Advertisement
Categories: MIRROR FOCUS

ಗ್ರಾಮೀಣ ಭಾಗದ ಜನರ ಹೃದಯಾಘಾತ ತಡೆಗೆ CAD : ದಕ್ಷಿಣ ಕನ್ನಡ , ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 125 ECG ಯಂತ್ರಗಳ ಕಾರ್ಯನಿರ್ವಹಣೆ

Share

ಹೃದಯ ಸಂಬಂಧಿ ಕಾಯಿಲೆಗಳು ಗ್ರಾಮೀಣ ಭಾಗದಲ್ಲಿ ಭಯ ಹುಟ್ಟಿಸುತ್ತದೆ. ಎದೆನೋವು ಇತ್ಯಾದಿಗಳು ಕಾಣಿಸಿಕೊಂಡಾಗ ತಕ್ಷಣ  ಯಾವ ಸಮಸ್ಯೆ ಎಂಬುದು ಪತ್ತೆಯಾಗಬೇಕು ಜೊತೆಗೆ ತಕ್ಷಣ ಚಿಕಿತ್ಸೆಯೂ ಆಗಬೇಕು. ಆದರೆ ಗ್ರಾಮೀಣ ಭಾಗದಲ್ಲಿ ಇದ್ಯಾವುದಕ್ಕೂ ವ್ಯವಸ್ಥೆ ಇರುವುದಿಲ್ಲ. ಇದ್ದರೂ ಅಸಮರ್ಪಕ ಇಸಿಜಿ ವ್ಯವಸ್ಥೆ ಇರುತ್ತದೆ. ಕನಿಷ್ಠ 1 ಗಂಟೆ ಚಿಕಿತ್ಸೆಗೆ ಸಮಯ ತಗಲುತ್ತದೆ. ಅದಾಗಲೇ ಪ್ರಮುಖ ಸಮಯ ಕಳೆದ ಬಿಡುತ್ತದೆ.  ಮಂಗಳೂರಿನ ಪ್ರಮುಖ  ಹ್ರದ್ರೋಗ ತಜ್ಞ ಡಾ| ಪದ್ಮನಾಭ ನೇತೃತ್ವದ ವೈದ್ಯರ ತಂಡ ಹಾಗೂ ಗ್ರಾಮೀಣ ಭಾಗದ ವೈದ್ಯರ ಸಮನ್ವಯದ ಜೊತೆಗೆ  ಆಧುನಿಕ ಸೌಲಭ್ಯ ಬಳಸಿ ಚಿಕಿತ್ಸೆ ನೀಡಲು ಪ್ರಯತ್ನ ಮಾಡುತ್ತಿದೆ. ಈಗ ದಕ್ಷಿಣ ಕನ್ನಡ , ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 125 ECG ಯಂತ್ರಗಳ ಕಾರ್ಯನಿರ್ವಹಣೆ ಮಾಡುತ್ತಿದೆ.


 ಮಂಗಳೂರಿನ ಹೃದ್ರೋಗ ತಜ್ಞ ಮತ್ತು ಪ್ರಾಧ್ಯಾಪಕ ಹಾಗೂ ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ|ಪದ್ಮನಾಭ ಕಾಮತ್ ಗ್ರಾಮೀಣ ಭಾಗದ ಜನರ ಜೀವ ಉಳಿಸುವ ಕೆಲಸವನ್ನು  ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಯಾರೊಬ್ಬರೂ ಬದುಕು ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ಕೆಲಸ ಮಾಡುತ್ತಿದೆ.

