ಗ್ರಾಮ ಸರಕಾರಗಳ ಬಲವರ್ಧನೆ : ಇಲಾಖೆಗಳ ನಿರ್ಲಕ್ಷ್ಯ…!

July 17, 2019
8:00 AM

ಅಧಿಕಾರ ವಿಕೇಂದ್ರೀಕರಣದ ನಂತರ ಗ್ರಾಮ ಪಂಚಾಯತ್ ಗಳು ಹೆಚ್ಚಿನ ಸ್ಥಾನ ಪಡೆದವು. ಇದು ಹಳ್ಳಿಯ ಆಡಳಿತ, ಗ್ರಾಮ ಸರಕಾರ. ಈ ಆಡಳಿತ ಬಲಗೊಳ್ಳಬೇಕು. ಇದಕ್ಕಾಗಿ ಯಾವುದೇ ಆಂದೋಲನಗಳು ಬೇಕಾಗಿಲ್ಲ, ಬದಲಾಗಿ ಕೆಲಸಗಳು ಆಗುವಂತೆ ವ್ಯವಸ್ಥೆಗಳು ಮಾಡಿದರೆ ಸಾಕು. ಈಗ ಅಧಿಕಾರಿಗಳು ಈ ವ್ಯವಸ್ಥೆಯತ್ತ ಮನಸ್ಸು ಮಾಡುತ್ತಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕಾಗಿದೆ.

Advertisement
Advertisement
Advertisement

 

Advertisement

“ಗ್ರಾಮಸಭೆಗೆ ಅಧಿಕಾರಿಗಳು ಆಗಮಿಸಲಿಲ್ಲ, ಹೀಗಾಗಿ ಗ್ರಾಮಸಭೆ ಬೇಡ”  ಮರ್ಕಂಜದಲ್ಲಿ  ಈಚೆಗೆ ಹೀಗೊಂದು ಘಟನೆ ನಡೆಯಿತು.  ಜನಪ್ರತಿನಿಧಿಗಳು ಜನರನ್ನು ಸಮಾಧಾನ ಮಾಡಿದ ಬಳಿಕ ಸಭೆ ನಡೆಯಿತು.  ಇಂತಹ ಪ್ರಸಂಗ ಹಲವು ಕಡೆಗಳಲ್ಲಿ ನಡೆಯುತ್ತದೆ. ಬಳಿಕ ಅಲ್ಲಿಗೇ ತಣ್ಣಗಾಗುತ್ತದೆ. ಯಾರೊಬ್ಬರೂ ಅಭಿಯಾನ, ಆಂದೋಲನ ಈ ಬಗ್ಗೆ ಮಾಡುವುದಿಲ್ಲ. ಅದು ಬೇಕಾಗೂ ಇಲ್ಲ. ವಾಸ್ತವವಾಗಿ ಆಗಬೇಕಾದ ಕಾರ್ಯಗಳು  ಗ್ರಾಮದಲ್ಲೇ ಇರುವುದು. ಹಲವಾರು ವರ್ಷಗಳಿಂದ ಗ್ರಾಮ ಸಭೆಯಲ್ಲಿ  ಕೈಗೊಳ್ಳುವ ನಿರ್ಣಯ ಜಾರಿಯಾಗುವುದಿಲ್ಲ, ಏಕೆಂದು ಯಾರೂ ಕೇಳುವುದಿಲ್ಲ..!.

ಆಡಳಿತ ವಿಕೇಂದ್ರೀಕರಣದ ನಂತರ  ಗ್ರಾಮಕ್ಕೆ ಹೆಚ್ಚಿನ ಮಹತ್ವ ನೀಡಿದವು. 3 ಟಯರ್ ವ್ಯವಸ್ಥೆಯಲ್ಲಿ ಹಳ್ಳಿಗೆ ಆಡಳಿತ ಬಂದಿದೆ. ಈ ಸರಕಾರದ ಅಂದರೆ ಗ್ರಾಮ ಪಂಚಾಯತ್ ಆಡಳಿತ ಬಲವರ್ಧನೆ ಮಾತ್ರಾ ಇದುವರೆಗೆ ಆಗಿಲ್ಲ. ಗ್ರಾಮದಲ್ಲಿ ವಾರ್ಡ್ ಗಳು, ಈ ವಾರ್ಡ್ ಗಳಲ್ಲಿ  ಸಭೆ ಜನಪ್ರತಿನಿಧಿಗಳು, ಪಂಚಾಯತ್ ಆಡಳಿತ ಗ್ರಾಮದಿಂದ ಒಳಗೆ ವಾರ್ಡ್ ಗೆ ಅಂದರೆ ಹಳ್ಳಿಗೆ ಬರುತ್ತದೆ. ಅಲ್ಲಿನ ಸಮಸ್ಯೆಯನ್ನು ಜನರಿದ ಕೇಳಿ ಬರೆದುಕೊಂಡು ಮಂಡನೆಯಾಗಿ ನಂತರ ಗ್ರಾಮಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗುತ್ತದೆ. ನಂತರ ಅನುದಾನಗಳು ಲಭ್ಯವಾಗಿ ಜನರಿಗೆ ಬೇಕಾದ ಸೌಲಭ್ಯ ಸಿಗುತ್ತದೆ.

