ಗ್ರಾಮೀಣ ಭಾಗದ ಪ್ರಕೃತಿ ಸೌಂದರ್ಯಗಳು ನೋಡಲು ಖುಷಿ. ಇಂದಿಗೂ ಸಹಜತೆಯನ್ನು ಕಾಯ್ದುಕೊಂಡಿರುವ ಜಲಪಾತಗಳು, ಪ್ರಕೃತಿ ತಾಣಗಳು ಮನಸ್ಸಿಗೆ ಹೆಚ್ಚು ಖುಷಿ ಕೊಡುತ್ತವೆ. ಇದರ ಜೊತೆಗೆ ಎಚ್ಚರಿಕೆಯೂ ಇದೆ. ಇದೇ ಸೌಂದರ್ಯುವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಕಾರಣದಿಂದ ಫೋಕಸ್..
ಮಳೆ ಬಂತೆಂದರೆ ಬಹುತೇಕ ಜಲಪಾತಗಳು ಮೈತುಂಬಿ ಹರಿಯುತ್ತದೆ. ಸುಳ್ಯ ತಾಲೂಕಿನ ಅಮರಮುಡ್ನೂರು ಗ್ರಾಮದಲ್ಲಿನ ಚಾಮಡ್ಕ ಜಲಪಾತವೂ ಮೈತುಂಬಿ ಹರಿಯಲು ಆರಂಭಿಸುತ್ತದೆ. ವಿಶೇಷವೆಂದರೆ ಬೇರೆ ಕಡೆಗಳಲ್ಲಿ ಎಲ್ಲಿಯೂ ಕಾಣ ಸಿಗದ ರೀತಿಯ ಚಾಮಡ್ಕ ಜಲಪಾತದ ನೀರು ಪಶ್ಚಿಮ ದಿಕ್ಕಿನಿಂದ ಪೂರ್ವ ಧಿಕ್ಕಿಗೆ ಹರಿಯುತ್ತದೆ. ಹಾಲ್ನೊರೆಯಂತೆ ಹರಿಯುವ ಈ ಜಲಪಾತ ಹಿರಿಯ ಸಾಹಿತಿ ಡಾ.ಶಿವರಾಮ ಕಾರಂತ ಅವರಂತಹವರಿಗೂ ಪ್ರೇರಣೆ ನೀಡಿತ್ತು.
ಬಂಟಮಲೆಯಲ್ಲಿ ಹುಟ್ಟುವ ಈ ನೀರಿನ ತೊರೆ ಚಾಮಡ್ಕ ಜಲಪಾತ ಸೃಷ್ಠಿಸಿ ಕಂದಡ್ಕದ ಕೂಟೇಲಿನಲ್ಲಿ ಪಯಸ್ವಿನಿ ನದಿ ಸೇರುತ್ತದೆ. ಸೇತುವೆ ಕೆಳಭಾಗದಲ್ಲಿ ಹರಿದು ಬರುವ ನೀರು ಎತ್ತರದಿಂದ ಕೆಳಗೆ ಬೀಳುವುದು ಮೈನವಿರೇಳಿಸುವಂತಹದ್ದು. ಅಲ್ಲಿಂದ ಕೆಳಬೀಳುವ ನೀರು ಮೂರು ತೊರೆಗಳಾಗಿ ಹರಿಯುತ್ತಾ ಹೋಗುವುದರಿಂದ ಅಪಾಯಕಾರಿಯೂ ಆಗಿರುವುದಿಲ್ಲ. ಮೇಲ್ನೋಟಕ್ಕೆ ನೀರಿನ ಪ್ರವಾಹವೇ ಕಾಣಿಸಿದರೂ ಕೆಳಗೆ ಹೋಗಿ ನಿಂತಾಗ ಅದರ ಸೊಬಗು ಖುಷಿ ಕೊಡುತ್ತದೆ.
ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ:ಕಳೆದ ಎರಡು ವಾರದ ಹಿಂದೆ ಎಡೆಬಿಡದ್ದೆ ಸುರಿಯುತ್ತಿದ್ದ ಮಳೆಯಿಂದ ಇಂದಿಗೂ ನೀರಿನ ಹರಿವಿನ ಮಟ್ಟದಲ್ಲಿ ಹೆಚ್ಚಳವಿದ್ದು ಪ್ರವಾಸಿಗರು ನಿತ್ಯವೂ ಬರುತ್ತಲೇ ಇದ್ದಾರೆ. ಪುಟ್ಟ ಮಕ್ಕಳಿಂದ ವಯೋವೃದ್ದರೂ ಆತಂಕವಿಲ್ಲದೇ ಓಡಾಡಬಹುದಾಗಿದೆ. ಸುತ್ತಮುತ್ತಲಿನ ಮನೆಗಳ ಮಕ್ಕಳು ರಜಾ ದಿನಗಳನ್ನು ಇಲ್ಲಿಯೇ ಕಳೆಯುತ್ತಿರುತ್ತಾರೆ. ಒಂದೆರಡು ಕಿರು ಚಿತ್ರಗಳೂ ಇಲ್ಲಿ ಚಿತ್ರೀಕರಣವಾಗಿದೆ. ಅಂದು ಸಾಹಿತಿ ಡಾ.ಶಿವರಾಮ ಕಾರಂತ ಅವರು ಇದೇ ಜಲಪಾತದ ಪಕ್ಕವೇ ಕುಳಿತು ಕಾದಂಬರಿಯನ್ನು ಬರೆದಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.
ಹೀಗೆ ಹೋಗಬಹುದು :ಬೆಳ್ಳಾರೆಯಿಂದ 10 ಕಿ.ಮಿ ದೂರದಲ್ಲಿರುವ ಜಲಪಾತಕ್ಕೆ ಹೋಗಲು ಸುಗಮವಾದ ದಾರಿಯಿದೆ. ಕಾಡು ಬದಿಯ ಮಾರ್ಗದಲ್ಲೇ ಬಸ್ಸು ಅಥವಾ ವಾಹನದಲ್ಲಿ ಕುಕ್ಕುಜಡ್ಕ ಮಾರ್ಗವಾಗಿ ಕಲ್ಮಡ್ಕ ರಸ್ತೆಯ ಮೂಲಕ ಪ್ರಯಾಣ ಮುಂದುವರಿಸಿದಾಗ ಡಿ.ಆರ್.ಜಿ ವೃತ್ತದಲ್ಲಿ ಬಲಬದಿಯಾಗಿ ಅರ್ಧ ಕಿ.ಮೀ ಕ್ರಮಿಸುವಷ್ಟರಲ್ಲಿ ಭೋರ್ಗರೆಯುವ ಜಲಪಾತದ ಸೊಬಗು ಕಾಣುತ್ತದೆ. ಸೇತುವೆ ಬದಿಯಲ್ಲೇ ವಾಹನ ನಿಲ್ಲಿಸಿ ನಡೆದುಕೊಂಡು ಕಾಲುದಾರಿಯಲ್ಲಿ ಕೆಳಗೆ ಇಳಿದರೆ ಜಲಪಾತದ ಸ್ಥಳಕ್ಕೆ ತಲುಪಲು ಸಾಧ್ಯ.
30.05.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಪ್ರವಾಹ ಬಾಧಿತ ಪ್ರದೇಶಗಳಿಗೆ ತೆರಳಿ ಪರಿಹಾರ…
ಪುಣೆ ಮೂಲದ ಭಾರತೀಯ ಉಷ್ಣ ವಲಯದ ಹವಾಮಾನ ಸಂಸ್ಥೆ ಅಭಿವೃದ್ಧಿ ಪಡಿಸಿದ ಭಾರತ್…
ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ವತಿಯಿಂದ ದೇಶಾದ್ಯಂತ ನಾಳೆಯಿಂದ ವಿಕಸಿತ ಕೃಷಿ ಸಂಕಲ್ಪ…
ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಭತ್ತ, ಜೋಳ, ರಾಗಿ…
ಭ್ರಷ್ಟಾಚಾರ ಕ್ಯಾನ್ಸರ್ ಗಿಂತಲೂ ಮಹಾಮಾರಿ ಕಾಯಿಲೆ ಎಂದು ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತ ಬಿ.…