ವ್ಯವಸ್ಥೆ ಏನು ?:
ಗ್ರಾಮೀಣ ಭಾಗದ ಬಹುದೊಡ್ಡ ಸಮಸ್ಯೆ ಹೃದಯಾಘಾತ. ಇದಕ್ಕೆ ತಕ್ಷಣವೇ ಚಿಕಿತ್ಸೆಯಾಗಬೇಕು.ಆದರೆ ಗ್ರಾಮೀಣ ಭಾಗದಲ್ಲಿ ಇದು ಸಾಧ್ಯವಾಗುತ್ತಿಲ್ಲ.ಇದಕ್ಕೆ ಅಸಮರ್ಪಕ ಇಸಿಜಿ  ಸೌಲಭ್ಯಗಳು ಮತ್ತು ವಿಳಂಬವಾದ ರೋಗನಿರ್ಣಯವೂ ಕಾರಣವಾಗುತ್ತದೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಹೃದಯಾಘಾತ ಪ್ರಕರಣಗಳಲ್ಲಿ ಸಾವಿಗೆ ಕಾರಣವಾಗಿದೆ. 2014 ರಲ್ಲಿ ವಿಳಂಬವಾದ ರೋಗನಿರ್ಣಯದಿಂದಾಗಿ ಗ್ರಾಮೀಣ ಭಾಗದ ಯುವಕನೊಬ್ಬ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿರುವುದನ್ನು ಕಂಡ ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ|ಪದ್ಮನಾಭ ಕಾಮತ್ ಇಂತಹ ಪ್ರಕರಣಗಳಿಗೆ ಏನಾದರು ಮಾಡಲೇಬೇಕು ಎಂದು ಸಾಮಾಜಿಕ ನೆಲೆಯಲ್ಲಿ ಯೋಚಿಸಿದರು. ಹೀಗಾಗಿ ವಾಟ್ಸಾಪ್ ಗುಂಪುಗಳ ಮೂಲಕ ಹಳ್ಳಿಗಳು, ಹತ್ತಿರದ ಪಟ್ಟಣಗಳು, ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು ಹಾಗೂ ಅಲ್ಲಿನ ಭೌಗೋಳಿಕ ಸಮಸ್ಯೆ, ತಾಂತ್ರಿಕ ಸಮಸ್ಯೆ ಬಗ್ಗೆ ಮಾಹಿತಿ ಕಲೆ ಹಾಕಿದರು. ಫೆಬ್ರವರಿ 2018 ರಲ್ಲಿ, ಅವರು 150 ಸದಸ್ಯರನ್ನು ಹೊಂದಿರುವ ವಾಟ್ಸಾಪ್ ಗುಂಪಿನ ‘ಕಾರ್ಡಿಯಾಲಜಿ ಎಟ್ ಡೋರ್‌ಸ್ಟೆಪ್’ (CAD) ಅನ್ನು ರಚಿಸಿದರು, ಹೃದಯ ಸಂಬಂಧಿತ ಸಮಸ್ಯೆಗಳನ್ನು ಗುರುತಿಸಲು ಮತ್ತು ವಾಟ್ಸಾಪ್ ಮೂಲಕ ಸಹಾಯವನ್ನು ಒದಗಿಸಲು ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಖಾಸಗಿ ಚಿಕಿತ್ಸಾಲಯಗಳಲ್ಲಿ ಇಸಿಜಿ ಯಂತ್ರಗಳನ್ನು ಸ್ಥಾಪಿಸಿದರು. ಈ ಇಸಿಜಿ ಯಂತ್ರಗಳನ್ನು ಉಚಿತವಾಗಿ ನೀಡಲಾಯಿತು. ಈಗಾಗಲೇ ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ  ಹಾಗೂ ಕೆಲವು ಕಡೆ ಖಾಸಗಿ ಕ್ಲಿನಿಕ್ ಗಳಲ್ಲಿ  ಇಸಿಜಿ ಯಂತ್ರ ಇಡಲಾಗಿದೆ. ಪ್ರಥಮ ಚಿಕಿತ್ಸೆ ಸಮಯಕ್ಕೆ ಸರಿಯಾಗಿ ನೀಡಿದರೆ 80 ರಷ್ಟು ಹೃದಯ ರೋಗಿಗಳನ್ನು ಉಳಿಸಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಪ್ರಥಮ ಚಿಕಿತ್ಸಾ ಕೊರತೆಯ ಬಗ್ಗೆ, ಗ್ರಾಮೀಣ ಪ್ರದೇಶಗಳಲ್ಲಿ ಇಸಿಜಿ ಸೌಲಭ್ಯದ ಕೊರತೆಯಿಂದಾಗಿ ಸರಿಯಾದ ರೋಗನಿರ್ಣಯದ ಕೊರತೆಯು ಅನೇಕ ಸಂದರ್ಭಗಳಲ್ಲಿ ಕಾರಣವಾಗಿದೆ ಎಂದು ಹೇಳುತ್ತಾರೆ ಡಾ.ಪದ್ಮನಾಭ ಕಾಮತ್.

ಹೇಗೆ ಕೆಲಸ ಮಾಡುತ್ತದೆ CAD ?:

ಎದೆನೋವು ಸಮಸ್ಯೆ ಕಾಡುವ ವ್ಯಕ್ತಿ CAD ಕಡೆಯಿಂದ ಇಸಿಜಿ ಯಂತ್ರ ಇರಿಸಲಾದ   ಖಾಸಗಿ ಕ್ಲಿನಿಕ್ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳಿಗೆ ತಕ್ಷಣವೇ ಅಲ್ಲಿನ ವೈದ್ಯರು  ಇಸಿಜಿಯನ್ನು ದಾಖಲಿಸುತ್ತಾರೆ ಮತ್ತು ಅದನ್ನು ವಾಟ್ಸಾಪ್ ಗುಂಪಿನಲ್ಲಿ ರವಾನಿಸುತ್ತಾರೆ.ಈ ಗುಂಪುಗಳಲ್ಲಿ ಪೋಸ್ಟ್ ಮಾಡಲಾದ ಇಸಿಜಿಗಳ ಬಗ್ಗೆ ಮಂಗಳೂರಿನ ಮತ್ತೊಬ್ಬ ಹೃದ್ರೋಗ ತಜ್ಞ ಕಾಮತ್ ಮತ್ತು ಮನೀಶ್ ರೈ ಅಥವಾ ಡಾ.ಪದ್ಮನಾಭ ಕಾಮತ್ ಅಥವಾ ತಜ್ಞ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ತುರ್ತು ಸಂದರ್ಭಗಳಲ್ಲಿ  ಅವರನ್ನು ಎಚ್ಚರಿಸಿ ಅಂಬುಲೆನ್ಸ್ ಮೂಲಕ ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲು ಸೂಚನೆ ನೀಡುತ್ತಾರೆ. ಸಾಮಾನ್ಯ ಸಂದರ್ಭದಲ್ಲಿ ಮುಂದಿನ ಚಿಕಿತ್ಸೆ ಹಾಗೂ ಪರೀಕ್ಷೆಗೆ ಸಲಹೆ ನೀಡುತ್ತಾರೆ. ಗ್ರೂಪುಗಳಲ್ಲಿ ಬರುವ ಇಸಿಜಿಗಳಿಗೆ ಕ್ಷಣಮಾತ್ರದಲ್ಲಿ ಉತ್ತರವನ್ನೂ ನೀಡುತ್ತಾರೆ.  ಇಸಿಜಿಯಲ್ಲಿ ಹೃದಯಾಘಾತಕ್ಕೆ ಸಂಬಂಧಿಸಿದ ಸಂದರ್ಭಗಳನ್ನು ಕಂಡುಬಂದರೆ ತಕ್ಷಣ ನಿಭಾಯಿಸಲು ಅವರಿಗೆ ಪ್ರಥಮ ಚಿಕಿತ್ಸೆಯನ್ನು ಸಹ ಕಲಿಸಲಾಗಿದೆ.

ದಕ್ಷಿಣ ಕನ್ನಡ , ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 125 ECG ಯಂತ್ರಗಳ ಕಾರ್ಯನಿರ್ವಹಣೆ:

ದಕ್ಷಿಣ ಕನ್ನಡ , ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 125 ECG ಯಂತ್ರಗಳನ್ನು ವಿವಿದೆಡೆ ಸ್ಥಾಪಿಸಲಾಗಿದೆ. ಬಹುತೇಕ ಎಲ್ಲಾ ಕಡೆಗಳಲ್ಲೂ ಇಸಿಜಿ ಯಂತ್ರವಿದೆ. ಇದರ ಜೊತೆಗೆ ಇತರ ಜಿಲ್ಲೆಗಳಿಗೂ ಈ ಯೋಜನೆ ವಿಸ್ತರಣೆ ಮಾಡಲಾಗಿದ್ದು 16 ನೇ ಜಿಲ್ಲೆಯಾಗಿ CAD (Cardiolgy at Doorsteps life saving whatsapp)ಗ್ರೂಪ್ ನ ಪ್ರಯೋಗ ಮಂಡ್ಯ ಜಿಲ್ಲೆಯಲ್ಲಿ ಆರಂಭಗೊಂಡಿದೆ.  205ನೇ  ಇಸಿಜಿಯನ್ನು ಮಂಡ್ಯ ಜಿಲ್ಲೆಗೆ ನೀಡಲಾಗುತ್ತಿದೆ.

 

ದಕ್ಷಿಣ ಕನ್ನಡ , ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 125 ECG ಯಂತ್ರಗಳ ಕಾರ್ಯನಿರ್ವಹಣೆಯಾಗುತ್ತಿದೆ. ಇದೆಲ್ಲವೂ ಎಲ್ಲವೂ ಸಂಪೂರ್ಣ ಉಚಿತವಾಗಿದ್ದು  ದಿನದ 24 ಗಂಟೆಯೂ ಕೆಲಸ ಮಾಡುತ್ತದೆ. ಇದು  ನಮ್ಮ ಉದ್ದೇಶದ ಸಾರ್ಥಕತೆ ಕ್ಷಣ ಎಂದು ಹೇಳುತ್ತಾರೆ ಡಾ|ಪದ್ಮನಾಭ ಕಾಮತ್.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಂಗಳೂರು ಅಡಿಕೆ ಮಾರುಕಟ್ಟೆ | ಸ್ಥಿರತೆಯಿಂದ ಏರಿಕೆಯತ್ತ ಮುಖ ಮಾಡಿದ ಧಾರಣೆ

ಅಡಿಕೆ ಮಾರುಕಟ್ಟೆ ಸ್ಥಿರದಿಂದ ಏರಿಕೆಯತ್ತ ಸಾಗುತ್ತಿದೆ. ಜೂನ್-ಜುಲೈನಲ್ಲಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.

1 hour ago

ಜನಗಣತಿ 2026 – ಏಪ್ರಿಲ್ 1ರಿಂದ ಸ್ವಯಂ-ಎಣಿಕೆ ಆರಂಭ – ಸಹಕರಿಸಲು ಜಿಲ್ಲಾಧಿಕಾರಿ ಕರೆ

ಏಪ್ರಿಲ್ 1ರಿಂದ 15ರವರೆಗೆ ಸ್ವಯಂ-ಎಣಿಕೆ ಆರಂಭವಾಗಿದೆ. ಏಪ್ರಿಲ್ 16ರಿಂದ ಮನೆಗಳಿಗೆ ಭೇಟಿ ನೀಡಿ…

1 hour ago

ಹವಾಮಾನ ವರದಿ | 01-04-2026 | ಕರಾವಳಿ-ಮಲೆನಾಡಿನಲ್ಲಿ ಗುಡುಗು ಮಳೆ ಮುಂದುವರಿಕೆ – ಏ.10 ರಿಂದ ಮತ್ತೆ ಮಳೆ ಚುರುಕು ಸಾಧ್ಯತೆ!

ಏಪ್ರಿಲ್ 4ರವರೆಗೆ ಮಳೆ ಮುಂದುವರಿಯಲಿದೆ, ಬಳಿಕ ತಾತ್ಕಾಲಿಕ ಕಡಿಮೆ. ಏಪ್ರಿಲ್ 10ರಿಂದ ಮತ್ತೆ…

18 hours ago

ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!

ಏಪ್ರಿಲ್‌ನಲ್ಲಿ ಮಳೆ ಹೆಚ್ಚಾದರೂ ಬಿಸಿಲು ಕಡಿಮೆಯಾಗುವುದಿಲ್ಲ ಎಂದು IMD ಎಚ್ಚರಿಸಿದೆ. ಏಪ್ರಿಲ್–ಜೂನ್ ಅವಧಿಯಲ್ಲಿ…

1 day ago

ಗ್ಯಾಸ್ ಸಿಲಿಂಡರ್ ಕೊರತೆ ಪರಿಣಾಮ : ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆ

ಗ್ಯಾಸ್ ಸಿಲಿಂಡರ್ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆಯಾಗಿದೆ. ಕೇಂದ್ರದ ನೀತಿಗಳ…

1 day ago

ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ

ಹಸಿರು ಅಮೋನಿಯಾ ಒಪ್ಪಂದಗಳು ಭಾರತದ ಇಂಧನ ಭದ್ರತೆಗೆ ದೊಡ್ಡ ಬಲ ನೀಡಲಿವೆ. 2030ರೊಳಗೆ…

1 day ago