Advertisement

ಆದರೆ ಹಲವಾರು ವರ್ಷಗಳಿಂದ ವಾರ್ಡ್ ಸಭೆಗಳಲ್ಲಿ  ನಡೆಯುವ ಚರ್ಚೆ ಜಾರಿಯಾಗುವುದೇ ಇಲ್ಲ. ಪ್ರತೀ ವರ್ಷ ಸಮಸ್ಯೆ ಕೇಳುತ್ತಾರೆ ಪರಿವಾರವಾಗುವುದಿಲ್ಲ,  ಹೀಗಾಗಿ ಗ್ರಾಮ ಸರಕಾದರ ಮೇಲೆ ವಿಶ್ವಾಸ ಕಡಿಮೆಯಾಗುತ್ತಿದೆ. ಬರುವ ಯೋಜನೆಗಳೂ  ಯಾರೋ ತಮಗೆ ಬೇಕಾದವರಿಗೆ ಮಾತ್ರಾ ಸಿಗುತ್ತದೆ ಎಂಬುದೂ ಇನ್ನೊಂದು ಆರೋಪ. ಈ ಎಲ್ಲಾ ಕಾರಣದಿಂದ   ಹಳ್ಳಿಯ ಆಡಳಿತದ ಮೇಲೆ ವಿಶ್ವಾಸ ಕಡಿಮೆಯಾಗಿ  ದಿಲ್ಲಿ ಆಡಳಿತದ ಮೇಲೆ ನಂಬಿಕೆ ಹೆಚ್ಚಾಗಿ ಅಲ್ಲೂ ಭರವಸೆ ಈಡೇರದೇ ಇದ್ದಾಗ ನಿರಾಸೆಗಳಾಗುತ್ತದೆ. ವ್ಯವಸ್ಥೆಯನ್ನು ಶಫಿಸುವ ಹಂತಕ್ಕೆ ಬರುತ್ತದೆ. ಈಗ ಆಗಬೇಕಿರುವುದು  ಗ್ರಾಮನ ಸರಕಾರದ ಬಲವರ್ಧನೆ.  ಲಭ್ಯ ಅನುದಾನಗಳು ಬಳಕೆ. ರಚನಾತ್ಮಕವಾದ ಸಲಹೆ, ಅಭಿಪ್ರಾಯ.

