪಡುವವರಲ್ಲಿ ಮೆಸ್ಕಾಂ ಸಿಬಂದಿಗಳು ಸೇರುತ್ತಾರೆ.ಅವರ ಕಡೆಗೆ ಫೋಕಸ್..
ಸುಳ್ಯ: ಮಳೆಯ ಜೊತೆ ಗಾಳಿ. ಕರೆಂಟಿಲ್ಲ ಅಂತ ನಾವು ಹೇಳಿಬಿಟ್ಟರೆ ಆಯ್ತು..!. ಕೆಲವೇ ಹೊತ್ತಲ್ಲಿ ಕರೆಂಟು ಬರುತ್ತದೆ. ಅದರ ಹಿಂದಿನ ಶ್ರಮ ಅಪಾರ ಇದೆ. ವಿದ್ಯುತ್ 24 ಗಂಟೆಯ ಸೇವೆ, ಅದಕ್ಕೆ ವೇತನವೂ ಇದೆ. ಅದು ನಿಜವೇ, ಆದರೆ ನಡು ರಾತ್ರಿಯಲ್ಲೂ ನೀಡುವ ಸೇವೆ, ಹಗಲಲ್ಲೂ ನಿರಂತರ ಓಡಾಟ ಗಮನಸೆಳೆಯುತ್ತದೆ.
ಮೆಸ್ಕಾಂ ಸಿಬಂದಿಗಳಿಗೆ ಗ್ರಾಮೀಣ ಭಾಗದಲ್ಲಿ ಮಳೆಗಾಲ ಸೇವೆ ನೀಡುವುದೇ ದೊಡ್ಡ ಸವಾಲು. ಒಂದು ಕಡೆ ಗಾಳಿ ಇನ್ನೊಂದು ಕಡೆ ಜಾರುವ ಕಂಬಗಳು. ಇನ್ನೊಂದು ಕಡೆ ಮೈನ್ ಲೈನ್ ಸಮಸ್ಯೆ.ಇದೆಲ್ಲಾ ಮೆಸ್ಕಾಂ ಬಗೆ ಬಹುದೊಡ್ಡ ಸವಾಲು. ಹಿರಿಯ ಅಧಿಕಾರಿಗಾಳು ಯೋಜನೆ ಹಾಕಿಕೊಂಡರೆ ಇತರ ಸಿಬಂದಿಗಳು ಕಾರ್ಯರೂಪಕ್ಕೆ ತರುತ್ತಾರೆ.ಲೈನ್ ಮೆನ್ ಗಳಂತೂ ಶ್ರಮವಹಿಸಿ ಓಡಾಡುತ್ತಾರೆ.
ಈಗಲೂ ಹಾಗೆಯೇ ಕಳೆದ 3 ದಿನಗಳಿಂದ ನಿರಂತರ ಓಡಾಟ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಸರಿ ಮಾಡುವಂತೆ ಮಾಡಿದ ತಕ್ಷಣ ಮೈನ್‌ಲೈನ್ ಹೋಗಿರುತ್ತದೆ ಆಗ ಗ್ರಾಮೀಣ ಭಾಗದ ಲೈನ್ ಅರ್ಧದಲ್ಲೇ ಇರುತ್ತದೆ. ನಂತರ ಅದೂ ಸರಿಯಾಗುತ್ತದೆ. ಹೀಗೇ ಓಡಾಟ ,ಸಂಪರ್ಕ ನಡೆಯುತ್ತಲೇ ಇರುತ್ತದೆ.
ವಿದ್ಯುತ್ ಸಂಪರ್ಕದ ಕೆಲಸದ ಸಂದರ್ಭದಲ್ಲಿ ಪವನ್ ಎಂಬವರು ಕಂಬದಿಂದ ಬಿದ್ದು ಗಾಯಗೊಂಡು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈಗಂತೂ ಗ್ರಾಮೀಣ ಭಾಗದಲ್ಲಿ ಸಮಸ್ಯೆ ಗಳ ಮೇಲೆ ಸಮಸ್ಯೆಯಾಗಿದೆ. ಮೆಸ್ಕಾಂ ಇಷ್ಟೆಲ್ಲಾ ಕಾರ್ಯ ಮಾಡುತ್ತಿದ್ದರೂ ಇಂತಹ ಸಂದರ್ಭದಲ್ಲಿ ಗ್ರಾಮೀಣ ಭಾಗದ ತುರ್ತು ಸಂಪರ್ಕ ವ್ಯವಸ್ಥೆಯಾದ ಬಿ ಎಸ್ ಎನ್ ಎಲ್ ಸದ್ದಿಲ್ಲದೆ ಕೂತಿದೆ. ಇದಕ್ಕೆ ಉದಾಹರಣೆ ಇಲ್ಲೊಂದು ಸಂದೇಶ.. ತಾಲೂಕಿನಲ್ಲಿ ಒಂದು ಈ ಬಗ್ಗೆಯೇ ಒಂದು ಸಭೆಯನ್ನ ಜನಪ್ರತಿನಿಧಿಗಳು ಮಾಡುತ್ತಿದ್ದರೆ ಸರಿಯಾಗುತ್ತಿತ್ತು…
ಬಿ ಎಸ್ ಎನ್ ಎಲ್ ಬಗ್ಗೆ ಬಂದಿರುವ ಸಂದೇಶ ಹೀಗಿದೆ..
ಗ್ರಾಮೀಣ ಪ್ರದೇಶವಾದ ಕೊಲ್ಲಮೊಗ್ರು, ಹರಿಹರಪಲ್ತಡ್ಕ,ಬಾಳುಗೋಡು, ಹಾಗೂ ಕಲ್ಮಕ್ಕಾರು ಪ್ರದೇಶದ ಎಲ್ಲ ಸಾರ್ವಜನಿಕ ಬಂಧುಗಳು ಬಿ ಎಸ್ ಎನ್ ಲ್ ಸರಕಾರಿ ದೂರವಾಣಿಗೆ ಅವಲಂಬಿತರಾಗಿದ್ದು ಸದ್ಯದ ಪರಿಸ್ಥಿತಿ ಯಲ್ಲಿ ಕರೆಂಟು ದಿನದ 24 ಗಂಟೆ ಇಲ್ಲದೆ ಇರುವುದರಿಂದ, ಮೊಬೈಲ್ ಫೋನ್ ಗಳು ಯಾವುದು ಈ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಕಳೆದ ವರುಷ ಪ್ರಕ್ರತಿ ವಿಕೋಪಕ್ಕೆ ತುತ್ತಾದ ಈ ಪ್ರದೇಶದಲ್ಲಿ ಜೀವ ಭಯದಿಂದ ಬದುಕುವ ಪರಿಸ್ಥಿತಿ ಉಂಟಾಗಿದೆ ಸಂಜೆವೇಳೆ ಈ ಭಾಗದಲ್ಲಿ ಬಾರಿ ಮಳೆ ಸುರಿದ ವರದಿ ಆಗಿದೆ ಇಲ್ಲಿ ಬಿ ಸ್ ಎನ್ ಲ್ ಬಿಟ್ಟು ಬೇರೆ ವ್ಯವಸ್ಥೆ ಇಲ್ಲ ವಿದ್ಯುತ್ತಿನ ಸಮಸ್ಯೆ ಅದ ಕಾರಣ ಮೂಲ ಸೌಕರ್ಯ ವ್ಯವಸ್ಥೆ ಟವರ್ ಗೆ ಆದರೂ ಡಿಸೇಲ್ ವ್ಯವಸ್ಥೆ ಮಾಡಿ ಕೊಡಬೇಕು. ಯಾವುದಾದರೂ ಪರಿಹಾರ ನಿಧಿ ಬಳಸಿ ಈ ಬಾಗದ ಜನರ ಸಮಸ್ಯೆಗೆ ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಯವರಲ್ಲಿ ಕಳಕಳಿಯ ವಿನಂತಿ ಯಾವುದೇ ತುರ್ತುಪರಿಸ್ಥಿತಿ ಗೆ ಈ ಪರಿಸ್ಥಿತಿ ತುಂಬಾ ಕಷ್ಟ ಅರ್ಥ ಮಾಡಿಕೊಳ್ಳಿ ಇದೆ ವಿನಂತಿ….
ಅಸಹಜ ಚಲನೆಯ ಕಾರಣದಿಂದ ಕರಾವಳಿ ಭಾಗಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ.
ಅಡಿಕೆ ಬೆಳೆಗೆ ಪರ್ಯಾಯವಾಗಿ ಅಥವಾ ಉಪಬೆಳೆಯಾಗಿ ತಾಳೆ ಬೆಳೆಯನ್ನು ಬೆಳೆಯುವ ಬಗ್ಗೆ ಈಗಾಗಲೇ…
ಹವಾಮಾನ ಬದಲಾವಣೆಯಿಂದ ಹಾಗೂ ತಾಪಮಾನದ ದಿಢೀರ್ ಬದಲಾವಣೆಗಳು ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಪ್ರಕರಣ ಹೆಚ್ಚಾಗುತ್ತಿದೆ…
ಕ್ಯಾಂಪ್ಕೋದಿಂದ ಸಂಗ್ರಹಿಸುತ್ತಿರುವ ಶೇಕಡ 0.48ರಷ್ಟು ಮಾರುಕಟ್ಟೆ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂಬ ಸಂಸ್ಥೆಯ…
ಹಲಸಿನ ಬೀಜದ ಪರೋಟ : ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಹಲಸಿನ…
ವೈದಿಕ ಜ್ಯೋತಿಷ್ಯದಲ್ಲಿ ಮಂಗಳ ಗ್ರಹವು ಶಕ್ತಿ, ಧೈರ್ಯ, ಮತ್ತು ಆಕ್ರಮಣಕಾರಿ ನಿರ್ಧಾರಗಳ ಸಂಕೇತವಾಗಿದೆ.…