ಈಗ ಒಂದರ್ಥದಲ್ಲಿ ಆಡಳಿತವು ಹಳ್ಳಿಗೆ ಬಂದಿದೆ. ಕೇಂದ್ರ ಸರಕಾರದಿಂದ 14 ನೇ ಹಣಕಾಸು ಯೋಜನೆಯಲ್ಲಿ ಸಾಕಷ್ಟು ಅನುದಾನಗಳು ಲಭ್ಯವಾಗುತ್ತದೆ. ಇದಕ್ಕಾಗಿ ಆಯೋಗ ಸಾಕಷ್ಟು ವ್ಯವಸ್ಥೆ ಮಾಡುತ್ತದೆ. ಇದರ ಜೊತೆಗೆ ರಾಜ್ಯ ಸರಕಾರದಿಂದಲೂ ಅನುದಾನ ಲಭ್ಯವಾಗುತ್ತದೆ. ಇದರ  ಸಮರ್ಥ ಬಳಕೆ ಮಾತ್ರಾ ಆಗುತ್ತಿಲ್ಲ. 14 ನೇ ಹಣಕಾಸು ಮೂಲಕ ರಾಜ್ಯಕ್ಕೆ ಬಂದ ಅನುದಾನ ಜಿಲ್ಲೆಗೆ ಬಂದು ಬಳಿಕ ಗ್ರಾಮಕ್ಕೆ ಲಭ್ಯವಾಗುತ್ತದೆ. ಗ್ರಾಮ ಪಂಚಾಯತ್ ಆಡಳಿತವು ವಾರ್ಡ್ ಗಳಿಂದ ಬಂದ ಮಾಹಿತಿಯನುಸಾರ ಕೆಲಸ ಕಾರ್ಯಗಳ ಅನುಷ್ಠಾನ ಮಾಡಬೇಕಿದೆ. ಆದರೆ ಇಲ್ಲಿ ಹಿಡಿತ ಸಾಧಿಸಿರುವ ಗ್ರಾ ಪಂ ಸದಸ್ಯ ತನಗೆ ಬೇಕಾದಲ್ಲಿಗೆ ಅನುದಾನ ಇರಿಸಿಕೊಂಡು ಸುಮ್ಮನಿರುತ್ತಾರೆ.

Advertisement

ಅಧಿಕಾರಿಗಳು ಕೂಡಾ ಗ್ರಾಮ ಸರಕಾರದ ಕಡೆಗೆ ಹೆಚ್ಚಿನ ಗಮನ ನೀಡದೇ ಇರುವುದು ಇನ್ನೊಂದು ಸಮಸ್ಯೆಯಾಗಿದೆ. ಗ್ರಾಮ ಸಭೆಗಳಿಗೆ ಅಧಿಕಾರಿಗಳು ಲಭ್ಯವಿರುವುದು , ಜನರ ಸಮಸ್ಯೆಗೆ ಬಗೆಹರಿಸುವುದು ಮಾಡಿದರೆ ಗ್ರಾಮ ಪಂಚಾಯತ್ ಮೇಲೆ ವಿಶ್ವಾಸ ಹೆಚ್ಚಾಗಿ ಹಳ್ಳಿಯ ಆಡಳಿತ ಬಲಗೊಳ್ಳುತ್ತದೆ. ಇದಕ್ಕಾಗಿ ಕ್ರಮ ಆಗಬೇಕು. ಪಂಚಾಯತ್ ರಾಜ್ ನಿಯಮಗಳು ಅತ್ಯಂತ ಸ್ಪಷ್ಟವಾಗಿ ಹಾಗೂ ರಚನಾತ್ಮಕ ಸಂಗತಿಗಳನ್ನು ಹೇಳುತ್ತವೆ. ಇದರ ಅನುಷ್ಠಾನವಾದರೆ ಗ್ರಾಮ ಸಭೆಗೆ ಅಧಿಕಾರಿಗಳು ಬರಲಿಲ್ಲ ಎಂಬ ಕೂಗು ದೂರವಾಗುತ್ತದೆ. ಈ ಬಗ್ಗೆ ಗಮನಹರಿಸಬೇಕಿದೆ. ಗ್ರಾಮ ಸಭೆಯೂ ಅತ್ಯಂತ ಮಹತ್ವ ವಹಿಸುತ್ತದೆ.

 

Advertisement

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಲಸು ಮೌಲ್ಯವರ್ಧನೆಗೆ ನೆರವು | ಹಲಸು ಉದ್ಯಮದ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡ ಒಡಿಶಾ |
December 21, 2024
6:50 AM
by: The Rural Mirror ಸುದ್ದಿಜಾಲ
ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಿಸಿದ ಸರ್ಕಾರ | 422 ರೂಪಾಯಿ ಏರಿಕೆ |
December 21, 2024
6:32 AM
by: The Rural Mirror ಸುದ್ದಿಜಾಲ
ಗದಗದಲ್ಲಿ ಬ್ಯಾಡಗಿ ಮೆಣಸಿನಕಾಯಿ ಬೆಳೆಯ ಕ್ಷೇತ್ರೋತ್ಸವ
December 20, 2024
9:37 PM
by: The Rural Mirror ಸುದ್ದಿಜಾಲ
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ | ಕೋಲಾರದಲ್ಲಿ 9 ಖರೀದಿ ಕೇಂದ್ರ ಆರಂಭ
December 20, 2024
7:02 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror